ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಳಿಗೊಂದು ನಂಬಿಕೆ: ಶಾಲಾ ಮಕ್ಕಳಿಗಾಗಿ ಒಂದು ವಿಶಿಷ್ಟ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಸಮಾಜ ಸೇವಕರ ಸಮಿತಿಯು ಹಲವು ವರ್ಷಗಳಿಂದ ಡಿವಿಜಿಯವರ ಸಾಹಿತ್ಯ ಪ್ರಚಾರಕ್ಕೆ ಸಂಬಂಧಪಟ್ಟಂತೆ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ.

ಈ ವರ್ಷವೂ ಸಹ ಅಂತಹುದೇ ಒಂದು ಕ್ರಿಯಾತ್ಮಕ ಸ್ಪರ್ಧೆಯನ್ನು ಕರ್ನಾಟಕದಲ್ಲಿರುವ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗುತ್ತಿದೆ.

ಸ್ಪರ್ಧೆಯ ಉದ್ದೇಶ ಡಿವಿಜಿಯವರ ಸಾಹಿತ್ಯವನ್ನು ಯುವಜನಾಂಗಕ್ಕೆ ಪರಿಚಯಿಸುವುದು ಮತ್ತು ಅವರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು.

Essay Competition on DV Gundappa for School Students

ಸ್ಪರ್ಧೆಯ ನಿಯಮಗಳು ಹೀಗಿರುತ್ತವೆ.

1. ತರಗತಿ 5 ರಿಂದ ತರಗತಿ 10 ರವರೆಗಿನ ಎಲ್ಲ ಮಕ್ಕಳು ಭಾಗವಹಿಸಬಹುದು.
2. ಡಿವಿಜಿಯವರ ಸಮಗ್ರ ಸಾಹಿತ್ಯದ ಪರಿಚಯವನ್ನು A4 ಸೈಜಿನ 4 ಪುಟಗಳು ಮೀರದಂತೆ ಬರೆಯುವುದು.
3. ಈ ಲೇಖನ ಬರೆಯಲು ಸಹಾಯ ಪಡೆದುಕೊಂಡ ಪುಸ್ತಕಗಳ ಅಥವಾ ಗುರು ಹಿರಿಯರ ಹೆಸರನ್ನು ನಮೂದಿಸುವುದನ್ನು ಮರೆಯಬೇಡಿ. ಇದು ತುಂಬಾ ಅವಶ್ಯಕ.
4. ನಿಮ್ಮ ಲೇಖನವನ್ನು 15 ದಿನಗಳ ಒಳಗೆ ಕೆಳಗಿನ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಕಳುಹಿಸತಕ್ಕದ್ದು.
5. ನಿಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಖಡ್ಡಾಯವಾಗಿ ನಮೂದಿಸಿ.
ಲೇಖನ ತಲುಪಬೇಕಾದ ವಿಳಾಸ: ಸಮಾಜ ಸೇವಕರ ಸಮಿತಿ, 171, ಸುಬ್ಬ ರಾಮ್ ಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ, ಬಸವನಗುಡಿ -560004
ಬಹುಮಾನದ ವಿವರಗಳು: ಭಾಗವಹಿಸುವ ಎಲ್ಲ ಅರ್ಹ ಲೇಖನಗಳಿಗೆ ಡಿವಿಜಿಯವರ "ಬಾಳಿಗೊಂದು ನಂಬಿಕೆ" ಪುಸ್ತಕವನ್ನು ನೀಡಲಾಗುವುದು. ಉತ್ತಮವಾದ ಐದು ಬರಹಗಳಿಗೆ ಕನ್ನಡದ ವಿಶಿಷ್ಟ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

English summary
Samaja Sevakara Samithi Organising Essay competition on DV Gundappa for Karnataka school students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X