• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ರಾಯಣ್ಣ ಬ್ರಿಗೇಡ್ ದನಿಯೆತ್ತಿದ ಈಶ್ವರಪ್ಪ

|

ಬೆಂಗಳೂರು, ಏಪ್ರಿಲ್ 17: ಬಿಜೆಪಿಯಲ್ಲಿ ಈಶ್ವರಪ್ಪನವರ ಬಂಡಾಯ ಮತ್ತೆ ಭುಗಿಲೆದ್ದಿದೆ. ಕೆಲ ದಿನಗಳ ಕಾಲ ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತಣ್ಣಗಿದ್ದ ತಮ್ಮ ರಾಯಣ್ಣ ಬ್ರಿಗೇಡ್ ಗೆ ಮತ್ತೆ ಚಾಲನೆ ನೀಡಿದ್ದಾರೆ.

ಶೀಘ್ರದಲ್ಲೇ ರಾಯಣ್ಣ ಯುವ ಬ್ರಿಗೇಡ್ ಹೆಸರಿನಲ್ಲಿ ದೊಡ್ಡ ಮಟ್ಟದ ಬಹಿರಂಗ ಸಮ್ಮೇಳನ ನಡೆಸಲಿದೆ ಎಂದು ಈಶ್ವರಪ್ಪ ಅವರ ಆಪ್ತ ಬಣ ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಡ್ಡು ಹೊಡೆಯಲೆಂದೇ ದೊಡ್ಡ ಪ್ರಮಾಣದಲ್ಲಿ ಈ ಬ್ರಿಗೇಡ್ ಅನ್ನು ರೀ ಲಾಂಚ್ ಮಾಡಲು ಈಶ್ವರಪ್ಪ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಏ. 19ರಂದು ರಾಯಣ್ಣ ಯುವ ಬ್ರಿಗೇಡ್ ನ ಪದಾಧಿಕಾರಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಸರಿಯಾದ ಸ್ಥಾನ ಮಾನ ಸಿಗದೇ ಅಸಮಾಧಾನಗೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ರಾಯಣ್ಣ ಯುವ ಬ್ರಿಗೇಡ್ ನ ಪದಾಧಿಕಾರಿಗಳ ಪಟ್ಟಿಯಲ್ಲಿ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ.

ಒಟ್ಟಾರೆಯಾಗಿ, ಬಿಜೆಪಿಯ ನಾಯಕರಿಗೆ ಈಗ ಹೊಸ ಸವಾಲು ಎಸೆಯಲು ಈಶ್ವರಪ್ಪ ನಿರ್ಧರಿಸಿದ್ದು, ಇದು ಮುಂದೆ ಅವರಿಗೆ ರಾಜಕೀಯ ಅನುಕೂಲವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

English summary
State BJP leader Eeshwarappa plans to lauch his Rayanna Brigade activities again, this time it is in the name of Rayanna Yuva Brigade. After announcing the office bearer's list of Rayanna Yuva Brigade on April 19, 2017, Eeshwarappa plans for a big rally to show his strength.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X