ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಫೋರ್ ಸಮೀಕ್ಷೆ : ಎರಡು ಬಾರಿ ಫಲಿತಾಂಶದಲ್ಲೂ 'ಕೈ' ಮೇಲುಗೈ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 28: ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಕದನ ಬಿಸಿ ಏರಿಕೆಯಾಗುತ್ತಿದೆ. ಚುನಾವಣಾ ಪೂರ್ವ ಹಾಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳತ್ತ ಜನರು ಕುತೂಹಲದಿಂದ ನೋಡುತ್ತಿದ್ದಂತೆ. ಸದ್ಯಕ್ಕೆ ಸಿಫೋರ್ ಸಂಸ್ಥೆ ನೀಡಿದ ಚುನಾವಣಾ ಪೂರ್ವ ಸಮೀಕ್ಷೆಯತ್ತ ಗಮನ ಹರಿಸಿದರೆ, 2017ರಲ್ಲಿ ಹಾಗೂ ಇತ್ತೀಚಿನ ಸಮೀಕ್ಷೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.

ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಲಿದೆ.ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ ಎಂದು ಸಿ ಫೋರ್ ಸಂಸ್ಥೆ ಪ್ರಕಟಿಸಿದೆ.

2013ರ ಅಸೆಂಬ್ಲಿ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದು ನಿಜವಾಗಿದ್ವಾ?2013ರ ಅಸೆಂಬ್ಲಿ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದು ನಿಜವಾಗಿದ್ವಾ?

ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಲಿದೆ.ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ ಎಂದು ಸಿ ಫೋರ್ ಸಂಸ್ಥೆ ಪ್ರಕಟಿಸಿದೆ. 2017 ಹಾಗೂ 2018ರಲ್ಲಿ ಪ್ರಕಟವಾದ ಸಿಫೋರ್ ಸಮೀಕ್ಷೆಯ ತುಲನಾತ್ಮಕ ವರದಿ ಮುಂದಿದೆ...

ಸಿ ಫೋರ್ ಸಮೀಕ್ಷೆ 2017ರಲ್ಲಿ

ಸಿ ಫೋರ್ ಸಮೀಕ್ಷೆ 2017ರಲ್ಲಿ

* 2017ರ ಜುಲೈ 19ರಿಂದ ಆಗಸ್ಟ್ 10ರವರೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ.
* ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶನ
* ಈ ಪೈಕಿ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳ ವಿವಿಧ ಧರ್ಮ, ಜಾತಿಯ ಜನರನ್ನು ಮಾತನಾಡಿಸಿ ಸಮೀಕ್ಷೆ ವರದಿ ಪ್ರಕಟಿಸಲಾಗಿತ್ತು.

ಸಿ ಫೋರ್ ಸಮೀಕ್ಷೆ 2018ರಲ್ಲಿ

ಸಿ ಫೋರ್ ಸಮೀಕ್ಷೆ 2018ರಲ್ಲಿ

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ. ಈ ಪೈಕಿ 326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ. 326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ

ಶೇಕಡಾವಾರು ಮತಗಳ ಹೋಲಿಕೆ

ಶೇಕಡಾವಾರು ಮತಗಳ ಹೋಲಿಕೆ

2017: ಸಿ ಫೋರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಶೇಕಡಾವಾರು ಮತಗಳು ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸಿಗಬಹುದು ಎಂಬ ಲೆಕ್ಕ ಇಲ್ಲಿದೆ
ಕಾಂಗ್ರೆಸ್‌ : ಶೇ 43
ಬಿಜೆಪಿ : ಶೇ 32
ಜೆಡಿಎಸ್‌ : ಶೇ 17
ಇತರ ಪಕ್ಷಗಳಿಗೆ ಶೇ 8 ಸಿಗುವ ನಿರೀಕ್ಷೆಗಳಿವೆ.
****
2018ರಲ್ಲಿ ನಡೆಸಿದ ಸಮೀಕ್ಷೆಯಂತೆ
* ಕಾಂಗ್ರೆಸ್ ತನ್ನ ಮತಗಳಿಕೆಯನ್ನು ಶೇಕಡಾ 9ರಷ್ಟು ಹೆಚ್ಚಿಸಿಕೊಂಡು, ಶೇಕಡಾ 46 ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
* ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಶೇಕಡಾ 31 ಮತ್ತು ಶೇಕಡಾ 16 ಮತಗಳನ್ನು ಪಡೆಯಲಿದೆ ಎಂದು ಈ ಸರ್ವೆಯಲ್ಲಿ ತಿಳಿದು ಬಂದಿದೆ.

ಯಾವ ಪಕ್ಷಕ್ಕೆ ಎಷ್ಟು ಮತ?

ಯಾವ ಪಕ್ಷಕ್ಕೆ ಎಷ್ಟು ಮತ?

2017ರ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷವು 114ರ ಮ್ಯಾಜಿಕ್ ನಂಬರ್ ದಾಟುವ ನಿರೀಕ್ಷೆಯಿದೆ.
* ಕಾಂಗ್ರೆಸ್ 120 ರಿಂದ 132ರವರೆಗೆ ಸ್ಥಾನ
* ಬಿಜೆಪಿಗೆ 60 ರಿಂದ 72 ಸ್ಥಾನಗಳು ಸಿಗಲಿವೆ.
* ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ.
* ಇತರೆ ಪಕ್ಷಗಳಿಗೆ 1ರಿಂದ 6 ಸ್ಥಾನಗಳು ಬರಲಿವೆ.
***
2018ರ ಸಮೀಕ್ಷೆಯಂತೆ ಹೆಚ್ಚು ಸ್ಥಾನ ಗಳಿಸಲಿರುವ ಕಾಂಗ್ರೆಸ್ 126 ಸ್ಥಾನಗಳನ್ನು ಗಳಿಸಬಹುದು.
ಮಿಕ್ಕಂತೆ ಬಿಜೆಪಿಗೆ 40 ರಿಂದ 70 ಸ್ಥಾನಗಳು ಸಿಗಬಹುದು
ಜೆಡಿಎಸ್ 27 ರಿಂದ 40 ಸ್ಥಾನಗಳನ್ನು ಪಡೆಯಬಹುದು
ಇತರೆ ವಿಭಾಗದಲ್ಲಿ 1 ಸ್ಥಾನ ಮಾತ್ರ ಸಿಗಲಿದೆ.

2017ರಲ್ಲಿ ಎಲ್ಲಾ ವಯಸ್ಕರಿಗೂ ಕಾಂಗ್ರೆಸ್ ಫೇವರಿಟ್

2017ರಲ್ಲಿ ಎಲ್ಲಾ ವಯಸ್ಕರಿಗೂ ಕಾಂಗ್ರೆಸ್ ಫೇವರಿಟ್

2017ರಲ್ಲಿ
ಕಾಂಗ್ರೆಸ್ :
18-25 ವರ್ಷ : 42%,
26-65: 43%,
36-50: 44%
50 ವರ್ಷಕ್ಕಿಂತ ಮೇಲ್ಪಟ್ಟು:47%

ಬಿಜೆಪಿ :
18-25 ವರ್ಷ : 36%
26-65: 32%
36-50: 28%
50 ವರ್ಷಕ್ಕಿಂತ ಮೇಲ್ಪಟ್ಟು: 47%

ಜೆಡಿಎಸ್
18-25 ವರ್ಷ : 19%
26-65: 16%
36-50: 17%
50 ವರ್ಷಕ್ಕಿಂತ ಮೇಲ್ಪಟ್ಟು: 47%
ಇತರೆ
18-25 ವರ್ಷ : 3%
26-65: 9%
36-50: 11%
50 ವರ್ಷಕ್ಕಿಂತ ಮೇಲ್ಪಟ್ಟು: 7%

ಯುವ ಮತದಾರರಿಂದ ಕಾಂಗ್ರೆಸಿಗೆ ಬೆಂಬಲ

ಯುವ ಮತದಾರರಿಂದ ಕಾಂಗ್ರೆಸಿಗೆ ಬೆಂಬಲ

ಎಲ್ಲಾ ವಯಸ್ಸಿನ ಮತದಾರರೂ ತಮಗೆ ಕಾಂಗ್ರೆಸ್ ಅತ್ಯುತ್ತಮ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದಾರೆ. 18 - 25 ವರ್ಷ ಒಳಗಿನ ಶೇಕಡಾ 46 ಯುವ ಮತದಾರರು ಕಾಂಗ್ರೆಸಿಗೆ ಬೆಂಬಲ ಸೂಚಿಸಿದ್ದಾರೆ. 26 - 35 ವರ್ಷದೊಳಗಿನ ಮತದಾರರಲ್ಲಿ ಶೇಕಡಾ 47 ಜನರು ನಮಗೆ ಕಾಂಗ್ರೆಸ್ಸೇ ಉತ್ತಮ, ಕಾಂಗ್ರೆಸಿಗೆಯೇ ನಮ್ಮ ಬೆಂಬಲ ಎಂದಿದ್ದಾರೆ. 36 - 50 ವರ್ಷದೊಳಗಿನ ಮತದಾರರಲ್ಲಿ ಶೇಕಡಾ 43 ಜನರು ಕಾಂಗ್ರೆಸ್ ಪಕ್ಷವನ್ನು ಸಪೋರ್ಟ್ ಮಾಡಿದ್ದಾರೆ. 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಮತದಾರರು ಕಾಂಗ್ರೆಸನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಈ ವಯಸ್ಸಿನವರಲ್ಲಿ ಶೇಕಡಾ 50ರಷ್ಟು ಜನರಿಗೆ ಕಾಂಗ್ರೆಸ್ ಬಗ್ಗೆ ಒಲವಿದೆ.

ಸಿ ಫೋರ್ ಸಮೀಕ್ಷೆ 2013 ಹಾಗೂ ಫಲಿತಾಂಶ

ಸಿ ಫೋರ್ ಸಮೀಕ್ಷೆ 2013 ಹಾಗೂ ಫಲಿತಾಂಶ

(2013 ಸಮೀಕ್ಷಾ ಫಲಿತಾಂಶ) ತೆಹೆಲ್ಕಾ ಮತ್ತು ಸಿವೋಟರ್ ಜಂಟಿ ಸಮೀಕ್ಷೆ: ಕಾಂಗ್ರೆಸ್ 114, ಬಿಜೆಪಿ 55, ಜೆಡಿಎಸ್ 34, ಕೆಜೆಪಿ 11, ಇತರರು 9.

(2013 ಸಮೀಕ್ಷಾ ಫಲಿತಾಂಶ) ಸಿಫೋರ್, ಸುವರ್ಣ ನ್ಯೂಸ್ ಜಂಟಿ ಸಮೀಕ್ಷೆ: ಕಾಂಗ್ರೆಸ್ 119-120, ಬಿಜೆಪಿ 49-60, ಜೆಡಿಎಸ್ 34-41, ಕೆಜೆಪಿ 5-12, ಇತರರು 10-15.

2013ರ ಅಸೆಂಬ್ಲಿ ಚುನಾವಣಾ ಫಲಿತಾಂಶ: ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಇತರರು 16

English summary
Elections 2018 : C fore Pre – Poll Survey twice(2017 and 2018) predicted victory for Siddaramaiah led Congress government. C fore predictions for 2008 and 2013 assembly elections in Karnataka have been 99% accurate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X