ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾತ್ರಾರ್ಥಿಗಳು ಗಮನಿಸಬೇಕಾದ ಧರ್ಮಸ್ಥಳ ದೇಗುಲದ ಮಹತ್ವದ ಪ್ರಕಟಣೆ

ಮಹಾಶಿವರಾತ್ರಿಯ ವೇಳೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳು ಗಮನಿಸಬೇಕಾದ ಮಹತ್ವದ ಪ್ರಕಟಣೆಯನ್ನು ದೇಗುಲದ ಆಡಳಿತ ಮಂಡಳಿ ಹೊರಡಿಸಿದೆ.

By Balaraj Tantry
|
Google Oneindia Kannada News

Recommended Video

ಮಹಾ ಶಿವರಾತ್ರಿ, ಫೆಬ್ರವರಿ 13 2018 : ಧರ್ಮಸ್ಥಳದಲ್ಲಿ ನೀವು ಪಾಲಿಸಬೇಕಾದ ನಿಯಮಗಳು | Oneindia Kannada

ಧರ್ಮಸ್ಥಳ, ಫೆ 10: ಮಹಾಶಿವರಾತ್ರಿಯ ವೇಳೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳು ಗಮನಿಸಬೇಕಾದ ಮಹತ್ವದ ಪ್ರಕಟಣೆಯನ್ನು ದೇಗುಲದ ಆಡಳಿತ ಮಂಡಳಿ ಹೊರಡಿಸಿದೆ.

ಫೆಬ್ರವರಿ ಏಳರಂದು ದೇಗುಲದ ಅಧಿಕೃತ ಫೇಸ್ ಬುಕ್ ಅಕೌಂಟಿನ ಮೂಲಕ ಭಕ್ತಾದಿಗಳಲ್ಲಿ ದೇವಾಲಯ ಮನವಿ ಮಾಡಿದ್ದು, ಪ್ರಮುಖವಾಗಿ ಪಾದಯಾತ್ರೆಯ ಮೂಲಕ ಧರ್ಮಸ್ಥಳ ದೇಗುಲಕ್ಕೆ ಬರುವ ಯಾತ್ರಾರ್ಥಿಗಳು ಈ ಪ್ರಕಟಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ. (ರೈ ಧರ್ಮಸ್ಥಳಕ್ಕೆ ಆಣೆ-ಪ್ರಮಾಣಕ್ಕೆ ಬರಲಿ, ಬಂಟ್ವಾಳ ಸವಾಲ್)

ಮಹಾ ಶಿವರಾತ್ರಿಯಂದು (ಫೆ 13) ಮಂಜುನಾಥಸ್ವಾಮಿಯ ದರ್ಶನಕ್ಕಾಗಿ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭಕ್ತರು ಬರುವ ಪರಿಪಾಠ ಹಿಂದಿನಿಂದಲೂ ಇದೆ.

ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ಬರುವ ಯಾತ್ರಾರ್ಥಿಗಳು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಬಾರದು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಾದಯಾತ್ರೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಬಿಸಿಲಿನ ತಾಪ ಹೆಚ್ಚಾಗದೇ ಇರಲು ಕಪ್ಪುಬಟ್ಟೆ ಧರಿಸದೇ ಇರುವುದು ವೈಜ್ಞಾನಿಕವಾಗಿ ಸೂಕ್ತ.

ಮಕ್ಕಳು, ಹೆಂಗಸರಿಗೆ ವಸತಿ ಮತ್ತು ಇತರ ಸೌಲಭ್ಯಗಳನ್ನು ನೀಡಲು ತೊಂದರೆಯಾಗಬಹುದು, ಭಕ್ತರು ಸಹಕರಿಸಬೇಕೆಂದು ಎಂದು ಧರ್ಮಸ್ಥಳ ದೇವಾಲಯ, ಸಾಲು ಸಾಲು ರಜೆಯ ವೇಳೆ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದ್ದೂ ಉಂಟು. ಕಪ್ಪುಬಟ್ಟೆಯ ಜೊತೆ, ಯಾತ್ರಾರ್ಥಿಗಳಿಗೆ, ಧರ್ಮಸ್ಥಳ ದೇವಾಲಯ ಇತರ ಒಂಬತ್ತು ಸಲಹೆ/ಮನವಿಯನ್ನು ಮಾಡಿದೆ. ಮುಂದೆ ಓದಿ..

ಕಪ್ಪುಬಟ್ಟೆ ಧರಿಸಿ ಬರಬೇಡಿ: ಧರ್ಮಸ್ಥಳದ ಮಹತ್ವದ ಪ್ರಕಟಣೆ

ಕಪ್ಪುಬಟ್ಟೆ ಧರಿಸಿ ಬರಬೇಡಿ: ಧರ್ಮಸ್ಥಳದ ಮಹತ್ವದ ಪ್ರಕಟಣೆ

1. ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುವಾಗ ಕಪ್ಪುಬಣ್ಣದ ವಸ್ತ್ರ ಹೊರತು ಪಡಿಸಿ ಬೇರೆ ಬಣ್ಣದ ವಸ್ತ್ರ ಧರಿಸುವುದು ಮತ್ತು ಸಾಲಾಗಿ ಬರುವುದು.

2. ಅಸಭ್ಯ ಉಡುಪನ್ನು ಧರಿಸಿಕೊಂಡು ಬರಬಾರದು. ( ಸೀರೆ, ಚೂಡಿದಾರ್ ಧರಿಸಿಕೊಂಡು ಹೋಗುವುದು ಸೂಕ್ತ)

ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಮಾಡಬೇಡಿ

ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಮಾಡಬೇಡಿ

3. ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.

4. ಧೂಮಪಾನ ಮಾಡಬಾರದು.

ಉಡುವ ಬಟ್ಟೆಯ ಬೆನ್ನಿನಲ್ಲಿ ಪ್ರತಿಫಲಕ ಇರಲೇಬೇಕು

ಉಡುವ ಬಟ್ಟೆಯ ಬೆನ್ನಿನಲ್ಲಿ ಪ್ರತಿಫಲಕ ಇರಲೇಬೇಕು

5. ತಂಗುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಸ್ವಯಂಸ್ಪೂರ್ತಿಯಿಂದ ಸ್ಥಳವನ್ನು ಸ್ವಚ್ಚ ಮಾಡಿರಿ.

6. ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ /ತೋಳಿನಲ್ಲಿ/ ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.

ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ

ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ

7. ದೃಢ ಸಂಕಲ್ಪದೊಂದಿಗೆ ಪಾದಯಾತ್ರೆ ಮಾಡಬೇಕು.

8. ಪಾದಯಾತ್ರೆಯಲ್ಲಿ ಬರುವಾಗ ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.

ನೇತ್ರಾವತಿ ಸ್ನಾನಕ್ಕೆ ತೆರಳುವವರು ಪ್ರಕಟಣೆಗಳನ್ನು ಚಾಚೂತಪ್ಪದೆ ಪಾಲಿಸಿ

ನೇತ್ರಾವತಿ ಸ್ನಾನಕ್ಕೆ ತೆರಳುವವರು ಪ್ರಕಟಣೆಗಳನ್ನು ಚಾಚೂತಪ್ಪದೆ ಪಾಲಿಸಿ

9. ಊಟ, ತಿಂಡಿ ಮಿತವಾಗಿ ಬಳಸುವುದು.

10. ಪ್ಲಾಸ್ಟಿಕ್ ವಸ್ತುಗಳನ್ನು ಮಿತವಾಗಿ ಬಳಸಿ ಮತ್ತು ಎಲ್ಲೆಂದರಲ್ಲಿ ಬಿಸಾಡಬಾರದು.

ಇದರ ಜೊತೆಗೆ ನೇತ್ರಾವತಿ ಪುಣ್ಯಸ್ನಾನಕ್ಕೆ ತೆರಳುವವರು ಅಲ್ಲಿ ಮೈಕ್ ನಲ್ಲಿ ಹೇಳುವ ಪ್ರಕಟಣೆಗಳನ್ನು ಚಾಚೂತಪ್ಪದೆ ಪಾಲಿಸಲು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಮನವಿ ಮಾಡಿದೆ.

English summary
On eve of Maha Shivaratri on Tuesday (Feb 13), Dharmasthala Manjunatha Swamy temple important appeal and instructions to devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X