ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡ್ ಎದುರು ಸ್ಪರ್ಧೆಗೆ ಅಂಧ ಸ್ವಾಮೀಜಿ ಉತ್ಸಾಹ

By ಚನ್ನಬಸವೇಶ್ವರ
|
Google Oneindia Kannada News

ಬೆಂಗಳೂರು, ಏಪ್ರಿಲ್ 03: ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಂಧ ಸ್ವಾಮೀಜಿ ಬಸವಾನಂದ ಉತ್ಸುಕರಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಚಿವರಾಗಿದ್ದ ಹಾಲಿ ಶಾಸಕ, ಗಣಿ ದೊರೆ ಸಂತೋಷ್‌ ಲಾಡ್ ಅವರ ಕ್ಷೇತ್ರವಾಗಿರುವುದರಿಂದ ಇಲ್ಲಿ ತೀವ್ರ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ.

ಬಸವ ತತ್ವದ ಪರಿಪಾಲಕರಾದ ಬಸವಾನಂದ ಸ್ವಾಮೀಜಿ, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮನಗುಂಡಿ ಗ್ರಾಮದಲ್ಲಿ ಆಶ್ರಮ ನಡೆಸುತ್ತಿದ್ದಾರೆ. ಸ್ವಾಮೀಜಿ ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಸವಾನಂದ ಸ್ವಾಮೀಜಿ ಅವರ ರಾಜಕಾರಣದೆಡೆಗಿನ ಆಸಕ್ತಿ ಮತ್ತು ರಾಜಕೀಯ ನಿಲುವುಗಳ ಕುರಿತು ಒನ್ ಇಂಡಿಯಾ ಅವರೊಂದಿಗೆ ಮಾತಿಗಿಳಿಯಿತು.

ಪ್ರ: ಆಧ್ಯಾತ್ಮಿಕ ವ್ಯಕ್ತಿಯಾಗಿ ನಿಮ್ಮಲ್ಲಿ ರಾಜಕೀಯದ ಆಸಕ್ತಿ ಮೂಡಿದ್ದು ಹೇಗೆ?
ಉ: ನಾನು 9ನೇ ತರಗತಿಯಲ್ಲಿದ್ದಾಗಿನಿಂದಲೇ ರಾಷ್ಟ್ರೀಯ ಪಕ್ಷಗಳತ್ತ ಆಸಕ್ತಿ ಹುಟ್ಟಿಕೊಂಡಿತ್ತು. 90ರ ದಶಕದಲ್ಲಿ ವಿ,ಪಿ. ಸಿಂಗ್‌ ಅವರು ರಾಜೀವ್ ಗಾಂಧಿ ಸರ್ಕಾರದಿಂದ ಹೊರಬಂದಿದ್ದರು. ಕೇಂದ್ರದಲ್ಲಿ ಸ್ಥಿರ ಸರ್ಕಾರ ಇರಬೇಕು ಎಂಬುದನ್ನು ನಾನು ಸದಾ ಬಯಸುತ್ತೇನೆ. ಬಳಿಕ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳೇ ಅಸ್ತಿತ್ವಕ್ಕೆ ಬರುತ್ತಿದ್ದದ್ದು ಬೇಸರವುಂಟು ಮಾಡುತ್ತಿತ್ತು. ೨೦೧೩ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಎದುರು ಸ್ಪರ್ಧಿಸಲು ಬಯಸಿದ್ದೆ. ಆದರೆ ಕೂದಲೆಳೆಯಲ್ಲಿ ಟಿಕೆಟ್ ಕೈತಪ್ಪಿತು. ಆ ಸಂದರ್ಭದಲ್ಲಿ ನನಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಇರಲಿಲ್ಲ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತನಾದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

2008ರಿಂದಲೂ ಮೋದಿ ಅವರು ಕಾರ್ಯಗಳನ್ನು ನಾನು ನೋಡುತ್ತಿದ್ದೇನೆ. 2008ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ತೀವ್ರ ಬೇಸರವಾಯಿತು. 2008ರಲ್ಲಿಯೇ ಮೋದಿ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುನ್ನ ಗುಜರಾತ್‌ನಲ್ಲಿ ಅವರನ್ನು ಎರಡು ಭಾರಿ ಭೇಟಿ ಮಾಡಿದ್ದೆ. 45 ನಿಮಿಷಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದೆ (ಈ ಮಾತುಕತೆಯ ವಿವರವನ್ನು ಬಸವಾನಂದ ಸ್ವಾಮೀಜಿ ನೀಡಲಿಲ್ಲ). ಸಂತೋಷ್‌ ಲಾಡ್ 10 ವರ್ಷದಿಂದ ಶಾಸಕರಾಗಿದ್ದಾರೆ. ಕಲಘಟಕಿಯಿಂದ ಆಯ್ಕೆಯಾದ ಬಳಿಕ ಅವರು ಕ್ಷೇತ್ರವನ್ನೇ ತೊರೆದಿದ್ದಾರೆ. ನಾನು ದೃಷ್ಟಿಹೀನ ವ್ಯಕ್ತಿ. ನನಗೆ ನನ್ನದೇಯಾದ ಮಿತಿಗಳಿವೆ. ಆದರೂ, ಸ್ಥಳೀಯ ರಾಜಕಾರಣದೆಡೆಗೆ ಗಮನ ಹರಿಸಲು ಬಯಸಿದ್ದೇನೆ. ಶಾಸಕನಾಗಿ ಚುನಾಯಿತನಾಗಬೇಕೆಂಬ ಆಸೆ ಹೊಂದಿದ್ದೇನೆ. ನಾನು ಅಂಧನಾಗಿದ್ದರೂ, ಜನರ ಸೇವೆಗೆ ಸಂಕಲ್ಪ ಮಾಡಿದ್ದೇನೆ.

ಪ್ರ: ನಿಮ್ಮದೇ ಕ್ಷೇತ್ರದಲ್ಲಿ ನಿಮಗೆ ಸ್ಪರ್ಧಿಗಳಿಲ್ಲವೇ?

ಪ್ರ: ನಿಮ್ಮದೇ ಕ್ಷೇತ್ರದಲ್ಲಿ ನಿಮಗೆ ಸ್ಪರ್ಧಿಗಳಿಲ್ಲವೇ?

ಉ: ವಾಸ್ತವವಾಗಿ ಕಳೆದ ಮೂರು ವರ್ಷಗಳಿಂದ ನಾನು ಹೆಚ್ಚು ಕ್ರಿಯಾಶೀಲನಾಗಿರಲಿಲ್ಲ. ಈಗ 6 ತಿಂಗಳಿನಿಂದ ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. ನಿಜ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಅನೇಕರಿದ್ದಾರೆ. ಸಿ.ಎಂ. ನಿಂಬಣ್ಣವರ್, ಮಹೇಶ್‌ ತೆಂಗಿನಕಾಯಿ ಮತ್ತು ಇನ್ನೂ ಒಬ್ಬರು ಮುಂಚೂಣಿಯಲ್ಲಿದ್ದಾರೆ. ಪಕ್ಷದ ಹೈಕಮಾಂಡ್ ನನ್ನ ಉಮೇದುವಾರಿಕೆಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೂ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ.

ಪ್ರ: ಸ್ವಾಮೀಜಿಗಳು ಶಕ್ತಿ ರಾಜಕಾರಣದ ಭಾಗವಾಗುವುದು ಸರಿಯೇ?

ಪ್ರ: ಸ್ವಾಮೀಜಿಗಳು ಶಕ್ತಿ ರಾಜಕಾರಣದ ಭಾಗವಾಗುವುದು ಸರಿಯೇ?

ಉ: ಅರಿಸ್ಟಾಟಲ್ ಹೇಳುತ್ತಾನೆ, 'ತತ್ವಜ್ಞಾನಿಗಳು ಜಗತ್ತನ್ನು ಆಳಬೇಕು' ಎಂದು. ಆದರೆ, ಮತಾಂಧತೆಯ ರಾಜಕೀಯದ ಬಗ್ಗೆ ನನಗೆ ತಿರಸ್ಕಾರವಿದೆ. ನಾನು ದೇಶ ಮತ್ತು ಧರ್ಮವನ್ನು ಪ್ರೀತಿಸುವ ರಾಷ್ಟ್ರೀಯವಾದಿ. ನನ್ನ ಆದರ್ಶಗಳು ಬಿಜೆಪಿಯೊಂದಿಗೆ ಹೊಂದಿಕೆಯಾಗುತ್ತದೆ. ರಾಜಕಾರಣದಲ್ಲಿ ನಾವು ಪ್ರಸ್ತುತ ನಾಲ್ಕು ಗಹನ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅನೈತಿಕತೆ, ಭ್ರಷ್ಟಾಚಾರ, ಜಾತೀಯತೆ, ಕುಟುಂಬ ರಾಜಕಾರಣ. ಈ ಸವಾಲುಗಳನ್ನು ಎದುರಿಸಲು ಆಧ್ಯಾತ್ಮಿಕ ನಾಯಕರು ರಾಜಕೀಯ ಪ್ರವೇಶಿಸಬೇಕು.

ಪ್ರ: ಹಣ ಮತ್ತು ತೋಳ್ಬಲದಿಂದ ನಡೆಯುವ ಚುನಾವಣೆಯಲ್ಲಿ ನಿಮ್ಮ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ?

ಪ್ರ: ಹಣ ಮತ್ತು ತೋಳ್ಬಲದಿಂದ ನಡೆಯುವ ಚುನಾವಣೆಯಲ್ಲಿ ನಿಮ್ಮ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ?

ಉ: ನನ್ನ ಕ್ಷೇತ್ರದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಶೇ 25ರಷ್ಟು ಜನರು ಮದ್ಯವ್ಯಸನಿಗಳು. ಮದ್ಯಪಾನ ಮಾಡದ ಇನ್ನುಳಿದ ಶೇ 75ರಷ್ಟು ಮಂದಿ ಕುರಿತು ನಾನು ಭರವಸೆ ಹೊಂದಿದ್ದೇನೆ. ನನ್ನ ನೈತಿಕತೆ ಮತ್ತು ಆಧ್ಯಾತ್ಮಿಕತೆಯಲ್ಲಿ ಯಾವುದೇ ರಾಜಿಯಾಗದಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ದೃಢ ಸಂಕಲ್ಪ ಮಾಡಿದ್ದೇನೆ. ನನಗೆ ಟಿಕೆಟ್ ದೊರೆತರೆ ಮತಕ್ಕಾಗಿ ಹಣ ಮತ್ತು ಹೆಂಡ ಹಂಚುವುದಿಲ್ಲ.

ಪ್ರ: ರಾಜಕೀಯ ಪ್ರವೇಶಿಸಲು ಯೋಗಿ ಆದಿತ್ಯನಾಥ ಅವರ ಪ್ರಭಾವ ಕಾರಣವೇ?

ಪ್ರ: ರಾಜಕೀಯ ಪ್ರವೇಶಿಸಲು ಯೋಗಿ ಆದಿತ್ಯನಾಥ ಅವರ ಪ್ರಭಾವ ಕಾರಣವೇ?

ಉ: ಯೋಗಿ ಆದಿತ್ಯನಾಥ ರಾಜಕೀಯದಲ್ಲಿರುವುದು ನನಗೆ ಸಂತಸ ನೀಡಿದೆ. ಆದರೆ, ನನಗೆ ಅವರ ಬಗ್ಗೆ ತಿಳಿದಿದ್ದು 2014ರಲ್ಲಿಯೇ. ನನಗೆ ಅವರು ಆದರ್ಶವಲ್ಲ ಎಂದು ಹೇಳಬಲ್ಲೆ. ಆದರೆ, ಭಾರತೀಯ ರಾಜಕೀಯದಲ್ಲಿ ಅವರ ಪಾತ್ರ ನನ್ನನ್ನು ಉತ್ತೇಜಿಸಿದೆ. ರಾಜಕೀಯ ಮತ್ತು ಅಧ್ಯಾತ್ಮ ಎರಡೂ ಜತೆಯಾಗಿ ಸಾಗಬಹುದು ಎಂಬುದಕ್ಕೆ ಇದೇ ಉದಾಹರಣೆ. ಉತ್ತರ ಪ್ರದೇಶದಲ್ಲಿ ಅಧ್ಯಾತ್ಮ ಮತ್ತು ರಾಜಕೀಯವನ್ನು ಯಶಸ್ವಿಯಾಗಿ ಸಮ್ಮಿಳಿತಗೊಳಿಸಿದ ಇತಿಹಾಸ ಯೋಗಿ ಪರಂಪರೆಯದು. ಧರ್ಮ ಮತ್ತು ರಾಜಕೀಯ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರಭಾವಿತಗೊಂಡಿದೆ. ಅವರ ತ್ಯಾಗವನ್ನು ವ್ಯರ್ಥ ಮಾಡಬಾರದು.

ಪ್ರ: ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಆದ್ಯತೆಗಳೇನು?

ಪ್ರ: ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಆದ್ಯತೆಗಳೇನು?

ಉ: ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಓದಿದ್ದು ಮೈಸೂರಿನಲ್ಲಿ. 15 ವರ್ಷದಿಂದ ಕಲಘಟಗಿಯಲ್ಲಿ ನೆಲೆಸಿದ್ದೇನೆ. ನೀರಾವರಿ ಸೌಲಭ್ಯದ ಕೊರತೆಯಿಂದ ರೈತರು ಸಂಕಷ್ಟಪಡುವುದನ್ನು ಕಂಡಿದ್ದೇನೆ. ಶೈಕ್ಷಣಿಕ ಹಿಂದುಳಿದಿರುವಿಕೆ ಎರಡನೆಯ ಪ್ರಮುಖ ಕಳವಳಕಾರಿ ಅಂಶ. ಕ್ಷೇತ್ರದಲ್ಲಿ 142 ಗ್ರಾಮಗಳು ಮತ್ತು 8 ಜಿಲ್ಲಾ ಪಂಚಾಯಿತಿ ಸೀಟುಗಳಿವೆ. ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಜನರನ್ನು ಸಂಪರ್ಕಿಸಿದ್ದೇನೆ. ಚುನಾವಣಾ ಕೆಲಸಗಳಿಗಾಗಿ ನನ್ನ ಪೂರ್ವನಿಗದಿತ ಕಾರ್ಯಕ್ರಮಗಳನ್ನು ಮತ್ತು ಧರ್ಮೋಪದೇಶಗಳನ್ನು ಸ್ಥಗಿತಗೊಳಿಸಿದ್ದೇನೆ.

English summary
Basavanand Swamiji, a visually challenged Lingayat seer from Karnataka, is in the race to contest the upcoming Karnataka assembly elections on a BJP ticket from the Kalghatgi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X