ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲ ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸುನಿಲ್ ಕುಮಾರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಆಗಿಲ್ಲ. ಸದ್ಯ ಕೋಲ್‌ ಇಂಡಿಯಾ ಲಿಮಿಟೆಡ್ ಹಾಗೂ ಎಸ್‌ಸಿಸಿ‌ಎಲ್‌ನಿಂದ ದಿನಂಪ್ರತಿ 12-13 ರೇಕ್‌ ಕಲ್ಲಿದ್ದಲು ಪೂರೈಕೆ‌ ಆಗುತ್ತಿದ್ದು ಬೇಡಿಕೆ ಪೂರೈಸಲು ಸಾಧ್ಯವಾಗಿದೆ ಹಾಗೂ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ ಕೊರತೆಯಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಇಂಧನ ಸಚಿವ ವಿ. ಸುನೀಲ್‌ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಲಿದ್ದಲು ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಉದ್ದೇಶ ಇಟ್ಟುಕೊಂಡು ಈ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಅದೇ ವೇಳೆ ಕಲ್ಲಿದ್ದಲು ಕೊರತೆ ಉಂಟಾಗಬಹುದು ಎಂಬ ಮುಂಜಾಗ್ರತೆ ಹಿನ್ನೆಲೆಯಲ್ಲಿ ರಾಯಚೂರು ಉಷ್ಣ ವಿದ್ಯುತ್ ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಹೀಗಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಈ ಎಲ್ಲ ಗೊಂದಲಗಳಿಗೆ ಗುರುವಾರ ತೆರೆ ಎಳೆದಿದ್ದಾರೆ. ಉತ್ಪಾದನೆ ಆಗುತ್ತಿರುವ ವಿದ್ಯುತ್ ಕುರಿತು ಸುನಿಲ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುವ ವಿದ್ಯುತ್ ಎಷ್ಟು?

ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುವ ವಿದ್ಯುತ್ ಎಷ್ಟು?

""ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟಿಡ್ (ಕೆಪಿಟಿಸಿಎಲ್)ನಿಂದ ಮೂರು ವಿದ್ಯುತ್ ಸ್ಥಾವರಗಳಾದ ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದೆ. ಈ ಪೈಕಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 8 ಘಟಕಗಳಿದ್ದು‌ 1720 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಶಕ್ತಿ ಹೊಂದಿದೆ. ಬಳ್ಳಾರಿ ಸ್ಥಾವರದ 3 ಘಟಕಗಳಲ್ಲಿ 1700 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಇನ್ನು ಯರಮರಸ್ ಸ್ಥಾವರದ 2 ಘಟಕಗಳು 1600 ಮೆ.ವ್ಯಾ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿದೆ,'' ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಬೇಡಿಕೆ ಕಡಿಮೆಯಾದ್ದರಿಂದ ಉತ್ಪಾದನೆ ಕಡಿಮೆ!

ಬೇಡಿಕೆ ಕಡಿಮೆಯಾದ್ದರಿಂದ ಉತ್ಪಾದನೆ ಕಡಿಮೆ!

ಆದರೆ ವಿದ್ಯುತ್ ಬೇಡಿಕೆ ರಾಜ್ಯದಲ್ಲಿ ಸದ್ಯ ಕಡಿಮೆಯಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಈ 3 ಸ್ಥಾವರಗಳ 13 ಘಟಕಗಳ ಒಟ್ಟು ಉತ್ಪಾದನೆ 5020 ಮೆ.ವ್ಯಾಟ್. ಈ 13 ಘಟಕಗಳ ಪೈಕಿ 8 ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ಇನ್ನುಳಿದ 5 ಘಟಕಗಳು ಬೇಡಿಕೆ ಕಡಿಮೆ ಇರುವ ಕಾರಣದಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಲೋಡ್ ಶೆಡ್ಡಿಂಗ್ ಮಾಡಲ್ಲ, ಆತಂಕ ಬೇಡ!

ಲೋಡ್ ಶೆಡ್ಡಿಂಗ್ ಮಾಡಲ್ಲ, ಆತಂಕ ಬೇಡ!

ಪ್ರತಿ ದಿನ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟಿಡ್ (ಕೆ‌ಪಿ‌ಸಿ‌ಎಲ್) 12-13 ರೇಕ್ ಕಲ್ಲಿದ್ದಲು ಸ್ವೀಕರಿಸುತ್ತಿದ್ದು, ಕರ್ನಾಟಕದಲ್ಲಿ ವಿದ್ಯುತ್ ಅಭಾವ ಆಗದಂತೆ ಗಮನ ಹರಿಸಲಾಗಿದೆ. ಇನ್ನುಳಿದಂತೆ ರಾಜ್ಯದ ಒಟ್ಟಾರೆ ಬೇಡಿಕೆ‌ ಹಾಗೂ ಪೂರೈಕೆಯ ಅಂಕಿ ಅಂಶದಂತೆ, ಬೇಡಿಕೆಗಿಂತ ಪೂರೈಕೆ ಹೆಚ್ಚಿದ್ದು ರಾಜ್ಯದ ಜನರು ವಿದ್ಯುತ್ ಪೂರೈಕೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಇಂಧನ ಸಚಿವ ವಿ ಸುನೀಲ್‌ ಕುಮಾರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

Recommended Video

ಟೀಮ್ ಇಂಡಿಯಾ ಹೊಸ ಜರ್ಸಿ ಅನಾವರಣ:ನಿಮ್ಗೂ ಇದೆ ಧರಿಸೋ ಅವಕಾಶ | Oneindia Kannada
ಖಾಸಗೀಕರಣದ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು!

ಖಾಸಗೀಕರಣದ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು!

ಗುರುವಾರ ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿರುವ ವಿಷಯವನ್ನು ಈ ಹಿಂದೆಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.

''ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜೊತೆಗೆ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯೂ ಇಲ್ಲ. ಕಲ್ಲಿದ್ದಲು ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ನಡೆಸಿದ್ದಾರೆ. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಹೀಗಾಗಿಯೇ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನ ಮಾಡಿರ ಬಹುದು. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ಈಗ ರೈತರ ಪಂಪ್ ಸೆಟ್‌ಗಳಿಗೆ ರಿಯಾಯತಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇಲಾಖೆಯನ್ನು ಖಾಸಗೀಕರಣ ಮಾಡಿದಲ್ಲಿ ಆ ಸಬ್ಸಿಡಿ ಹೋಗಲಿದೆ,'' ಎಂಬ ಗಂಭೀರ ಆರೋಪವನ್ನು ಸಿದ್ದರಾಮಯ್ಯ ಸರ್ಕಾರದ ಮೇಲೆ ಮಾಡಿದ್ದಾರೆ. ಈ ಎಲ್ಲದ್ದಕ್ಕೂ ಇವತ್ತು ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

English summary
Energy Minister Sunil Kumar clarifies that shortage of coal has no effect on power generation. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X