ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ಅಸೆಂಬ್ಲಿ ಕದನ: ವರ್ತೂರು ಪ್ರಕಾಶ್ vs ಗೌರಮ್ಮ

By Mahesh
|
Google Oneindia Kannada News

ಚಿನ್ನದ ನಾಡು ಕೋಲಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿದ್ದ ವರ್ತೂರು ಪ್ರಕಾಶ್ ಅವರು ಸದ್ಯ ಕೋಲಾರ ಅಸೆಂಬ್ಲಿ ಕ್ಷೇತ್ರದ ಹಾಲಿ ಶಾಸಕ.

ಕೋಲಾರ: ಪಕ್ಷೇತರರಾಗಿ ಡಿಕೆ ರವಿ ತಾಯಿ ಸ್ಪರ್ಧೆ ಖಚಿತಕೋಲಾರ: ಪಕ್ಷೇತರರಾಗಿ ಡಿಕೆ ರವಿ ತಾಯಿ ಸ್ಪರ್ಧೆ ಖಚಿತ

ಪಕ್ಷೇತರರಾಗಿ ನಿಂತು ಗೆದ್ದಿರುವ ವರ್ತೂರ್ ಪ್ರಕಾಶ್ ಎದುರಿಗೆ ಸಮರ್ಥ ಅಭ್ಯರ್ಥಿ ನಿಲ್ಲಿಸಲು ಕಾಂಗ್ರೆಸ್, ಜೆಡಿಎಸ್ ತಲೆ ಕೆಡಿಸಿಕೊಂಡಿರುವ ಹೊತ್ತಿನಲ್ಲೇ ದಕ್ಷ ಐಎಎಸ್ ಅಧಿಕಾರಿ, ಕೋಲಾರದ ದತ್ತುಪುತ್ರ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಚುನಾವಣಾ ಕಣಕ್ಕಿಳಿಯುವ ಸುದ್ದಿ ಬಂದಿದ್ದು, ಚುನಾವಣೆ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

ನಮ್ಮ ಕಾಂಗ್ರೆಸ್ಸಿನಿಂದ 40 ಕ್ಷೇತ್ರಗಳಲ್ಲಿ ಸ್ಪರ್ಧೆ : ವರ್ತೂರು ಪ್ರಕಾಶ್ನಮ್ಮ ಕಾಂಗ್ರೆಸ್ಸಿನಿಂದ 40 ಕ್ಷೇತ್ರಗಳಲ್ಲಿ ಸ್ಪರ್ಧೆ : ವರ್ತೂರು ಪ್ರಕಾಶ್

ನೀರಿನ ಆಸರೆ ಇಲ್ಲದಿದ್ದರೂ ಕೋಲಾರ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರ ಕೃಷಿ ಪ್ರಧಾನವಾಗಿದೆ. ರೇಷ್ಮೆ ಉದ್ಯಮ, ಪಶು ಸಂಗೋಪನೆ, ಗಾರ್ಮೆಂಟ್ಸ್ ಎಲ್ಲಾ ಇದ್ದರೂ ಜನರಿಗೆ ಬದಲಾವಣೆ ಬೇಕಿದೆ.

2008 ಹಾಗೂ 2013ರಲ್ಲಿ ಜಯಭೇರಿ ಬಾರಿಸಿ ಶಾಸಕರಾಗಿರುವ ವರ್ತೂರು ಪ್ರಕಾಶ್ ಅವರು ಈ ಬಾರಿ ಹೊಸ ಪಕ್ಷದ 'ನಮ್ಮ ಕಾಂಗ್ರೆಸ್' ಮೂಲಕ ಕಣಕ್ಕಿಳಿಯುತ್ತಿದ್ದಾರೆ. ಕೋಲಾರ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆಯೇ, ದುಡ್ಡಿನ ಶಕ್ತಿ ಹಾಗೂ ಭಾವನೆಗಳ ಬಲಾಬಲದ ನಡುವೆ ಯಾರ ಪರ ಜನ ನಿಲ್ಲಬಹುದು? ಮುಂದೆ ಓದಿ...

 ಪ್ರಕಾಶ್ ಈ ಬಾರಿಯೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ

ಪ್ರಕಾಶ್ ಈ ಬಾರಿಯೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ

2008ರಲ್ಲಿ 66,446 ಮತಗಳು, 2013ರಲ್ಲಿ 62, 957 ಮತಗಳನ್ನು ಗಳಿಸಿದ್ದ ಪ್ರಕಾಶ್ ಈ ಬಾರಿಯೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ. ಆದರೆ, ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಗುರುವಾರ(ಡಿಸೆಂಬರ್ 28) ಘೋಷಿಸಿದ ಬಳಿಕ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿರುವುದಂತೂ ನಿಜ.

ಪ್ರಕಾಶ್‌ರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಯತ್ನ

ಪ್ರಕಾಶ್‌ರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಯತ್ನ

'ಪಕ್ಷದ ಮುಖಂಡರೆಲ್ಲಾ ಚರ್ಚಿಸಿ ಸ್ಥಳೀಯ ಶಾಸಕ ವರ್ತೂರು ಪ್ರಕಾಶ್‌ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ತೀರ್ಮಾನಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು ಇತ್ತೀಚಿದೆ ಹೇಳಿದರು. ಆದರೆ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ವರ್ತೂರು, ಈಗ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ಯಡಿಯೂರಪ್ಪ- ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ಹೊಸ ಪಕ್ಷ ಕಟ್ಟಿರುವ ವರ್ತೂರು ಅವರು ಮತ್ತೊಮ್ಮೆ ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುವ ಸಾಧ್ಯ ಇಲ್ಲ.

ಡಿಕೆ ರವಿ ತಾಯಿ ಸ್ಪರ್ಧೆ ಖಚಿತ

ಡಿಕೆ ರವಿ ತಾಯಿ ಸ್ಪರ್ಧೆ ಖಚಿತ

ಸ್ವತಂತ್ರ ಅಭ್ಯರ್ಥಿಯಾಗಿ ಪಕ್ಷೇತರರಾಗಿ ವಿಧಾನಸಭೆ ಚುನಾವಣೆ 2018ರಲ್ಲಿ ಡಿಕೆ ರವಿ ತಾಯಿ ಗೌರಮ್ಮ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡಿವೆ.

ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕಿದೆ, ಅವನು ಮಾಡಿದ ಒಳ್ಳೆ ಕಾರ್ಯವನ್ನು ಮುಂದುವರೆಸಲು ಅವಕಾಶ ಕೊಡಿ' ಎಂದು ಗೌರಮ್ಮ ಹೇಳಿದ್ದಾರೆ. ಡಿಕೆ ರವಿಯನ್ನು ಈಗಲೂ ದೇವರಂತೆ ಅನೇಕ ಹಳ್ಳಿಗಳಲ್ಲಿ ಕಾಣಲಾಗುತ್ತಿದೆ. ಜನರ ಭಾವನೆಗಳಿಗೆ ಸೆಂಟಿಮೆಂಟು ಬಲ ಸೇರಿದರೆ ಗೌರಮ್ಮ ಅವರ ಜಯ ಕಟ್ಟಿಟ್ಟ ಬುತ್ತಿ.

ನಸೀರ್ ಅಹ್ಮದ್ ನಸೀಬು ಹೇಗಿದೆ?

ನಸೀರ್ ಅಹ್ಮದ್ ನಸೀಬು ಹೇಗಿದೆ?

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್‌ ಅಹಮ್ಮದ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಅವರು ಸೇರಿಕೊಂಡು ಈ ಬಾರಿ ಹೇಗಾದರೂ ನಸೀರ್ ಅಹ್ಮದ್ ಅವರನ್ನು ಗೆಲ್ಲಿಸಲು ಯತ್ನಿಸಲಿದ್ದಾರೆ. ಕಳೆದ ಬಾರಿ ಶೇ 25.39ರಷ್ಟು ಮತ 41, 510 ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದಿದ್ದ ನಸೀರ್ ಅವರು ಮತ ವಿಭಜನೆಯಲ್ಲಿ ಪ್ರಮುಖ ಪಾತ್ರವಹಿಸಬಹುದು ಅಷ್ಟೇ.

ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಮಾಜಿ ಶಾಸಕ

ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಮಾಜಿ ಶಾಸಕ

ಕೋಲಾರ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯು ಪಕ್ಷಕ್ಕೆ ಪ್ರತಿಷ್ಠೆ ಕಣವಾಗುತ್ತಿದೆ ಎಂಬ ಮಾತಿದೆ. ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಮಾಜಿ ಶಾಸಕ ಕೆ ಶ್ರೀನಿವಾಸ ಗೌಡ ಅವರು ಕಳೆದ ಬಾರಿ 50,366 ಮತಗಳನ್ನು ಪಡೆದ ಶೇ 30ಕ್ಕೂ ಅಧಿಕ ಮತ ಗಳಿಸಿದ್ದರು. ವಿಜೇತ ಅಭ್ಯರ್ಥಿ(ಪ್ರಕಾಶ್) ಶೇಕಡವಾರು ಮತ ಶೇ 38.51. ಹೀಗಾಗಿ ಜೆಡಿಎಸ್ ಇಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಬಿಜೆಪಿ ಅಸ್ತಿತ್ವಕ್ಕಾಗಿ ಹುಡುಕಾಟ

ಬಿಜೆಪಿ ಅಸ್ತಿತ್ವಕ್ಕಾಗಿ ಹುಡುಕಾಟ

2010ರಲ್ಲಿ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಗೆದ್ದು ಬಿಜೆಪಿ ಸೇರಿದ ಎಂಎಸ್ ಆನಂದ್ ಮೂಲತಃ ಬಿಎಸ್ಆರ್ ಕಾಂಗ್ರೆಸ್ಸಿನವರು. 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೆ ಶ್ರೀನಿವಾಸಗೌಡರ ವಿರುದ್ಧ ಸೋಲು ಕಂಡರು. ಕಳೆದ ಬಾರಿ ಕೇವಲ 1617 ಮತಗಳನ್ನು ಮಾತ್ರ ಪಡೆದ ಆನಂದ್ ಈ ಬಾರಿ ಟಿಕೆಟ್ ಪಡೆದರೂ ಗೆಲುವಿನ ನಿರೀಕ್ಷೆಯನ್ನಂತೂ ಮಾಡುವಂತಿಲ್ಲ

English summary
Constituency battle between Varthur Prakash and DK Ravi mother Gowramma will be interesting to watch. Congress and JDS also will field strong candidates but it looks battle is narrowed between money power and peoples sentiment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X