ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತೋಷ್ ತಮ್ಮಯ್ಯನಂಥವರು ಅಭ್ಯರ್ಥಿ ಯಾಕಾಗಬಾರದು?

By ಪ್ರಕಾಶ್
|
Google Oneindia Kannada News

ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳಿಂದ ವಿವಿಧ ಹೆಸರುಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಹರಿದಾಡಲಾರಂಭಿಸಿದೆ. ಇದು ಚುನಾವಣಾ ಸಂದರ್ಭದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎನಿಸಿದರೂ ಈ ಬಾರಿ ಪಕ್ಷಗಳಿಂದ ಹರಿದಾಡುತ್ತಿರುವ ಹಲವು ಹೆಸರುಗಳು ರಾಜಕಾರಣಕ್ಕೆ ಹೊಸದೊಂದು ದಿಕ್ಕನ್ನು ಸೂಚಿಸುವ ಸಾಧ್ಯತೆಯಿದೆ ಎಂದೆನಿಸಿದರೆ ಆಶ್ಚರ್ಯವಿಲ್ಲ. ಸಂತೋಷ್ ತಿತಮ್ಮಯ್ಯರಂಥ ಡಾರ್ಕ್ ಹಾರ್ಸ್ ಗಳನ್ನು ಕಣಕ್ಕಿಳಿಸುವ ಬಗ್ಗೆ ವಿಶ್ಲೇಷಣೆ ಇಲ್ಲಿದೆ

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅದರಲ್ಲೂ ಹಣ ಮತ್ತು ಜಾತಿಯಿದ್ದರೆ ಸಾಕು ಅಭ್ಯರ್ಥಿಗಳಾಗಬಹುದು(ಯಾವುದೇ ಪಕ್ಷದ), ಅಥವಾ ಹಣವಿದ್ದರೆ, ಜಾತಿಯಿದ್ದರೆ ಮಾತ್ರ ಅಭ್ಯರ್ಥಿಗಳಾಗಬಹುದು ಎನ್ನುವ ವಾತಾವರಣವಿದೆ. ಇಂತಹ ಕಾಲದಲ್ಲಿ ವಿಶೇಷ ಎನಿಸಬಹುದಾದ ಕೆಲವರನ್ನಾದರೂ ತಮ್ಮ ಅಭ್ಯರ್ಥಿಗಳನ್ನಾಗಿಸಿದರೆ, ಆ ಅಭ್ಯರ್ಥಿಗಳ ಆಯ್ಕೆ ಆ ಪಕ್ಷದ ಘನತೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಪ್ರಶಸ್ತಿಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ ಆ ವ್ಯಕ್ತಿಯಿಂದ ಆ ಪ್ರಶಸ್ತಿಯ ಘನತೆ ಹೆಚ್ಚಾಗಬೇಕು ಹಾಗೆಯೇ ರಾಜಕೀಯದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಾಗ ಆ ಅಭ್ಯರ್ಥಿಯ ಹೆಸರಿನಿಂದಲೇ ಆ ಪಕ್ಷದ ಘನತೆ ಹೆಚ್ಚಾಗಬೇಕು. ಈ ಬಾರಿ ಈ ರೀತಿಯ ಕೆಲವು ಪ್ರಯತ್ನಗಳು ನಡೆಯುತ್ತವೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ವಿರಾಜಪೇಟೆಯಿಂದ ಈ ಬಾರಿ ಅಂಕಣಕಾರ ಸಂತೋಷ್ ಕಣಕ್ಕೆ?ವಿರಾಜಪೇಟೆಯಿಂದ ಈ ಬಾರಿ ಅಂಕಣಕಾರ ಸಂತೋಷ್ ಕಣಕ್ಕೆ?

ಬೇರೆಲ್ಲಾ ಪಕ್ಷಗಳಿಗಿಂತ ಈ ರೀತಿಯ ಹರಿದಾಡುವಿಕೆ ನಡೆಯುತ್ತಿರುವುದು ಬಿಜೆಪಿಯಲ್ಲಿ. ಚಾಣಕ್ಯ ತಂತ್ರದ ಮೂಲಕ ಒಂದಾದ ಮೇಲೆ ಒಂದು ರಾಜ್ಯದಲ್ಲಿ ಕೇಸರಿ ಪತಾಕೆ ಹಾರಿಸಿಕೊಂಡು ಬರುತ್ತಿರುವ ಮೋದಿ ಮತ್ತು ಅಮಿತ್‌ ಶಾ ಜೋಡಿ ರಾಜ್ಯದ ಹಲವು ಕ್ಷೇತಗಳಲ್ಲಿ ಈ ರೀತಿಯಲ್ಲಿ ಡಾರ್ಕ್‌ಹಾರ್ಸ್‌ಗಳನ್ನು ಕಣಕ್ಕಿಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೊಸಮುಖಗಳಿಗೆ ಜನತೆ ನೀಡಬಹುದಾದ ಆದ್ಯತೆ

ಹೊಸಮುಖಗಳಿಗೆ ಜನತೆ ನೀಡಬಹುದಾದ ಆದ್ಯತೆ

ಉತ್ತರದ ರಾಜ್ಯಗಳಲ್ಲಿ ಈ ರೀತಿಯ ತಂತ್ರಗಳನ್ನು ಉಪಯೋಗಿಸಿ ಯಶ ಸಾಧಿಸಿರುವ ಈ ಜೋಡಿ ಕರ್ನಾಟಕದಲ್ಲಿಯೂ ಇದೇ ತಂತ್ರವನ್ನು ಅನುಸರಿಸುತ್ತದೆ ಎಂಬ ಮಾತುಗಳನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ರಾಜ್ಯದ ಕೆಲವು ಜಿಲ್ಲೆಗಳ ಬಿಜೆಪಿ ನಾಯಕರುಗಳ ನಡುವೆ ಮೂಡದಿರುವ ಸಮನ್ವಯತೆ, ಯಾರನ್ನೇ ಅಭ್ಯರ್ಥಿ ಮಾಡಿದರೂ ಒಟ್ಟಾಗಿ ಕೆಲಸ ಮಾಡದಿರುವ ಮಾನಸಿಕತೆ, ಒಬ್ಬರನ್ನೊಬ್ಬರು ಕಾಲೆಳೆದು ಕೆಡವಲು ನಡೆಸಿರುವ ಸಿದ್ಧತೆ, ಹೊಸಮುಖಗಳಿಗೆ ಜನತೆ ನೀಡಬಹುದಾದ ಆದ್ಯತೆ ಈ ಸಂಗತಿಗಳು ಬಿಜೆಪಿ ರಾಷ್ಟ್ರೀಯ ನಾಯಕರ ತಲೆಯಲ್ಲಿ ಹೊಕ್ಕಿ ಬಿಟ್ಟಿದೆ. ಇದರ ನಿಭಾಯಿಸಲು ಕೆಲವು ಕ್ಷೇತ್ರಗಳಲ್ಲಿಯಾದರೂ ಕೆಲವು ಡಾರ್ಕ್‌ಹಾರ್ಸ್‌ಗಳನ್ನು ಕಣಕ್ಕಿಳಿಸುವ ಚಿಂತನೆ ಈ ನಾಯಕರಿಗೆ ಮೂಡಿದ್ದರೆ ಅಚ್ಚರಿಯೇನಿಲ್ಲ.

ನಳಿನ್‌ಕುಮಾರ್ ಕಟೀಲ್ ಜಯ ಗಳಿಸಿದ್ದರು

ನಳಿನ್‌ಕುಮಾರ್ ಕಟೀಲ್ ಜಯ ಗಳಿಸಿದ್ದರು

ಈ ಹಿಂದೆ ಕರ್ನಾಟಕದಲ್ಲೂ ಈ ರೀತಿಯ ಪ್ರಯೋಗಗಳಲ್ಲಿ ಬಿಜೆಪಿ ಯಶ ಸಾಧಿಸಿರುವುದು ಎಲ್ಲರ ಕಣ್ಣ ಮುಂದೇ ಇದೆ. ಮಂಗಳೂರಿನಲ್ಲಿ ನಾಲ್ಕು ಬಾರಿ ಗೆದ್ದಿದ್ದ ಧನಂಜಯಕುಮಾರ್ ರವರನ್ನು ಕೈಬಿಟ್ಟು ನಳಿನ್‌ಕುಮಾರ್ ಕಟೀಲರನ್ನು ಅಭ್ಯರ್ಥಿಯಾಗಿಸಿದಾಗ ಬಹುತೇಕರಿಗೆ ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್‌ನ ದೈತ್ಯ ಎನಿಸಿಕೊಂಡಿದ್ದ ಜನಾರ್ದನ ಪೂಜಾರಿಯವರನ್ನೇ ಮಣಿಸಿ ನಳಿನ್‌ಕುಮಾರ್ ಜಯಗಳಿಸಿದ್ದರು.

ಕಳೆದ ಬಾರಿ ಅಂಕಣ ಬರೆದುಕೊಂಡಿದ್ದ ಪತ್ರಕರ್ತ ಪ್ರತಾಪಸಿಂಹರನ್ನು ಕಣಕ್ಕಿಳಿಸಿ, ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಪ್ರಬಲ ನಾಯಕ ಅಡಗೂರು ವಿಶ್ವನಾಥ್‌ರನ್ನು ಮಣಿಸಿದ ನಾಯಕರ ತಂತ್ರವೂ ಯಶಸ್ವಿಯಾಗಿತ್ತು. ಚಿತ್ರದುರ್ಗದಲ್ಲಿ ಹೆಸರೇ ಕೇಳಿರದ ಸಾಫ್ಟ್‌ವೇರ್ ಇಂಜಿನಿಯರ್ ಜನಾರ್ಧನಸ್ವಾಮಿಯವರ ಜಯದಲ್ಲೂ ಇದೇ ತಂತ್ರವೇ ಪ್ರತಿಫಲಿಸಿತ್ತು.

ಪಕ್ಷದ ಕಾರ್ಯಕರ್ತರನ್ನೇ ಅಭ್ಯರ್ಥಿಯನ್ನಾಗಿಸಿ

ಪಕ್ಷದ ಕಾರ್ಯಕರ್ತರನ್ನೇ ಅಭ್ಯರ್ಥಿಯನ್ನಾಗಿಸಿ

ಆದರೆ ಬೇರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸಿದಾಗ ಇದಕ್ಕೆ ತದ್ವಿರುದ್ಧವಾದ ಫಲಿತಾಂಶ ಬಂದಿರುವುದೂ ಎಲ್ಲರಿಗೂ ತಿಳಿದ ವಿಷಯ. ಬಿಜೆಪಿಯ ಸಂಘಟನೆ ಪ್ರಬಲವಾಗಿಲ್ಲದಿದ್ದ ಕಾಲದಲ್ಲಿಯೇ ತುಮಕೂರಿನಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ಇಡೀ ದೇಶದಲ್ಲಿ ಬಿಜೆಪಿ ಅಲೆದಿದ್ದರೂ ಕಳೆದ ಬಾರಿ ಬಿಜೆಪಿ ಗೆಲ್ಲಲಾಗಲೇ ಇಲ್ಲ ಎಂಬುದನ್ನು ಇದಕ್ಕೆ ಪೂರಕವಾಗಿ ಉಲ್ಲೇಖಿಸಬಹುದು.

ಆದ್ದರಿಂದ ಬೇರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕರೆತಂದು ಅಭ್ಯರ್ಥಿಗಳನ್ನಾಗಿಸುವುದಕ್ಕಿಂತ ಪಕ್ಷಕ್ಕೆ ಬದ್ಧತೆರುವ ಪಕ್ಷದ ಕಾರ್ಯಕರ್ತರನ್ನೇ ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂಬ ಮಾತಿನ ಹಿನ್ನಲೆಯಲ್ಲಿ ಹಲವಾರು ಹೆಸರುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ವೀರಾಜಪೇಟೆ ಕ್ಷೇತ್ರಕ್ಕೆ ಖ್ಯಾತ ಅಂಕಣಕಾರ ಸಂತೋಷ್‌ ತಮ್ಮಯ್ಯನವರ ಹೆಸರು ಹರಿದಾಡುತ್ತಿದ್ದು, ಈ ರೀತಿಯ ಚರ್ಚೆಗೆ ಇಂಬು ಕೊಟ್ಟಿದೆ.

ಸಂತೋಷ್ ತಮ್ಮಯ್ಯ ಅಭ್ಯರ್ಥಿಯಾಗಲು ಸೂಕ್ತ

ಸಂತೋಷ್ ತಮ್ಮಯ್ಯ ಅಭ್ಯರ್ಥಿಯಾಗಲು ಸೂಕ್ತ

ಸಂತೋಷ್ ತಮ್ಮಯ್ಯನವರಂತಹವರು ಅಭ್ಯರ್ಥಿಗಳಾಗುವುದು ಅತ್ಯಂತ ಸೂಕ್ತ ಎಂದೆನಿಸುವುದರಲ್ಲಿ ತಪ್ಪೇನಿಲ್ಲ. ಸಂತೋಷ್ ತಮ್ಮಯ್ಯನವರನ್ನು ಹತ್ತಿರದಿಂದ ನೋಡಿರುವ ಯಾರೂ ಪರಿವಾರದ ಬಗ್ಗೆ ಅವರಿಗೆ ಇರುವ ಬದ್ಧತೆಯನ್ನು ಪ್ರಶ್ನೆ ಮಾಡುವ ಹಾಗೆಯೇ ಇಲ್ಲ. ತಾವೆಷ್ಟು ಸಂಕಷ್ಟಗಳನ್ನು ಎದುರಿಸಿದರೂ ಅವರೆಂದೂ ವೈಚಾರಿಕವಾಗಿ ಸಂಘ ಪರಿವಾರದ ವಿಚಾರದಿಂದ ದೂರ ಸರಿದವರಲ್ಲ. ಸಮಯಕ್ಕೆ ತಕ್ಕ ಹಾಗೆ ಬಣ್ಣ ಬದಲಾಸುತ್ತಾ, ಅದನ್ನು ಅಕ್ಷರ ರೂಪಕ್ಕೆ ಇಳಿಸುವ ಪತ್ರಕರ್ತರಲ್ಲ. ಈ ಎಲ್ಲವನ್ನೂ ಅವರು ಮಾಡಿದ್ದರೆ ಇಷ್ಟೊತ್ತಿಗೆ ಅವರು "ಬೇರೆಯದೇ ರೀತಿಯಲ್ಲಿ" ಎತ್ತರಕ್ಕೆ ಬೆಳೆಯುತ್ತಿದ್ದರು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಹಣ, ಜಾತಿ, ಹೊರಗಿನಿಂದ ಕರೆ ತಂದ 'ಶ್ರೇಷ್ಟ ನಾಯಕ'ಎಲ್ಲವೂ ಇದ್ದರೂ ಈ ಎರಡೂ ಚುನಾವಣೆಗಳನ್ನು ಬಿಜೆಪಿ ಗೆಲ್ಲಲಾಗಲೇ ಇಲ್ಲ. ಈ ಎಲ್ಲವನ್ನು ಗಮನಿಸಿಯೇ ಬಿಜೆಪಿಯ ಹಿರಿಯ ನಾಯಕರು ಸಂತೋಷ್‌ ತಮ್ಮಯನವರಂತಹ ಡಾರ್ಕ್‌ಹಾರ್ಸ್‌ಗಳನ್ನು ಕಣಕ್ಕಿಳಿಸಲು ತಂತ್ರ ರೂಪಿಸಿರಬಹುದು.

ಬಿಜೆಪಿಯ ನಾಯಕರ ಚಿಂತನೆ ಕಾರ್ಯರೂಪ

ಬಿಜೆಪಿಯ ನಾಯಕರ ಚಿಂತನೆ ಕಾರ್ಯರೂಪ

ಈಗಾಗಲೇ ಪ್ರಚಲಿತದಲ್ಲಿರುವ ಹಳೇ ನಾಯಕರ ಬದಲಿಗೆ ಸಂತೋಷ್‌ ತಮ್ಮಯನವರಂತಹ ಹೊಸಬರನ್ನು ಅಭ್ಯರ್ಥಿಗಳನ್ನಾಗಿಸುವುದೂ ಒಂದು ತಂತ್ರ ಎಂಬುದು ಬಿಜೆಪಿ ನಾಯಕರಿಗೆ ಮನವರಿಕೆಯಾಗಿರಲೂಬಹುದು. ಇಂತಹ ಅಭ್ಯರ್ಥಿಗಳ ಬಗ್ಗೆ ಜನತೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಮತಚಲಾಯಿಸುವ ಸಾಧ್ಯತೆಯಿರುತ್ತದೆ. ಇಂತಹ ವ್ಯಕ್ತಿಗಳ ಪಕ್ಷ ನಿಷ್ಟೆಯ ಬಗ್ಗೆ ಸಂದೇಹವಿರುವುದಿಲ್ಲ. ಗೆದ್ದರೆ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ, ಸೋತರೆ ಸಂಘಟನೆ ಕಟ್ಟಲು ಪಕ್ಷದೊಳಗೆ ಉಳಿದು ನೆರವು ನೀಡುತ್ತಾರೆ. ಬಿಜೆಪಿಯ ನಾಯಕರ ಚಿಂತನೆ ಕಾರ್ಯರೂಪಕ್ಕೆ ಬರಲಿದೆಯೇ? ಕಾದು ನೋಡಬೇಕಾಗಿದೆ.

English summary
Elections 2018 : Columnist like Santosh Tammaiah should contest assembly elections urged his fans. Santosh's names is doing round for the Virajpet Assembly constituency ticket. Reportedly BJP observers are also keen on fielding a new face this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X