ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ. ಜೆ. ಜಾರ್ಜ್ ಹಿಂದೆ ಬಿದ್ದ ಜಾರಿ ನಿರ್ದೇಶನಾಲಯ

|
Google Oneindia Kannada News

ಬೆಂಗಳೂರು, ನವೆಂಬರ್ 12 : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆ. ಜೆ. ಜಾರ್ಜ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಾರಿ ನಿರ್ದೇಶನಾಲಯ ಅವರ ವಿರುದ್ಧ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಕೆ. ಜೆ. ಜಾರ್ಜ್ವಿರುದ್ಧ ಇಡಿ ಪ್ರಕರಣ ದಾಖಲು ಮಾಡಿಕೊಂಡಿದೆ. ಮಾಜಿ ಸಚಿವರು ವಿದೇಶದಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ದೂರು ಅಧರಿಸಿ ಪ್ರಕರಣದ ದಾಖಲು ಮಾಡಲಾಗಿದೆ.

ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು

ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಕೆ. ಜೆ. ಜಾರ್ಜ್‌ ವಿರುದ್ಧ ದೂರು ನೀಡಿದ್ದರು. "ಕೆ. ಜೆ. ಜಾರ್ಜ್‌ ಸಚಿವರಾಗಿದ್ದಾಗ ದೇಶ ವಿದೇಶಗಳಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ" ಎಂಬುದು ದೂರಾಗಿತ್ತು.

ಕೆಜೆ ಜಾರ್ಜ್ ರಾಜೀನಾಮೆ ನೀಡದಿದ್ದರೆ ಜೈಲಿಗೆ: ಆಪ್ ಎಚ್ಚರಿಕೆಕೆಜೆ ಜಾರ್ಜ್ ರಾಜೀನಾಮೆ ನೀಡದಿದ್ದರೆ ಜೈಲಿಗೆ: ಆಪ್ ಎಚ್ಚರಿಕೆ

ಕೆ. ಜೆ. ಜಾರ್ಜ್ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ರಮಣ್ ಗುಪ್ತಾ ಹೇಳಿದ್ದಾರೆ. ಈಗಾಗಲೇ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಬಿಡುಗಡೆಗೊಂಡಿದ್ದಾರೆ.

ಸುದೀಪ್, ಪುನೀತ್, ಯಶ್ ಅಘೋಷಿತ ಆಸ್ತಿ, ಐಟಿ ಇಲಾಖೆ ಮರು ತನಿಖೆ ಸುದೀಪ್, ಪುನೀತ್, ಯಶ್ ಅಘೋಷಿತ ಆಸ್ತಿ, ಐಟಿ ಇಲಾಖೆ ಮರು ತನಿಖೆ

ಜಾರ್ಜ್ ವಿರುದ್ಧ ಪ್ರಕರಣ ದಾಖಲು

ಜಾರ್ಜ್ ವಿರುದ್ಧ ಪ್ರಕರಣ ದಾಖಲು

ಮಾಜಿ ಸಚಿವ, ಸರ್ವಜ್ಞ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಜೆ. ಜಾರ್ಜ್ ವಿರುದ್ಧ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಅಡಿ ದೂರು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದೆ. ವಿದೇಶದಲ್ಲಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದು ದೂರಿನ ಸಾರಾಂಶವಾಗಿದೆ.

ಲೋಕಾಯುಕ್ತದಿಂದ ಮಾಹಿತಿ

ಲೋಕಾಯುಕ್ತದಿಂದ ಮಾಹಿತಿ

ಕೆ. ಜೆ. ಜಾರ್ಜ್ 1985 ರಿಂದ 2019ರ ತನಕ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳನ್ನು ಜಾರಿ ನಿರ್ದೇಶನಾಲಯ ಪಡೆದುಕೊಂಡಿದೆ. ಇದನ್ನೇ ಮುಖ್ಯ ಆಧಾರವಾಗಿ ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನು ನಡೆಸಲಿದ್ದಾರೆ. ಇಡಿ ಕೇಳಿದ ಆಸ್ತಿಯ ದಾಖಲೆಗಳನ್ನು ಈಗಾಗಲೇ ಲೋಕಾಯುಕ್ತ ನೀಡಿದೆ.

ವಿದೇಶದಲ್ಲಿ ಆಕ್ರಮ ಆಸ್ತಿ

ವಿದೇಶದಲ್ಲಿ ಆಕ್ರಮ ಆಸ್ತಿ

ರವಿ ಕೃಷ್ಣಾರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಕೆ. ಜೆ. ಜಾರ್ಜ್‌ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ ನ್ಯೂಯಾರ್ಕ್‌ನ ಮ್ಯಾನ್ ಹಟನ್‌ಲ ಲಫಯೇಟ್ ಸ್ಟ್ರೀಟ್‌ನಲ್ಲಿ ಹೊಂದಿರುವ ಆಸ್ತಿಗಳನ್ನು ಪಟ್ಟಿ ಮಾಡಿದ್ದರು. ಜಾರ್ಜ್‌ ಪುತ್ರಿ ರೇನಿತಾ ಅಬ್ರಾಹಂ ಮತ್ತು ಅಳಿಯ ಕೆವಿನ್ ಅಬ್ರಾಹಂ ನ್ಯೂಯಾರ್ಕ್‌ನಲ್ಲಿದ್ದಾರೆ ಎಂದು ಉಲ್ಲೇಖಿಸಿದ್ದರು.

ವಿವರಣೆ ಕೊಡಲು ಸಿದ್ಧ

ವಿವರಣೆ ಕೊಡಲು ಸಿದ್ಧ

ಇಡಿ ಪ್ರಕರಣ ದಾಖಲು ಮಾಡಿರುವ ಕುರಿತು ಕೆ. ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. "ಚುನಾವಣಾ ಆಯೋಗ ಮತ್ತು ಲೋಕಾಯುಕ್ತದಲ್ಲಿ ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ಇಡಿ ಕೇಳಿದರೂ ವಿವರಣೆ ನೀಡಲು ಸಿದ್ಧ" ಎಂದು ಹೇಳಿದ್ದಾರೆ.

English summary
Enforcement Directorate probing the case against former minister and Congress leader K.J.George. ED registered the complaint under Foreign Exchange Management Act, 1999 (FEMA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X