ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಅನಿಲ್ ಲಾಡ್ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

Recommended Video

ಶಾಸಕ ಅನಿಲ್ ಲಾಡ್ ಆಸ್ತಿ ಜಪ್ತಿಗೆ ಕೋರ್ಟ್ ಅದೇಶ | Oneindia Kannada

ಬಳ್ಳಾರಿ, ಫೆಬ್ರವರಿ 05: ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರಿಗೆ ಸಂಕಷ್ಟ ಎದುರಾಗಿದೆ. 2003ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್ ಅವರ ಆಸ್ತಿ ಜಪ್ತಿಗೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ.

ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಮೈನಿಂಗ್ ಮೊಬೈಲ್‌ ಕ್ರಷರ್, ಸಂಡೂರು ನಲ್ಲಿ 2003ರಲ್ಲಿ ಓಂಕಾರಪ್ಪ ಅನ್ನುವ ಕಾರ್ಮಿಕ ಕನ್ವರ್ಟ ಬೆಲ್ಟ್ ನಲ್ಲಿ ತನ್ನ ಬಲಗೈ ನ್ನು ಕಳೆದು ಕೊಂಡಿದ್ದರು. ಅಗಿನ ಸಂದರ್ಭದಲ್ಲಿ ಅನಿಲ್ ಲಾಡ್ ಮತ್ತು ಪಿಎ ಅಸ್ಸಿ ಅವರ ಮೇಲೆ ಲೇಬರ್‌ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು.

2009ರಲ್ಲಿ ಲೇಬರ್ ಕೋರ್ಟ್ 3,75,620.ರೂ ಗಳು ಪರಿಹಾರವನ್ನು ನೀಡಲು ತೀರ್ಪನ್ನು ನೀಡಿತು. ಅ ಹಣವನ್ನು ತುಂಬಲಾಗಿತ್ತು.

ಕಾಂಗ್ರೆಸ್ ತೊರೆಯುವ ಸೂಚನೆ ನೀಡಿದ ಶಾಸಕ ಅನಿಲ್ ಲಾಡ್ಕಾಂಗ್ರೆಸ್ ತೊರೆಯುವ ಸೂಚನೆ ನೀಡಿದ ಶಾಸಕ ಅನಿಲ್ ಲಾಡ್

ಆದರೆ, ಕಕ್ಷಿದಾರ ಹೆಚ್ಚಿನ ಪರಿಹಾರ ಬೇಕೆಂದು ಹೈಕೋರ್ಟ್ ಮೊರೆ ಹೋದರು. ನ್ಯಾಯಲಯವು 2,35.757,ರೂ,ಗಳು ಹೆಚ್ಚಿನ ಪರಿಹಾರ ನೀಡಲು ಸೂಚಿಸಿತ್ತು. ಆದರೆ, ಪರಿಹಾರ ಮೊತ್ತ ಮಾತ್ರ ಕೈ ಸೇರಿಲ್ಲ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ ಮುಂದೇನಾಯ್ತು ಓದಿ...

 2003ರಲ್ಲಿ ನಡೆದ ಅಪಘಾತ ಪ್ರಕರಣ

2003ರಲ್ಲಿ ನಡೆದ ಅಪಘಾತ ಪ್ರಕರಣ

ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರ ಮೈನಿಂಗ್ ಮೊಬೈಲ್‌ ಕ್ರಷರ್, ಸಂಡೂರು ನಲ್ಲಿ 2003ರಲ್ಲಿ ಓಂಕಾರಪ್ಪ ಅನ್ನುವ ಕಾರ್ಮಿಕ ಕನ್ವರ್ಟ ಬೆಲ್ಟ್ ನಲ್ಲಿ ತನ್ನ ಬಲಗೈ ನ್ನು ಕಳೆದು ಕೊಂಡಿದ್ದರು. ಅಗಿನ ಸಂದರ್ಭದಲ್ಲಿ ಅನಿಲ್ ಲಾಡ್ ಮತ್ತು ಪಿಎ ಅಸ್ಸಿ ಅವರ ಮೇಲೆ ಲೇಬರ್‌ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯಕ್ಕೆ ಲಾಡ್ ಗೌರವವನ್ನು ಕೊಟ್ಟಿಲ್ಲ

ನ್ಯಾಯಾಲಯಕ್ಕೆ ಲಾಡ್ ಗೌರವವನ್ನು ಕೊಟ್ಟಿಲ್ಲ

ಈ ವಿಚಾರವಾಗಿ ನ್ಯಾಯಾಲಯವು,ಕಕ್ಷಿದಾರನ ಪರ ನ್ಯಾಯವಾದಿ ಸಿದ್ದಾರಮನಗೌಡ, ಶಾಸಕರಿಗೆ ನೋಟಿಸ್ ಕಳಿಸಿದರೂ ಕ್ಯಾರೆ ಅಂದಿಲ್ಲ. ನ್ಯಾಯಾಲಯಕ್ಕೆ ಲಾಡ್ ಗೌರವವನ್ನು ಕೊಟ್ಟಿಲ್ ಎಂಬುದನ್ನು ಅರಿತ ಹೈಕೋರ್ಟ್, ಸಂಡೂರು ನಲ್ಲಿ ಇರುವ ಕಚೇರಿ ಅಥವಾ ಮನೆಯಲ್ಲಿರುವ ಚರಾಸ್ತಿಯನ್ನು ಜಪ್ತಿ ಮಾಡಲು ಅದೇಶ ನೀಡಿದೆ.

ಮಾತುಕತೆ ವಿಫಲ

ಮಾತುಕತೆ ವಿಫಲ

ಕೋರ್ಟ್ ಅಮಿನೊ, ವಕೀಲರು ಸಿದ್ದಾರಮನಗೌಡ, ಸಂಡೂರು, ಲಾಡ್ ಕಚೇರಿ ತೆರಳಿ ಜಪ್ತಿ ಮಾಡಲು ಮುಂದಾಗಿ ಇದ್ದರು. ಲಾಡ್ ಪರ ವಕೀಲರು ಕಾಲಾವಕಾಶ ಕೊಡಿ, ಸಾಹೇಬರು ದೆಹಲಿಯಲ್ಲಿದ್ದಾರೆ ಎಂದು ಸರಿಪಡಿಸಲು ಪ್ರಯತ್ನಗಳು ನಡೆಸಿದರು. ಆದರೆ, ಪ್ರಯತ್ನ ವಿಫಲವಾಯಿತು

ಪರಿಹಾರ ಹಣವನ್ನು ಚೆಕ್ ಮೂಲಕ ಕೋಡಿತ್ತೀವಿ

ಪರಿಹಾರ ಹಣವನ್ನು ಚೆಕ್ ಮೂಲಕ ಕೋಡಿತ್ತೀವಿ

ಅಷ್ಟರಲ್ಲಿ ಲಾಡ್ ಕಚೇರಿ ಉದ್ಯೋಗ, ಕರ್ನಾಟಕ ರಾಜ್ಯಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರು. ಪಿ.ಕುಮಾರ್‌ ಸ್ವಾಮಿ ಪ್ರತ್ಯಕ್ಷವಾದರು, ಸಾರ್ ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೀವಿ ಪರಿಹಾರ ಹಣವನ್ನು ಚೆಕ್ ಮೂಲಕ ಕೋಡಿತ್ತೀವಿ. ಲಾಡ್ ಸಾರ್ ಜೊತೆಗೆ ಮಾತನಾಡಿ ಎಂದರು.

ಕಾರ್ಮಿಕನಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ

ಕಾರ್ಮಿಕನಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ

ಒಬ್ಬ ಕಾರ್ಮಿಕ ತನ್ನ ಜೀವನ ಹಾಳು ಮಾಡಿಕೊಂಡು 13 ವರ್ಷ ಕಳೆದು ಕೊಂಡರು ಸೂಕ್ತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಮಾತಕತೆ ಸದ್ಯ ಜಾರಿಯಲ್ಲಿದೆ. ಪರಿಹಾರಕ್ಕೆ ಸಂತ್ರಸ್ತ ಕಾರ್ಮಿಕ ಒಪ್ಪಿಕೊಳ್ಳದಿದ್ದರೆ, ಲಾಡ್ ಅವರ ಕಚೇರಿ ಜಪ್ತಿ ಮಾಡಿ ಪರಿಹಾರ ಸರಿದೂಗಿಸಲು, ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

English summary
Elections 2018 : Labour court orders to seize Ballari MLA Anil Lad Assets in a Sandur Accident case dated 2003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X