ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಸೇರ್ಪಡೆಯಾದ ಉಡುಪಿ ಚಲೋ ರೂವಾರಿ ಭಾಸ್ಕರ್ ಪ್ರಸಾದ್

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 03: ಆಮ್ ಆದ್ಮಿ ಪಕ್ಷವು ಈ ರಾಷ್ಟ್ರದ ಸಮ ಸಮಾಜ ನಿರ್ಮಾಣದಲ್ಲಿ ಯಾರಿಗೇನು ಕಮ್ಮಿಯಿಲ್ಲದಂತಹ ಕಾರ್ಯನಡೆಯನ್ನು ಈಗಾಗಲೇ ಮಾಡಿಕೊಂಡು ಬರುತ್ತಿದೆ.

ಕರ್ನಾಟಕ ರಾಜ್ಯದ ಹಲವಾರು ದಲಿತ ಮುಖಂಡರುಗಳು ಪಕ್ಷದ ದಲಿತ ನಿಲುವುಗಳನ್ನು ಬೆಂಬಲಿಸುವ ಹಾದಿಯಲ್ಲಿಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹರ್ಷದ ಸಂಗತಿಯಾಗಿದೆ.

ಇತ್ತೀಚಿನ ಉಡುಪಿ ಚಲೋದಂಥ ದಲಿತರ ಸ್ವಾಭಿಮಾನ ಸಮಾವೇಶದ ರೂವಾರಿ, ಗೌರಿ ಹತ್ಯೆಯ ಪ್ರತಿಭಟನೆ ಹಾಗೂ ಇದೇ ರೀತಿಯ ಹಲವು ವರ್ಷಗಳಿಂದ ಹತ್ತು ಹಲವಾರು ದಲಿತ ಹೋರಾಟಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬಂದಿರುವ ದೇಶದ ಪ್ರಮುಖ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿಯವರ ಸಹವರ್ತಿಯಾಗಿರುವ ಭಾಸ್ಕರ್ ಪ್ರಸಾದ್ ರವರು ತಮ್ಮ ಸಹವರ್ತಿಗಳೊಂದಿಗೆ ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

Elections 2018 : Several Dalit Leaders, Activists & environmentalists joined AAP

ಮಾಜಿ ಸರ್ಕಾರಿ ಅಧಿಕಾರಿ ಹಾಗೂ ದಲಿತ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ದುಡಿದಿರುವ ಇಳಂಗೋವನ್‌ರವರು ಸಹ ತಮ್ಮ ಹಲವಾರು ಸ್ನೇಹಿತ ವೃಂದದೊಂದಿಗೆ ಸೇರ್ಪಡೆಯಾದರು.

ಕರ್ನಾಟಕದ ಹೆಸರಾಂತ ಪತ್ರಿಕೆಯ ಪತ್ರಕರ್ತ ಹಾಗೂ ಹೋರಾಟಗಾರರಾದ ನಿರಂಜನ್‍ರವರನ್ನೊಳಗೊಂಡಂತೆ ಅನೇಕ ಮಂದಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಮಾರಂಭದ ನೇತೃತ್ವವನ್ನು ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ವಹಿಸಿಕೊಂಡಿದ್ದರು.

Elections 2018 : Several Dalit Leaders, Activists & environmentalists joined AAP

ಆಮ್ ಆದ್ಮಿ ಪಕ್ಷವು ದೇಶದಲ್ಲಿನ ಅಸ್ಪೃಶ್ಯ, ದೀನ - ದಲಿತರುಗಳ ಕಲ್ಯಾಣಕ್ಕಾಗಿ ಹತ್ತು ಹಲವಾರು ಆಯಾಮಗಳಲ್ಲಿ ನವನವೀನ ಯೋಚನಾ ಲಹರಿಗಳ ಮುಖೇನ ಸಮ ಸಮಾಜದ ನಿರ್ಮಾಣದಲ್ಲಿ ಸಕ್ರಿಯವಾದಂತಹ ಕ್ರಿಯಾಶೀಲವಾದಂತಹ, ಉಪಯುಕ್ತಹಾಗೂ ಮಾದರಿಯಾಗುವಂತಹ ಹೆಜ್ಜೆಯನ್ನು ಇಡುತ್ತಿರುವುದು ಈಗಿನ ಆಧುನಿಕ ಭಾರತಕ್ಕೆಸಹಜವಾಗಿಯೇ ಬೇಕಿರುವಂತಹ ಹೆಜ್ಜೆಯಾಗಿದೆ.

ದೇಶದಲ್ಲಿಯೇ ಪ್ರಪ್ರಥಮವಾಗಿ ದಲಿತರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆಯನ್ನುಅನುಷ್ಠಾನಗೊಳಿಸುವ ದಿಶೆಯಲ್ಲಿ ಆಮ್ ಆದ್ಮಿ ಪಕ್ಷವು ತನ್ನ ಹಕ್ಕೊತ್ತಾಯವನ್ನು ಹಲವು ದಿನಗಳಿಂದ ಮಂಡಿಸುತ್ತಲೇ ಬರುತ್ತಿದೆ.

Elections 2018 : Several Dalit Leaders, Activists & environmentalists joined AAP

ಪಂಜಾಮ್‍ನಂಥ ರಾಜ್ಯದಲ್ಲಿ ನಾವುಗಳು ಚುನಾವಣಾಕಣದಲ್ಲಿದ್ದ ಸಂದರ್ಭದಲ್ಲಿ ದಲಿತ ಪ್ರಣಾಳಿಕೆಯನ್ನೇ ಬಿಡುಗಡೆಗೊಳಿಸಿ ದಲಿತರ ಶೋಷಿತರ ಕಲ್ಯಾಣಕ್ಕಾಗಿಕಾರ್ಯ ಯೋಜನೆಯನ್ನೇ ರೂಪುಗೊಳಿಸಿದ್ದೆವು. ಉಪ ಮುಖ್ಯಮಂತ್ರಿ ಪದವಿಯನ್ನೇ ನಾವು ಚುನಾವಣಾಪೂರ್ವದಲ್ಲಿ ದಲಿತ ಸಮುದಾಯಕ್ಕೆ ಕೊಡುಗೆಯಾಗಿ ಘೋಷಿಸಿದ್ದೆವು.

ಇಂತಹ ಕಾಂತ್ರಿಕಾರಕ ದಲಿತ ಪರ ನಿಲುವುಗಳನ್ನು ಇಲ್ಲಿಯವರೆವಿಗೂ ದೇಶದ ಯಾವುದೇ ಪರಂಪರಾನುಗತ ರಾಜಕೀಯ ಪಕ್ಷಗಳು ಈ ರೀತಿಯ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡ ಉದಾಹರಣೆಯೇ ಇಲ್ಲವೆನ್ನಬಹುದು. ಈ ರೀತಿಯ ದಿಟ್ಟನಿರ್ಧಾರಗಳ ಘೋಷಣೆಯಿಂದ ಪಂಜಾಬ್‍ನಲ್ಲಿನ ಗೆಲುವಿನ ವಾತಾವರಣವನ್ನೇ ಬುಡಮೇಲಾಗುವಂತಹಸಂದರ್ಭವನ್ನು ಆ ರಾಜ್ಯದ ಪಾರಂಪರಿಕ ಪಕ್ಷಗಳು ಸೃಷ್ಟಿಸಿ ಬಿಟ್ಟಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

English summary
Aam Aadmi Party has been fighting for the welfare of Dalits, in different levels with an alternating thinking to create an all-inclusive society, which is the prime need of the hour for our nation. Bhaskar Prasad, Elangovan, Journalist Niranjan are among the new joinees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X