ಸಿಫೋರ್ ಸಮೀಕ್ಷೆ: ಬಿಜೆಪಿಯಿಂದ ಹಿಂದಿ ಹೇರಿಕೆಯಾಗುತ್ತಿದೆಯೇ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26: ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ವೇಳೆಯಲ್ಲಿ ಭಾಷೆ ಹಾಗೂ ಕನ್ನಡ ಅಸ್ಮಿತೆಯ ಬಗ್ಗೆ ಚುನಾವಣೆ ಪ್ರಚಾರದಲ್ಲಿ ಚರ್ಚೆ ಮಾಡಿವೆ. ಈ ಸಂದರ್ಭದಲ್ಲಿ ಸಿ- ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಮತ್ತೊಮ್ಮೆ ಸಂಚಲನ ಮೂಡಿಸುತ್ತಿದೆ.

ಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವು

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

Elections 2018 : C fore pre-poll survey result on Hindi imposition

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

ಸಿ ಫೋರ್ ಸಮೀಕ್ಷೆ: ಪ್ರತ್ಯೇಕ ನಾಡಧ್ವಜದ ಪರ ನಿಂತ ಜನತೆ

ಸಿಫೋರ್ ತನ್ನ ಸಮೀಕ್ಷೆ ಹೀಗಿತ್ತು: ಕರ್ನಾಟಕ ರಾಜ್ಯದ ಮೇಲೆ ಬಿಜೆಪಿ (ಕೇಂದ್ರ ಸರ್ಕಾರ) ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಆರೋಪಿಸುತ್ತಿದ್ದಾರೆ. ಇದನ್ನು ನೀವು ಒಪ್ಪುತ್ತೀರಾ? ಈ ಪ್ರಶ್ನೆಗೆ ಶೇ 59ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದು, ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇ 34ರಷ್ಟು ಮಂದಿ ಇಲ್ಲ ಎಂದಿದ್ದಾರೆ.ಶೇ 7ರಷ್ಟು ಮಂದಿ ನಮಗೆ ಗೊತ್ತಿಲ್ಲ ಎಂದು ಮತ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018 : C fore pre-poll survey with a question 'CM Siddaramaiah has alleged that BJP is trying to impose Hindi on Karnataka. Do you agree? gets results as 59 percent voted Yes. Here is the full result.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ