ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್.09: ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದು, ಪ್ರಾಣ ಕಳೆದುಕೊಂಡ ಎಂಜಿನಿಯರ್ ಮೃತದೇಹ 15 ದಿನಗಳ ಬಳಿಕ ಪತ್ತೆಯಾಗಿದೆ. ಮೃತನ ಹೆಸರು ಕಿರಣ್ ಎಂದು ತಿಳಿದು ಬಂದಿದ್ದು, ಇವರು ಮಂಗಳೂರು ಸಮೀಪದ ತುಂಬೆ ಗ್ರಾಮದ ನಿವಾಸಿಯಾಗಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥದಲ್ಲಿ ಈ ಘಟನೆ ಸಂಭವಿಸಿದ್ದು, ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದರು. ಇದೀಗ ಕಿರಣ್ ಮೃತ ದೇಹ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.

Engineer body was found 15 days later

ಸೆಲ್ಫಿ ಹುಚ್ಚು : ಹೇಮಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕಸೆಲ್ಫಿ ಹುಚ್ಚು : ಹೇಮಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ

ಧಾರಾಕಾರ ಮಳೆ‌ಯಾದ ಹಿನ್ನಲೆಯಲ್ಲಿ ಭದ್ರಾ ನದಿಯಲ್ಲಿ ಕಿರಣ್ ಮೃತ ದೇಹ ‌ತೇಲಿ ಬಂದಿದೆ. ಮಂಗಳೂರಿನಿಂದ ಚಿಕ್ಕಮಗಳೂರಿಗೆ ಕಿರಣ್ ತನ್ನ‌ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿತ್ತು. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Engineer body was found 15 days later. Engineer died fallen into river while taking selfie in Ambuthirtha in chikkamagaluru district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X