ಬಿಬಿಸಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರ ಹೆಸರು ಸೇರ್ಪಡೆಯಾಗಿದೆ
ಬೆಂಗಳೂರು, ನವೆಂಬರ್ 23: ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರ ಹೆಸರು ಸೇರ್ಪಡೆಯಾಗಿದೆ. ತಿಮ್ಮಕ್ಕ ಅವರನ್ನು 'ವೃಕ್ಷಗಳ ಮಾತೆ' ಎಂದು ಬಣ್ಣಿಸಲಾಗಿದೆ.
105ವರ್ಷ
ವಯಸ್ಸಿನ
ತಿಮ್ಮಕ್ಕ
ಅವರು
ಕಳೆದ
80
ವರ್ಷಗಳಲ್ಲಿ
8
ಸಾವಿರಕ್ಕೂ
ಅಧಿಕ
ಗಿಡಗಳನ್ನು
ನೆಟ್ಟಿದ್ದಾರೆ.
ತನಗೆ
ಮಕ್ಕಳಾಗಲಿಲ್ಲ
ಎಂಬ
ಕೊರಗನ್ನು
ಮರಗಳನ್ನು
ಬೆಳೆಸುವ
ಮೂಲಕ
ನೀಗಿಸಿಕೊಂಡಿದ್ದಾರೆ.
ಅವರ
ಪರಿಸರ
ಕಾಳಜಿ
ಅನನ್ಯ,
ಅನುಕರಣೀಯ
ಎಂದು
ಬಣ್ಣಿಸಲಾಗಿದೆ.
[ನಮ್ಮ
ವೃಕ್ಷ
ಮಹಿಳೆ,
ನಮ್ಮ
ಹೆಮ್ಮೆ]
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದವರಾದ ತಿಮ್ಮಕ್ಕ ಅವರು ತಮ್ಮ ಪತಿ ಚಿಕ್ಕಯ್ಯ ಅವರ ಜತೆಗೂಡಿ ಗ್ರಾಮದ ಹೆದ್ದಾರಿಯಲ್ಲಿ 4 ಕಿಲೋಮೀಟರ್ ಅಂತರದಲ್ಲಿ ಒಟ್ಟು 284 ಆಲದ (ಸಾಲು ಮರಗಳು)ಮರಗಳನ್ನು ಬೆಳೆಸಿದವರು. ಈಗ ಇದರ ನಿರ್ವಹಣೆ ಸರ್ಕಾರವೇ ವಹಿಸಿಕೊಂಡಿದೆ. [
ಭಾರತದಿಂದ ನಟಿ ಸನ್ನಿ ಲಿಯೋನ್, ಮಹಾರಾಷ್ಟ್ರದ ಗೌರಿ ಚಿಂದಾರ್ಕರ್, ನೇಹಾ ಸಿಂಗ್, ತಮಿಳುನಾಡಿನ 'ಟ್ರ್ಯಾಕ್ಟರ್ ಕ್ವೀನ್ ಆಫ್ ಇಂಡಿಯಾ' ಮಲ್ಲಿಕಾ ಶ್ರೀನಿವಾಸ್ ಮುಂತಾದವರು ಬಿಬಿಸಿಯ 2016ರ ಪ್ರಭಾವಿ ಮಹಿಳೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.