ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಕೋರ್ಸ್‌ ಶುಲ್ಕ ಶೇ 8ರಷ್ಟು ಹೆಚ್ಚಳ

By Gururaj
|
Google Oneindia Kannada News

ಬೆಂಗಳೂರು, ಜುಲೈ 10 : ಕರ್ನಾಟಕ ಸರ್ಕಾರ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಶೇ 8ರಷ್ಟು ಹೆಚ್ಚಳ ಮಾಡಿದೆ. ಶೇ 10 ರಷ್ಟು ಏರಿಕೆ ಮಾಡಲು ಕಳೆದ ವಾರ ಒತ್ತಾಯ ಕೇಳಿಬಂದಿತ್ತು.

ಉನ್ನತ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಕಾಲೇಜುಗಳ ನಡುವೆ ಸೋಮವಾರ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಶೇ 8ರಷ್ಟು ಶುಲ್ಕ ಹೆಚ್ಚಳವಾಗಲಿದೆ.

ಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳಸರ್ಕಾರಿ ಮೆಡಿಕಲ್‌ ಸೀಟು ಶುಲ್ಕ ಮೂರು ಪಟ್ಟು ಹೆಚ್ಚಳ

2018-19ನೇ ಶೈಕ್ಷಣಿಕ ವರ್ಷಕ್ಕೆ ಇಂಜಿನಿಯರಿಂಗ್ ಶುಲ್ಕ 53,460 ರೂ.ಗಳು. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದರೆ 59,400 ರೂ. ಶುಲ್ಕವಿದೆ. ಕಾಮೆಡ್-ಕೆ ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಶುಲ್ಕ 1.83 ಲಕ್ಷ ಅಥವ 1.3 ಲಕ್ಷವಾಗಲಿದೆ.

Engineering courses fee hikes 8 percent

ಕರ್ನಾಟಕ ಸರ್ಕಾರ ಶುಲ್ಕ ನಿಗದಿ ಮಾಡಲು ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸಮಿತಿ ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಬಹುದು ಎಂದು ಶಿಫಾರಸು ಮಾಡಿತ್ತು.

ಬೆಂವಿವಿ: ಎಂಜಿನಿಯರಿಂಗ್ ಪರೀಕ್ಷೆ ಮುಗಿದು 2 ದಿನದಲ್ಲೇ ರಿಸಲ್ಟ್ಬೆಂವಿವಿ: ಎಂಜಿನಿಯರಿಂಗ್ ಪರೀಕ್ಷೆ ಮುಗಿದು 2 ದಿನದಲ್ಲೇ ರಿಸಲ್ಟ್

ಆದರೆ, ಕಳೆದ ವಾರ ನಡೆದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶೇ 10ರಷ್ಟು ವೇತನ ಹೆಚ್ಚಳ ಮಾಡಲು ಖಾಸಗಿ ಕಾಲೇಜುಗಳು ಬೇಡಿಕೆ ಇಟ್ಟಿದ್ದವು. ಅಂತಿಮವಾಗಿ ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಲು ಸೋಮವಾರ ಒಪ್ಪಿಗೆ ಸಿಕ್ಕಿದೆ.

'ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ನಾವು ಒಪ್ಪಿಗೆ ನೀಡಿದ್ದೆವು. ಆದರೆ, ಸರ್ಕಾರ ಶೇ 8ರಷ್ಟು ಏರಿಕೆಗೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಶೇ 8ರಷ್ಟು ಏರಿಕೆಗೆ ಒಪ್ಪಿಗೆ ನೀಡಿದ್ದೇವೆ' ಎಂದು ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ಪಾಂಡುರಂಗ ಶೆಟ್ಟಿ ಹೇಳಿದ್ದಾರೆ.

English summary
Engineering courses fee in Karnataka hiked 8% for the 2018-19 academic year. This decision was taken after a meeting between Higher Education Department officials and private engineering college managements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X