ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತೇಜಸ್ವಿ ಎಂದೆಂದಿಗೂ' ಪ್ರಬಂಧ ಸ್ಪರ್ಧೆ ಆಯೋಜನೆ

ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸ್ಮರಣೆಗಾಗಿ ಪ್ರಬಂಧ ಸ್ಪರ್ಧೆ ಆಯೋಜನೆ. ಫೇಸ್ ಬುಕ್ ನಲ್ಲಿ ತೇಜಸ್ವಿ ಪುಟ ನಿರ್ಮಾತೃಗಳಿಂದ ಪ್ರಬಂಧ ಆಹ್ವಾನ. ಪ್ರಬಂಧ ಕಳುಹಿಸಲು ಸೆಪ್ಟಂಬರ್ 2 ಕೊನೆಯ ದಿನ.

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಖ್ಯಾತ ಪರಿಸರ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಈ ಬಾರಿಯ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿರುವ ತೇಜಸ್ವಿ ಫೇಸ್ ಬುಕ್ ಪುಟದ (fb.com/PCTejaswi) ನಿರ್ಮಾತೃಗಳು, 'ತೇಜಸ್ವಿ ಎಂದೆಂದಿಗೂ' ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಾರೆ.

ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ

ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳು ಹಾಗೂ ಮಾತುಗಳು ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರುತ್ತವೆ. ಅದು ಕಾವೇರಿ ಅಥವಾ ಇನ್ಯಾವುದೇ ನದಿ ನೀರಿನ ಹಂಚಿಕೆ ವಿಷಯದ ಬಗ್ಗೆಯಾಗಿರಬಹುದು, ಕನ್ನಡ ಭಾಷೆ, ಕರ್ನಾಟಕ, ಪರಿಸರ ಕಾಳಜಿ ಸೇರಿದಂತೆ ಇನ್ನು ಹತ್ತಾರು ವಿಚಾರಗಳನ್ನು ಅವರ ಪ್ರತಿಯೊಂದು ಪುಸ್ತಕಗಳಿಂದ ಪಡೆದು ಇಂದಿನ ಪರಿಸ್ಥಿತಿಯೊಂದಿಗೆ ತಾಳೆ ಹಾಕಬಹುದು. ಇಷ್ಟೇ ಅಲ್ಲದೆ ಅವರ ಕಾದಂಬರಿಗಳಲ್ಲಿ ಬರುವ ಹಲವಾರು ಪಾತ್ರಗಳು ಮತ್ತು ಸನ್ನಿವೇಶಗಳನ್ನ ಪ್ರಸ್ತುತ ಕಾಲಕ್ಕೆ ಹೋಲಿಕೆ ಮಾಡಬಹುದಾಗಿದೆ.

Essay writing competition on Poornachandra Tejaswi

ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಇಂಥ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಒಂದು ಪ್ರಬಂದ ಬರೆದು ಕಳುಹಿಸುವಂತೆ ಕೋರಲಾಗಿದೆ.

ಒಳ್ಳೆಯ ಬರಹಗಳಿಗೆ ಬಹುಮಾನವಿದೆ. ಪ್ರಬಂಧಗಳನ್ನು ಕಳುಹಿಸುವ ವಿಧಾನ ಮತ್ತು ನಿಯಮಗಳು ಹೀಗಿವೆ:

1. ಪ್ರಬಂದವು ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಇರಬೇಕು. ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸುವ ಬರಹಗಳನ್ನು ಮಾತ್ರ ಪರಿಗಣಿಸಲಾಗುವುದು. ವಿಭಿನ್ನವಾದ ಬರಹಗಳಿಗೆ ಮೊದಲ ಆದ್ಯತೆ.

2. ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಮಾತ್ರ ಪ್ರಬಂಧ ಬರೆದು ಕಳುಹಿಸಲು ಅವಕಾಶವಿದೆ.

3. ಒಬ್ಬರಿಗೆ ಒಂದು ಪ್ರಬಂಧ ಕಳುಹಿಸಲು ಮಾತ್ರ ಅವಕಾಶವಿದೆ‌.

4. ಪ್ರಬಂಧ ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ತಪ್ಪದೆ ಕಳುಹಿಸಿ. ಜೊತೆಗೆ ಪ್ರಬಂಧ ಬರೆಯಲು ಬಳಸಿಕೊಂಡಿರುವ ತೇಜಸ್ವಿಯವರ ಪುಸ್ತಕದ ಹೆಸರನ್ನು ಸ್ಪಷ್ಟವಾಗಿ ತಿಳಿಸಬೇಕು.

5. ಪ್ರಬಂಧಗಳನ್ನು ನಮಗೆ ಕಳುಹಿಸಲು ಕೊನೆಯ ದಿನಾಂಕ 02-09-2017 (ಶನಿವಾರ)

6. ಪ್ರಬಂಧಗಳನ್ನು [email protected] ಇಲ್ಲಿಗೆ ಇ-ಮೇಲ್ ಮಾಡಬಹುದು ಅಥವಾ 9743159250 / 9980296974 ನಂಬರಿಗೆ ವಾಟ್ಸಪ್ ಮಾಡಬಹುದು.

ಹೆಚ್ಚಿನ ಮಾಹಿತಿಗೆ : 9743159250 / 9980296974 ಸಂಪರ್ಕಿಸಬಹುದು.

English summary
Renowned writer K.P. Poornachandra Tejaswi's facebook page creators has organised an essay writing competition on the occasion of Tejaswi's birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X