ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದಂದು ಸರಕಾರಕ್ಕೆ 3 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ

|
Google Oneindia Kannada News

ಬೆಂಗಳೂರು, ನ 1: 64ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಶೋಭಾ ಕರಂದ್ಲಾಜೆಯವರು ಮೂರು ಬೇಡಿಕೆಯಿನ್ನಿಟ್ಟಿದ್ದಾರೆ.

"ಇವತ್ತು ನಾವು ಕನ್ನಡ ರಾಜ್ಯೋತ್ಸವದ ಸಂಭ್ರಮಲ್ಲಿದ್ದೇವೆ. ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮ ಪಡುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ನನ್ನ ಬೇಡಿಕೆಯಿದೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.

ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶ

Eve Of Kannada Rajyotsava MP Shobha Karandlaje Three Demand To State Government

ಶೋಭಾ, ಸರಕಾರಕ್ಕೆ ಇಟ್ಟ ಮೂರು ಬೇಡಿಕೆ ಹೀಗಿದೆ:

1. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ತಹಸೀಲ್ದಾರ್, ದಫೇದಾರ್ ಇನ್ನಿತರ ಎಲ್ಲ ಪರ್ಷಿಯನ್ ಭಾಷೆಯ ಪದಬಳಕೆಯ ಬದಲಾಗಿ ಕನ್ನಡ ಪದಗಳ ಬಳಕೆಯನ್ನು ಮಾಡಬೇಕು.

2. ಬ್ರಿಟಿಷ್ ಹೆಸರುಗಳಿರುವ ಬೆಂಗಳೂರಿನ ರಸ್ತೆ ಹಾಗೂ ವೃತ್ತಗಳಿಗೆ ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದ, ಕನ್ನಡ ಭಾಷೆ, ನಾಡು-ನುಡಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ ಮಹಾನುಭಾವರ ಹೆಸರನ್ನು ಇಟ್ಟು ಗೌರವ ಸೂಚಿಸಬೇಕು.
3. ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವಂತಾಗಬೇಕು, ರಾಜ್ಯದ ಎಲ್ಲ ಶಾಲೆಗಳಲ್ಲಿ, ಸಿ ಬಿ ಎಸ್ ಸಿ/ಐ ಸಿ ಎಸ್ ಸಿ ಶಾಲೆಗಳನ್ನು ಒಳಪಡಿಸಿ ಕಡ್ಡಾಯವಾಗಿ ಕನ್ನಡ ಒಂದು ಕಲಿಕೆಯ ವಿಷಯವಾಗಬೇಕು.

English summary
Eve Of Kannada Rajyotsava Udupi - Chikkamagaluru MP Shobha Karandlaje Three Demand To State Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X