ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1 ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮೇ 16: ಜೂನ್ 1ನೇ ತಾರೀಖಿನಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ವರ್ಷಾಂತ್ಯದಲ್ಲಿ ಪ್ರತಿ ಯೂನಿಟ್‌ಗೆ 14 ಪೈಸೆ ದರ ಹೆಚ್ಚಳ ಮಾಡಲಾಗಿತ್ತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇದೇ ವರ್ಷದ ಜನವರಿಯಲ್ಲಿ ಪ್ರತಿ ಯೂನಿಟ್‌ಗೆ 1 ರೂಪಾಯಿ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಕೆಇಆರ್‌ಸಿ (ಕರ್ನಾಟಕ ಎಲೆಕ್ಟ್ರಾನಿಕ್ ರೆಗ್ಯುಲೇಟರಿ ಕಮಿಷನ್‌) ಸಂಸ್ಥೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಆಗ ಕುಮಾರಸ್ವಾಮಿ ಅವರು ಅದಕ್ಕೆ ತಡೆ ಒಡ್ಡಿದ್ದರು.

ವಿದ್ಯುತ್ ಬೆಲೆ ಪ್ರತಿ ಯುನಿಟ್‌ಗೆ 1 ರೂ ಏರಿಸಲು ಬೆಸ್ಕಾಂ ಒತ್ತಾಯವಿದ್ಯುತ್ ಬೆಲೆ ಪ್ರತಿ ಯುನಿಟ್‌ಗೆ 1 ರೂ ಏರಿಸಲು ಬೆಸ್ಕಾಂ ಒತ್ತಾಯ

ಆದರೆ ಚುನಾವಣೆ ಮುಗಿದ ಬಳಿಕ, ಆರ್ಥಿಕ ವರ್ಷ ಅಂತ್ಯವಾದ ನಂತರ ಜೂನ್ 1 ರಿಂದ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲು ಸರ್ಕಾರ ಯೋಜಿಸಿದೆ.

Electricity price may hike after June 1 in Karnataka

ಜೂನ್ ಒಂದರಿಂದ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 45-50 ಪೈಸೆ ಹೆಚ್ಚಳ ಆಗುವ ಸರ್ವ ಸಾಧ್ಯತೆ ಇದೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿಯೇ ವಿದ್ಯುತ್ ದರ ಹೆಚ್ಚಳವಾಗುತ್ತದೆ, ಆದರೆ ಚುನಾವಣೆ ಇರುವ ಕಾರಣ ಈ ಬಾರಿ ಸ್ವಲ್ಪ ತಡವಾಗಿ ಹೆಚ್ಚಳ ಮಾಡಲಾಗುತ್ತಿದೆ.

ಬೆಸ್ಕಾಂ ಸಮಸ್ಯೆ ಹೇಳಿಕೊಳ್ಳೋಕೆ ಇಲ್ಲಿವೆ ಹಲವು ಮಾರ್ಗ! ಬೆಸ್ಕಾಂ ಸಮಸ್ಯೆ ಹೇಳಿಕೊಳ್ಳೋಕೆ ಇಲ್ಲಿವೆ ಹಲವು ಮಾರ್ಗ!

ಕಳೆದ ವರ್ಷ ಎರಡು ಬಾರಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿತ್ತು, ಮೊದಲಿಗೆ ಮೇ ತಿಂಗಳಿನಲ್ಲಿ ಯೂನಿಟ್ ಒಂದಕ್ಕೆ 38 ಪೈಸೆ ಹೆಚ್ಚಳ ಮಾಡಿದ್ದರೆ, ಅಕ್ಟೋಬರ್ ವೇಳೆಗೆ 14 ಪೈಸೆ ಹೆಚ್ಚಳ ಮಾಡಲಾಗಿತ್ತು.

ಬರದಿಂದ ತತ್ತರಿಸುತ್ತಿರುವ ಕರ್ನಾಟಕದಲ್ಲಿ ಜಲಾಶಯಗಳು ನಿಧಾನಕ್ಕೆ ಬರಿದಾಗುತ್ತಿರುವ ಕಾರಣ, ವಿದ್ಯುತ್ ಅಭಾವವೂ ಸಹ ಈ ಬಾರಿ ರಾಜ್ಯವನ್ನು ಕಾಡುವ ಸಾಧ್ಯತೆ ಇದೆ.

English summary
Electricity price may hike in Karnataka after June 1. government planing to rise per unit price by 45 to 50 paise. Now election is going on so price hike postponed till June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X