ಸಿಫೋರ್ ಸಮೀಕ್ಷೆ: ಕ್ಷೇತ್ರದ ಸಮಸ್ಯೆಗಳ ಪಟ್ಟಿ ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 27 : ವಿಧಾನಸಭಾ ಚುನಾವಣೆ 2018ಗೂ ಮುನ್ನ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ಭಾರಿ ಆಶ್ವಾಸನೆಗಳ ಮೂಟೆಯನ್ನು ಹೊತ್ತು ಮತದಾರರ ಮುಂದೆ ಸುರಿಯುತ್ತಿವೆ. ಆದರೆ, ರಾಜ್ಯದೆಲ್ಲೆಡೆ ಮೂಲ ಸೌಕರ್ಯ ಹಾಗೂ ಅಗತ್ಯ ಸೌಲಭ್ಯಗಳ ಕೊರತೆ ಇದ್ದೇ ಇದೆ.

ಈ ಸಂದರ್ಭದಲ್ಲಿ ಸಿ- ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಮತ್ತೊಮ್ಮೆ ಮತದಾರರನ್ನು ಚಿಂತನೆಗೆ ದೂಡಿದೆ. ಕ್ಷೇತ್ರದ ಸಮಸ್ಯೆಗಳ ಪೈಕಿ ಕುಡಿಯುವ ನೀರಿನ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.

ಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವು

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

Elections 2018 : C fore pre-poll survey major problems in constituency

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

ಸಿಫೋರ್ ಸಮೀಕ್ಷೆ: ಬಿಜೆಪಿಯಿಂದ ಹಿಂದಿ ಹೇರಿಕೆಯಾಗುತ್ತಿದೆಯೇ?

ನಿಮ್ಮ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳೇನು ಎಂಬ ಪ್ರಶ್ನೆಗ ಮೂರು ಪ್ರಾಶಸ್ತ್ಯ ಉತ್ತರ ಸಿಕ್ಕಿದ್ದು, ಮೂರರ ಪೈಕಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಕಳಪೆ ರಸ್ತೆ ಅಗ್ರಸ್ಥಾನ ಪಡೆದುಕೊಂಡಿವೆ. ಸಮಸ್ಯೆಗಳ ಪಟ್ಟಿ ಹೀಗಿದೆ.
* ಕುಡಿಯುವ ನೀರಿನ ಬರ -ಶೇ 32, ಶೇ 26 ಹಾಗೂ ಶೇ 9
* ಒಳಚರಂಡಿ ವ್ಯವಸ್ಥೆ-ಶೇ 23, ಶೇ 6 ಹಾಗೂ ಶೇ 4
* ಕಳಪೆ ರಸ್ತೆಗಳು- ಶೇ 14, ಶೇ 25 ಹಾಗೂ ಶೇ 28
* ಕಸದ ಸಮಸ್ಯೆ- ಶೇ 10, ಶೇ 8 ಹಾಗೂ ಶೇ 21
* ನಿರುದ್ಯೋಗ- ಶೇ 5, ಶೇ 5 ಹಾಗೂ ಶೇ 2
* ನೀರಾವರಿಗೆ ಜಲಕ್ಷಾಮ- ಶೇ 5, ಶೇ 8 ಹಾಗೂ ಶೇ 17
* ವಿದ್ಯುತ್ ಕೊರತೆ- ಶೇ 3, ಶೇ 15 ಹಾಗೂ ಶೇ 8
* ಕೃಷಿ ಉತ್ಪನ್ನ ಮಾರುಕಟ್ಟೆ- ಶೇ 2, ಶೇ 1 ಹಾಗೂ ಶೇ 5
* ಸಾಲ ಸೌಲಭ್ಯ ಸಮಸ್ಯೆ- ಶೇ 2, ಶೇ 2 ಹಾಗೂ ಶೇ 2
* ಕಾನೂನು ಸುವ್ಯವಸ್ಥೆ- ಶೇ 1, ಶೇ 1 ಹಾಗೂ ಶೇ 1
* ಭ್ರಷ್ಟಾಚಾರ- ಶೇ 1, ಶೇ 1 ಹಾಗೂ ಶೇ 1
* ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ- ಶೇ 1, ಶೇ 1 ಹಾಗೂ ಶೇ 1

ಸಿ ಫೋರ್ ಸಮೀಕ್ಷೆ: ಪ್ರತ್ಯೇಕ ನಾಡಧ್ವಜದ ಪರ ನಿಂತ ಜನತೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018 : C fore pre-poll survey with a question 'What are the main problems in your constituency? gets results as 32 percent voted for Drinking water shortage. Here is the full result.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ