ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವನಗೌಡ ವಿರುದ್ಧ ಬಸನಗೌಡ, ಇದು ಅಮಿತ್ ಶಾ ತಂತ್ರ

By Mahesh
|
Google Oneindia Kannada News

ವಿಜಯಪುರ, ಫೆಬ್ರವರಿ 14: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಪಾಟೀಲರ ಆಸೆಗೆ ಇಂಬು ನೀಡುವ ಸುದ್ದಿಯೂ ಬಂದಿದೆ.

ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಮಲ್ಲನಗೌಡ ಬಸವನಗೌಡ ಪಾಟೀಲ್ (ಎಂ.ಬಿ ಪಾಟೀಲ್) ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಲ್ಲಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಂತ್ರ ಹೂಡಿದ್ದಾರೆ ಎಂಬ ಸುದ್ದಿಯಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿರುವ ಯತ್ನಾಳ್ ಅವರು ತುಂಬಾ ಹುಮ್ಮಸ್ಸಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಎಂ.ಬಿ ಪಾಟೀಲ್ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಎಂ.ಬಿ ಪಾಟೀಲ್

ಮಾಜಿ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರಲು ಮೂರು ಷರತ್ತುಗಳನ್ನು ವಿಧಿಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಷರತ್ತುಗಳೇನು ಇಲ್ಲ, ನಾನು ಕಳೆದ ಮೂರು ದಶಕಗಳಿಂದ ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದಿದ್ದೀನಿ, ನಾನು ಬಿಜೆಪಿ ಸೇರೋದು ಜನರ ಅಪೇಕ್ಷೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ.

ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಮಲ್ಲನಗೌಡ ಬಸವನಗೌಡ ಪಾಟೀಲ್ (ಎಂ.ಬಿ ಪಾಟೀಲ್) ಅವರಿಗೆ ಸೆಡ್ಡು ಹೊಡೆಯಲು ಬಸನಗೌಡ ಪಾಟೀಲರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆಯೇ? ಇದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಹೂಡಿರುವ ಬಹುದೊಡ್ಡ ತಂತ್ರವೇ? ಹೀಗೊಂದು ಚರ್ಚೆ ಆರಂಭವಾಗಿದೆ.

ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ

ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ

ಕೇಂದ್ರದ ನಾಯಕರು ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳಲೇಬೇಕು ಎಂದು ನಿರ್ಧರಿಸಿದ್ದಾರೆ, ಯಾವುದೇ ಭ್ರಷ್ಟಾಚಾರದಲ್ಲಿ, ಹಗರಣದಲ್ಲಿ ಇಲ್ಲದ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಅನುಕೂಲ ಆಗಲಿದೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ, ಹಾಗಾಗಿ ನನ್ನನ್ನು ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ

'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ

ಲೋಕಸಭೆ ಸದಸ್ಯರೂ ಆಗಿದ್ದ ಎಂ.ಬಿ ಪಾಟೀಲ್ ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸದ್ಯ ಪಾಟೀಲರ ಹೆಸರು ಚಾಲ್ತಿಗೆ ಬರಲು ಪ್ರಮುಖ ಕಾರಣ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ.53 ವರ್ಷ ವಯಸ್ಸಿನ ಎಂ.ಬಿ. ಪಾಟೀಲರು ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ಬಬಲೇಶ್ವರ ಹಾಗೂ ಬಿಜಾಪುರ ನಗರ

ಬಬಲೇಶ್ವರ ಹಾಗೂ ಬಿಜಾಪುರ ನಗರ

ಎಂಬಿ ಪಾಟೀಲರು 2013ರ ಚುನಾವಣೆಯಲ್ಲಿ ಅವರು ಬಬಲೇಶ್ವರ ಕ್ಷೇತ್ರದಲ್ಲಿ 62,061 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ವಿಜಯಕುಮಾರ್ ಪಾಟೀಲ್ ರನ್ನು 4,355 ಮತಗಳಿಂದ ಸೋಲಿಸಿದ್ದರು.

ಬಿಜಾಪುರ ನಗರ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್ಸಿನ ಮಕ್ಬುಲ್ ಎಸ್ ಭಗವಾನ್ ಅವರು 48,615 ಮತಗಳನ್ನು ಗಳಿಸಿದ್ದರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಸನಗೌದ ಆರ್ ಪಾಟೀಲ್ (ಯತ್ನಾಳ್) ಅವರು 39,235 ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು.

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ

ಮುದ್ದೇಬಿಹಾಳ: ಸಿ.ಎಸ್ ನಾಡಗೌಡ(ಕಾಂಗ್ರೆಸ್) 34,747 ಮತಗಳು, ಬಿಜೆಪಿಯ ವಿಜೆ ದೇಶ್ ಮುಖ್ 12,202 ಮತಗಳು
ದೇವರ ಹಿಪ್ಪರಗಿ : ಅಮಿನಪ್ಪಗೌಡ ಪಾಟೀಲ್ (ಕಾಂಗ್ರೆಸ್) 36,231 ಮತಗಳು, ಬಿಜೆಪಿಯ ಸೋಮಣ್ಣಗೌಡ ಬಿ ಪಾಟೀಲ್ (ಬಿಜೆಪಿ)
ಬಸವನ ಬಾಗೇವಾಡಿ : ಶಿವಾನಂದ ಪಾಟೀಲ್ (ಕಾಂಗ್ರೆಸ್) 56,239, ಎಸ್. ಕೆ ಬೆಳ್ಳುಬ್ಬಿ(ಬಿಜೆಪಿ)
ನಾಗಾಠಾಣ: ರಾಜ ಅಲಗೂರು (ಕಾಂಗ್ರೆಸ್) 45,570, ಜೆಡಿಎಸ್ ನ ಡಿ.ಪಿ ಚವಾಣ್
ಇಂಡಿ : ಯಶವಂತರಾಯಗೌಡ ಪಾಟೀಲ್ (ಕಾಂಗ್ರೆಸ್) 58,562, ರವಿಕಾಂತ್ ಸಂಕಪ್ಪ ಪಾಟೀಲ್ (ಕೆಜೆಪಿ)
ಸಿಂಧಗಿ : ಬಿ.ಆರ್ ಬಾಳಪ್ಪ(ಬಿಜೆಪಿ) 37,834, ಮನಗುಳ್ಳಿ ಮಾರಪ್ಪ ಚನ್ನವೀರಪ್ಪ(ಜೆಡಿಎಸ್)

English summary
MLC Basanagowda Patil Yathnal who was expelled from BJP now ready to join BJP again. BJP president Amit Shah playing a tactical move to field him against powerful minister MB Patil in Viajaypura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X