• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗಲಿದ ನಿಷ್ಠಾವಂತ ಅಧಿಕಾರಿಗೆ ಕಣ್ಣೀರಾದ ಕರ್ನಾಟಕ

|
Google Oneindia Kannada News
   ಇಡೀ ರಾಜ್ಯ ಮಧುಕರ್ ಶೆಟ್ಟಿ ಅಗಲಿಕೆಗೆ ಪ್ರಾರ್ಥಿಸಿತ್ತು | Oneindia Kannada

   ಬೆಂಗಳೂರು, ಡಿಸೆಂಬರ್ 29: ಕೆಲವರ ಸಾವನ್ನು ಅರಗಿಸಿಕೊಳ್ಳುವುದು ಕಷ್ಟ.

   ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಅನಾರೋಗ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದಾಗಲೇ ಇಡೀ ರಾಜ್ಯವೂ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿತ್ತು.

   ಆದರೆ ಯಾರ ಪ್ರಾರ್ಥನೆಯೂ ಫಲಿಸದೆ ಅವರು ಇಹಲೋಕ ತ್ಯಜಸಿದರು. ಎಚ್ 1 ಎನ್ 1 ಖಾಯಿಲೆಯಿಂದ ಬಳಲುತ್ತಿದ್ದ ಶೆಟ್ಟಿ ಅವರಿಗೆ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

   ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು, ದಿಟ್ಟ ಅಧಿಕಾರಿಯನ್ನು ನೆನೆದು ಅವರ ಅಭಿಮಾನಿಗಳೂ ಕಣ್ಣೀರಾಗಿದ್ದಾರೆ.

   ಐಪಿಎಸ್ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ

   ಐಪಿಎಸ್ ನ ಒಂದು ರತ್ನ ಮಧುಕರ್ ಶೆಟ್ಟಿ. ಕರ್ನಾಟಕದ ಅಕ್ರಮ ಗಣಿಗಾರಿಕೆಯ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಅವರಿಗೆ ವಿಧಿ ಬರಹದ ವಿರುದ್ಧ ಹೋರಾಡಲು ಸಾಧ್ಯವಾಗಲಿಲ್ಲ! ನಮಗೆಲ್ಲರಿಗೂ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ- ಸಂದೀಪ್ ಮಿತ್ತಲ್ ಐಪಿಎಸ್

   ಪೊಲೀಸ್ ಮಾತ್ರವಲ್ಲ, ಒಬ್ಬ ಅತ್ಯುತ್ತಮ ಮನುಷ್ಯ

   ಅವರು ಕೇವಲ ಒಬ್ಬ ಅತ್ಯುತ್ತಮ ಐಪಿಎಸ್ ಅಧಿಕಾರಿ ಮಾತ್ರವಲ್ಲ. ಒಮ್ಮೆ ಅತ್ಯುತ್ತಮ ಮನುಷ್ಯ ಸಹ. ಅವರೊಂದಿಗೆ ತರಬೇತಿ ಪಡೆದಿದ್ದು ನಮ್ಮ ಭಾಗ್ಯ. ಓಂ ಶಾಂತಿ ಎಂದಿದ್ದಾರೆ ಅಮಿತಾಭ್ ಠಾಕೂರ್

   ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ!

   ಒಳ್ಳೆಯ ವ್ಯಕ್ತಿಗಳನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ. ಪ್ರಾಮಾಣಿಕ, ಧೈರ್ಯವಂತ ಮತ್ತು ಜನಪರ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಕಾಲಿಕ ಮರಣ ಅದನ್ನು ಸಾಬೀತುಪಡಿಸಿದೆ. 2018 ರ ದುರಂತ ಇದು ಎಂದಿದ್ದಾರೆ ವೈಭವ್ ಮಿಶ್ರಾ.

   ಪ್ರಾಮಾಣಿಕರು ಹೀಗೆ ಹೋಗುವುದು ದುರಂತ!

   ನಮ್ಮವರಿಗೆ UPSC ವಿಚಾರದಲ್ಲಿ ಮಾಹಿತಿ ಕಡಿಮೆ, ಬಹಳ ಬೇಗ ಖಾಸಗಿ ವೃತ್ತಿಪರ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಯ ಹುಟ್ಟು ಒಂದು ಕಾರಣವಿರಬಹುದು. ಹಾಗಾಗಿ ಅದರ ಬೆನ್ನತ್ತಿ ಹೋಗುವವರು ಕಡಿಮೆ, ಪಾಸಾಗುವವರು ಇನ್ನೂ ಕಡಿಮೆ,ಸ್ವಂತ ರಾಜ್ಯಕ್ಕೆ ಕ್ಯಾಡರ್ ಆಗುವ, ದಕ್ಷರು ಬೆರಳೆಣಿಕೆ ಮಾತ್ರ. ಅಂತವರು ಹೀಗೆ ಹೋಗುವುದು ದುರಂತ ಎಂದಿದ್ದಾರೆ ಕಿರಣ್

   ರಾಜಕಾರಣಿಗಳದ್ದು ಮೊಸಳೆ ಕಣ್ಣೀರು

   ಈ ವ್ಯಕ್ತಿ ಸಮಾಜಕ್ಕಾಗಿ ಕೆಲಸ ಮಾಡಿದರು, ಆದರೆ ಸಮಾಜ ಅವರ ವೃತ್ತಿಬದುಕನ್ನು ಕಿತ್ತುಕೊಂಡಿತು! ಭಾರತದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ. ತಥಾಕಥಿತ ರಾಜಕಾರಣಿಗಳು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ! ಮಧುಕರ್ ಶೆಟ್ಟಿ ಅವರೇ, ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ ಕೇಶವ್ ಎಂಬುವವರು.

   English summary
   IPS officer Madhukar Shetty's untimely demise due to H1N1 creates vacuum in Karnataka. His fans on twitter pay condolence to him with emotional words.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X