• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕೆಆರ್ ಎಸ್‌ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿದರೆ ಜಲಾಶಯಕ್ಕೆ ಸಂಚಕಾರ'

|
   ಕೆ ಆರ್ ಎಸ್ ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣವಾದರೆ ಜಲಾಶಯಕ್ಕೆ ಸಂಚಕಾರ | Oneindia Kannada

   ಬೆಂಗಳೂರು, ನವೆಂಬರ್ 17: ಕೃಷ್ಣ ರಾಜ ಸಾಗರ (ಕೆಆರ್ ಎಸ್) ಜಲಾಶಯದಲ್ಲಿ ಕಾವೇರಿ ತಾಯಿ ಪ್ರತಿಮೆ ಮತ್ತು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಉದ್ಯಾನ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಗೆ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.

   ರಾಜ್ಯ ಸರ್ಕಾರದ ತೀರ್ಮಾನ ಅವೈಜ್ಞಾನಿಕವಾಗಿದೆ. ಇದರಿಂದ ಜಲಾಶಯದ ಭದ್ರತೆಗೆ ಸಂಚಕಾರ ಉಂಟಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

   ಕೆಆರ್ಎಸ್ ಅಣೆಕಟ್ಟು ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಸುಮಾರು 1200 ಕೋಟಿ ರೂ, ವೆಚ್ಚದಲ್ಲಿ ಪಾರ್ಕ್ ಮತ್ತು ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಬಂಡವಾಳ ಹೂಡಿಕೆದಾರರ ಮೂಲಕವೇ ಪಡೆದುಕೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

   ಕೆಆರ್‌ಎಸ್‌ನಲ್ಲಿ 350 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ನಿರ್ಮಾಣ

   ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಪೆಂಗ್ವಿನ್ ಪಾರ್ಕ್, ಸುಗಂಧದ ಪಾರ್ಕ್ ಮುಂತಾದ ಥೀಮ್ ಪಾರ್ಕ್‌ಗಳು ಸಹ ಇರಲಿವೆ. ಐತಿಹಾಸಿಕ ಹಂಪಿ, ಬೇಲೂರು, ಹಳೆಬೀಡುವಿನ ಸೊಬಗನ್ನು ನೆನಪಿಸುವ ನಕಲು ಸೃಷ್ಟಿಗಳು ಸಹ ಇಲ್ಲಿ ನೆಲೆಯೂರಲಿವೆ. ಜತೆಗೆ ಹೋಟೆಲ್ ಹಾಗೂ ಫುಡ್‌ಕೋರ್ಟ್‌ಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ. ಮೇಣದ ಮ್ಯೂಸಿಯಂ ಸಹ ಇರಲಿದೆ.

   ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ

   ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ

   ಆದರೆ, ಕೆಆರ್ ಎಸ್‌ ಜಲಾಶಯದಂತಹ ಸೂಕ್ಷ್ಮ ಪ್ರದೇಶದಲ್ಲಿ ಪಾರ್ಕ ಮತ್ತು ಪ್ರತಿಮೆ ನಿರ್ಮಾಣ ಕಾರ್ಯಗಳನ್ನು ನಡೆಸುವುದು ಅಸಂಬದ್ಧ. ಸರ್ಕಾರ ಈ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯದ ವಿವಿಧ ಪ್ರಮುಖ ಎಂಜಿನಿಯರ್‌ಗಳು ಸಭೆ ನಡೆಸಿ ಒಮ್ಮತದಿಂದ ತೀರ್ಮಾನ ತೆಗೆದುಕೊಂಡಿದ್ದಾರೆ.

   ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

   ಪ್ರತಿಮೆ ನಿರ್ಮಾಣ ಅಪಾಯಕಾರಿ

   ಬೃಂದಾವನ ಗಾರ್ಡನ್‌ನಲ್ಲಿ ಪ್ರತಿಮೆ ನಿರ್ಮಾಣ ಮಾಡುವುದು ಜಲಾಶಯಕ್ಕೆ ಅಪಾಯಕಾರಿ. ಜಲಾಶಯವೇ ಭೂಕಂಪದ ವಲಯದಲ್ಲಿ ಇದೆ. ಈಗ ಅಲ್ಲಿ 120 ಅಡಿ ಎತ್ತರ ಪ್ರತಿಮೆ ನಿರ್ಮಾಣ ಮಾಡುವುದು, ಮ್ಯೂಸಿಯಂನಂತಹ ಕಟ್ಟಡ ನಿರ್ಮಾಣ ಕಾರ್ಯಗಳನ್ನು ನಡೆಸಿದರೆ ಜಲಾಶಯಕ್ಕೆ ಮಾರಕವಾಗಲಿದೆ. ಇದರಿಂದ ಭವಿಷ್ಯದಲ್ಲಿ ಭಾರಿ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

   ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧ

   ಕೃಷಿ ಚಟುವಟಿಕೆಗೆ ತೊಂದರೆ

   ಅಲ್ಲದೆ, ಜಲಾಶಯದ ಸಮೀಪದಲ್ಲಿ ಕೃಷಿ ಭೂಮಿ ಇದೆ. ಅಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣ ಮಾಡುವುದರಿಂದ ಸುಮಾರು 400 ಎಕರೆ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಲಿದೆ.

   ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶ ಸಾಕಷ್ಟು ಸೂಕ್ಷ್ಮವಾಗಿರುತ್ತವೆ. ಅಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದು ತರವಲ್ಲ. 20-25 ಕಿ.ಮೀ. ದೂರದಲ್ಲಿ ಎಲ್ಲಿಯಾದರೂ ಪಾರ್ಕ್ ನಿರ್ಮಾಣ ಮಾಡಲಿ.

   ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು?

   ಜಲಾಶಯದ ಬುಡಕ್ಕೇ ಕೊಡಲಿ

   ಕೆಆರ್ ಎಸ್ ಸುತ್ತಲೂ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅಪಾಯ ಇದೆ ಎಂದೂ ಹೇಳಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಭೆಯಲ್ಲಿ ಕೆಆರ್ ಎಸ್ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೆ, ಈಗ ಜಲಾಶಯದ ಬುಡಕ್ಕೇ ಕೊಡಲಿ ಹಾಕಲು ಮುಂದಾಗಿದ್ದಾರೆ.

   ಲಾಭವೇ ಮುಖ್ಯವಾಗಿರುತ್ತದೆ

   ಈ ಯೋಜನೆಯ ಸಂಪೂರ್ಣ ವೆಚ್ಚವು ಹೂಡಿಕೆದಾರರಿಂದಲೇ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಪಿಪಿಪಿ ಮಾದರಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ಯಾರೋ ಹೊರಗಿನವರು ಬಂದು ಈ ಯೋಜನೆಗೆ ಹಣ ಹೂಡುವಾಗ ಅವರ ಉದ್ದೇಶ ಲಾಭ ಗಳಿಕೆಯೇ ವಿನಾ ಅಣೆಕಟ್ಟು ರಕ್ಷಣೆ ಆಗಿರುವುದಿಲ್ಲ ಎಂದು ಎಂಜಿನಿಯರ್‌ಗಳು ಆರೋಪಿಸಿದ್ದಾರೆ.

   ಅಲ್ಲದೆ, ಈ ಯೋಜನೆಯಿಂದ ಮೈಸೂರಿಗೆ ನೀರು ಪೂರೈಸುವ ಮಾರ್ಗ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಯೋಜನೆ ಕೇಳಲು ಹಿತಕರವಾಗಿದ್ದರೂ, ಅದರಿಂದ ಉಂಟಾಗುವ ಪರಿಣಾಮ ತೀವ್ರ ಸ್ವರೂಪದ್ದಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

   English summary
   Engineers and Experts are expressed their unhappiness and opposed the idea of constucting Cauvery statue in KRS.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more