ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ನಿಮಿಷದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿ

|
Google Oneindia Kannada News

ಬೆಂಗಳೂರು, ಜನವರಿ 07 : ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಅಭಿಯಾನವನ್ನು ಆರಂಭಿಸಿದೆ. ಮಿಂಚಿನ ನೋಂದಣಿ ಮೂಲಕ 5 ನಿಮಿಷದಲ್ಲಿ ಹೆಸರನ್ನು ಸೇರಿಸಬಹುದಾಗಿದೆ.

ಶಾಪಿಂಗ್ ಮಾಡುವುದಕ್ಕೆ 30 ನಿಮಿಷವಾದರೂ ಬೇಕು. ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಲು 5 ನಿಮಿಷ ಸಾಕು ಎಂದು ಚುನಾವಣಾ ಆಯೋಗ ಹೇಳಿದೆ. ಜನವರಿ 8ರ ತನಕ ಹೆಸರನ್ನು ನೋಂದಾಯಿಸಬಹುದಾಗಿದೆ.

ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ; ಒಮ್ಮೆ ಪರಿಶೀಲಿಸಿಕೊಳ್ಳಿ ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ; ಒಮ್ಮೆ ಪರಿಶೀಲಿಸಿಕೊಳ್ಳಿ

ಯುವ ಮತದಾರರು ಇದರ ಸದುಪಯೋಗ ಪಡಿಸಿಕೊಂಡು ಹೆಸರನ್ನು ನೋಂದಾಯಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಿಂಚಿನ ನೋಂದಣಿ ನಡೆಸಲಾಗುತ್ತಿದೆ. ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.

 ಯಲ್ಲಾಪುರ ಕ್ಷೇತ್ರ ಮತದಾನ: ವಿಕಲಚೇತನ ಮತದಾರರ ಟ್ರ್ಯಾಕಿಂಗ್ ಯಲ್ಲಾಪುರ ಕ್ಷೇತ್ರ ಮತದಾನ: ವಿಕಲಚೇತನ ಮತದಾರರ ಟ್ರ್ಯಾಕಿಂಗ್

Enroll Name To Voter List Till January 8

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು ಆಯೋಗ 'ಮಿಂಚಿನ ನೋಂದಣಿ' ಅಭಿಯಾನವನ್ನು ಜನವರಿ 6ರಿಂದ ಆರಂಭಿಸಿದೆ. ಜನವರಿ 8ರ ಬುಧವಾರದ ತನಕ ಹೆಸರನ್ನು ನೋಂದಣಿ ಮಾಡಲು ಅವಕಾಶವನ್ನು ನೀಡಲಾಗಿದೆ.

ಕರ್ನಾಟಕದ 15 ವಿಧಾನಸಭಾ ಉಪ ಚುನಾವಣಾ ಫಲಿತಾಂಶದ ಸಮಗ್ರ ಚಿತ್ರಣಕರ್ನಾಟಕದ 15 ವಿಧಾನಸಭಾ ಉಪ ಚುನಾವಣಾ ಫಲಿತಾಂಶದ ಸಮಗ್ರ ಚಿತ್ರಣ

ಯಾವ ದಾಖಲೆ ಬೇಕು?:
ಮಿಂಚಿನ ನೋಂದಣಿ ಮೂಲಕ ಹೆಸರು ಸೇರಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

* ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ
* ವಿಳಾಸದ ದೃಢೀಕರಣ
* ಪಾಸ್ ಪೋರ್ಟ್ ಅಳತೆಯ ಫೋಟೋ ಗಳು

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಬಯಸುವ ಜನರು nvsp.in ಅಥವಾ Voter Helpline App ಮೂಲಕ ನೋಂದಣಿ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

English summary
Election commission launched special drive to enroll name to voter list. People can enroll their name till January 8, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X