ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ

By Nayana
|
Google Oneindia Kannada News

ಬೆಂಗಳೂರು, ಜು.6: ಕರ್ನಾಟಕ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒತ್ತಡಕ್ಕೆ ಮಣಿದು ಸರ್ಕಾರ ಎಂಜಿನಿಯರಿಂಗ್‌ ಶುಲ್ಕ ಶೇ.10ರಷ್ಟು ಹೆಚ್ಚಳಕ್ಕೆ ಅಸ್ತು ಎಂದಿದೆ.

ಕರ್ನಾಟಕದಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಗುರುವಾರ ಖಾಸಗಿ ಕಾಲೇಜು ಹಾಗೂ ಸರ್ಕಾರದ ಮಧ್ಯೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶುಲ್ಕ ಹೆಚ್ಚಳ ಶೇ.8ರಷ್ಟು ಸಾಕಾಗಲ್ಲ ಎನ್ನುತ್ತಿವೆ ಖಾಸಗಿ ಸಂಸ್ಥೆಗಳುಶುಲ್ಕ ಹೆಚ್ಚಳ ಶೇ.8ರಷ್ಟು ಸಾಕಾಗಲ್ಲ ಎನ್ನುತ್ತಿವೆ ಖಾಸಗಿ ಸಂಸ್ಥೆಗಳು

ಸರ್ಕಾರಿಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ವಾರ್ಷಿಕ ಶುಲ್ಕ 15 ಸಾವಿರ ಹಾಗೂ ವಿವಿ ಶುಲ್ಕ ಸೇರಿ ಒಟ್ಟು 19,090 ರೂ. ಶುಲ್ಕ ನಿಗದಿಪಡಿಸಿದೆ. ಕೆಲವು ದಿನಗಳ ಹಿಂದೆ ಸರ್ಕಾರವು ಎಂಜಿನಿಯರಿಂಗ್‌ ಶುಲ್ಕವನ್ನು ಶೇ.8ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಖಾಸಗಿ ಕಾಲೇಜುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲದೆ ಉಪನ್ಯಾಸಕರಿಗೆ ಸರ್ಕಾರವೆ ಸಂಭಾವನೆ ಭರಿಸಿದರೆ ನಾವು ಶೇ.8ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ನೀಡುತ್ತೇವೆ ಎಂದು ತಿಳಿಸಿದ್ದರು.

Engineering fees hiked by 10 percent

ಈ ವಿಚಾರ ಕುರಿತಾಗಿ ಗುರುವಾರ ಸಭೆ ನಡೆದಿದ್ದು ಖಾಸಗಿ ಕಾಲೇಜುಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದೆ. ಶೇ.8ರಷ್ಟು ಮಾತ್ರ ಹೆಚ್ಚಿಸಲು ಸರ್ಕಾರ ಪಟ್ಟು ಹಿಡಿದರೆ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದವು. ಪರಿಣಾಮ ಶುಲ್ಕ ನಿಗದಿಯಾಗದೆ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೂ ಹಿನ್ನೆಡೆಯಾಗಿತ್ತು.

ಪ್ರಾಧ್ಯಾಪಕರ ವೇತನ ಶೇ.30ರಿಂದ 35ರಷ್ಟು ಶುಲ್ಕ ಹೆಚ್ಚಳವಾಗಿದೆ. ಇದನ್ನು ನಾವು ಯಾವ ಮೂಲದಿಂದ ಭರಿಸಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರವೇ ಪ್ರಾಧ್ಯಾಪಕರಿಗೆ ಪರಿಷ್ಕೃತ ವೇತನ ತುಂಬುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದರು.

English summary
The line has been drawn for hike in engineering courses fee. On Thursday, the State government and private colleges froze the hike in fees at ten per cent from the last year’s fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X