ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿಗೆ ಬೇಡಿಕೆ ಇಟ್ಟ ಎಸ್ಕಾಂಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 09 : ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಹೆಚ್ಚಳ ಮಾಡಬೇಕು ಎಂದು ಕೆಇಆರ್‌ಸಿಗೆ ಮನವಿ ಮಾಡಿವೆ. ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲು 2019ರ ಮಾರ್ಚ್ ತನಕ ಕಾಲಾವಕಾಶವಿದೆ.

ಪ್ರತಿ ಯೂನಿಟ್‌ಗೆ 1 ರಿಂದ 1.65 ರೂ. ದರ ಹೆಚ್ಚಳ ಮಾಡಲು ಅವಕಾಶ ನೀಡಬೇಕು ಎಂದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಮನವಿ ಮಾಡಲಾಗಿದೆ.

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

2018-19ರಲ್ಲಿ ಪ್ರತಿ ಯೂನಿಟ್‌ಗೆ 82 ಪೈಸೆಯಿಂದ 1.62 ರೂ. ಹೆಚ್ಚಳ ಮಾಡುವಂತೆ ಎಸ್ಕಾಂಗಳು ಮನವಿ ಮಾಡಿದ್ದವು. ವಿವಿಧ ಭಾಗಗಳಿಗೆ ಅನ್ವಯವಾಗುವಂತೆ 20 ರಿಂದ 60 ಪೈಸೆಯೆಷ್ಟು ದರ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು.

ರಾಜ್ಯದಲ್ಲಿ ಹೊಸ ದಾಖಲೆ ತಲುಪಿದ ವಿದ್ಯುತ್ ಬೇಡಿಕೆರಾಜ್ಯದಲ್ಲಿ ಹೊಸ ದಾಖಲೆ ತಲುಪಿದ ವಿದ್ಯುತ್ ಬೇಡಿಕೆ

Escoms seeks hike in power tariff in 2019-20

ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ದರ ಹೆಚ್ಚಿಸಲು ಕೋರಿಕೆ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನವಾಗಿತ್ತು. ಈಗ ಪ್ರಸ್ತಾವನೆ ಬಂದಿದೆ. ಆದರೆ, ಈ ಬಗ್ಗೆ ತೀರ್ಮಾನಕ್ಕೆ ಬರಲು ಮಾರ್ಚ್ ತನಕ ಕಾಲಾವಕಾಶವಿದೆ' ಎಂದು ಹೇಳಿದ್ದಾರೆ.

ರಾಜ್ಯದ ವಿದ್ಯುತ್ ಕೊರತೆ ನೀಗಿಸಿದ ಶರಾವತಿ ವಿದ್ಯುದಾಗಾರರಾಜ್ಯದ ವಿದ್ಯುತ್ ಕೊರತೆ ನೀಗಿಸಿದ ಶರಾವತಿ ವಿದ್ಯುದಾಗಾರ

2017-18ನೇ ಸಾಲಿನಲ್ಲಿ ಪ್ರತಿ ಯೂನಿಟ್‌ಗೆ 1.48 ರೂ.ನಂತೆ ದರ ಹೆಚ್ಚಿಸಲು ಎಸ್ಕಾಂಗಳು ಕೋರಿಕೆ ಸಲ್ಲಿಸಿದ್ದವು. ಆಗ ಸರಾಸರಿ 48 ಪೈಸೆ ಹೆಚ್ಚಳ ಮಾಡಲಾಗಿತ್ತು.

ಬೆಂಗಳೂರು ನಗರ ಸೇರಿದಂತೆ 8 ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ 2019-20ನೇ ಸಾಲಿನಲ್ಲಿ ಪ್ರತಿ ಯೂನಿಟ್‌ಗೆ 1 ರೂ. ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದೆ.

English summary
Escoms seek a tariff hike in the year of 2019-20. Proposal has been submitted to Karnataka Electricity Regulatory Commission for a hike of Rs 1 to 1.65 per unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X