ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 20ರ ತನಕ ಮತದಾರರ ಪಟ್ಟಿ ಪರಿಷ್ಕರಣೆ

|
Google Oneindia Kannada News

ಬೆಂಗಳೂರು, ನವೆಂಬರ್ 05 : ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2019 ಅಭಿಯಾನ ಹಮ್ಮಿಕೊಂಡಿದೆ. ಇದರ ಅನ್ವಯ ನವೆಂಬರ್ 20, 2018ರ ತನಕ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದೆ.

ಚುನಾವಣಾ ಆಯೋಗ ಅಕ್ಟೋಬರ್ 10ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳು ಇದ್ದರೆ ನವೆಂಬರ್ 20ರೊಳಗೆ ಸಲ್ಲಿಸಬಹುದು ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?ಕರ್ನಾಟಕದ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?

ಕರಡು ಮತದಾರರ ಪಟ್ಟಿಗಳು ತಾಲೂಕು ಕಚೇರಿ/ನಗರಸಭೆ ವಾರ್ಡ್ ಕಚೇರಿ/ಬಿಬಿಎಂಪಿ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದೆ. ಆನ್‌ಲೈನ್ ಮೂಲಕವೂ ಮತದಾರರು ತಮ್ಮ ಹೆಸರನ್ನು ಪರಿಶೀಲನೆ ನಡೆಸಬಹುದಾಗಿದೆ.

ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ತಿಳಿಯಬೇಕಾದ 7 ಸಂಗತಿ

1 ಜನವರಿ 2019 ಅಥವ ಅದಕ್ಕೂ ಮುಂಚಿತವಾಗಿ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸದಿದ್ದರೆ ಈಗ ಹೆಸರು ನೋಂದಾಯಿಸಲು ಅವಕಾಶವನ್ನು ನೀಡಲಾಗಿದೆ. ಹೊಸದಾಗಿ ಪಟ್ಟಿಯಲ್ಲಿ ಹೆಸರು ಸೇರಿಸುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ....

ಸಚಿತ್ರ ವರದಿ : ಪಂಚ ರಾಜ್ಯಗಳ ಚುನಾವಣೆ ದಿನಾಂಕ, ಮತ ಎಣಿಕೆಸಚಿತ್ರ ವರದಿ : ಪಂಚ ರಾಜ್ಯಗಳ ಚುನಾವಣೆ ದಿನಾಂಕ, ಮತ ಎಣಿಕೆ

ಆಯೋಗದ ಪ್ರಕಟಣೆ

ಆಯೋಗದ ಪ್ರಕಟಣೆ

ಒಂದು ವೇಳೆ ನಿಮ್ಮ ಹೆಸರು ಇಲ್ಲವಾದಲ್ಲಿ ಅಥವ ನೀವು ಮೊದಲ ಬಾರಿಗೆ ಹೆಸರನ್ನು ನೋಂದಾಯಿಸಬೇಕಾದಲ್ಲಿ ಅಥವ ನಿಮ್ಮ ವಿವರದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳು/ತಾಲೂಕು ಕಚೇರಿ/ ನಗರಸಭೆ ವಾರ್ಡ್ ಕಚೇರಿ/ಬಿಬಿಎಂಪಿ ಕಂದಾಯ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಎಂದು ಚುನಾವಣಾ ಆಯೋಗ ಹೇಳಿದೆ.

ಯಾವುದಕ್ಕೆ ಯಾವ ಅರ್ಜಿ

ಯಾವುದಕ್ಕೆ ಯಾವ ಅರ್ಜಿ

* ಫಾರಂ - 6 : ಹೊಸದಾಗಿ ನೋಂದಾಯಿಸಲು ಅಥವ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವಿಳಾಸವನ್ನು ಬದಲಾಯಿಸಲು

* ಫಾರಂ-6ಎ : ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಸಾಗರೋತ್ತರ ಭಾರತೀಯರಿಗಾಗಿ

ಅರ್ಜಿಗಳ ವಿವರ

ಅರ್ಜಿಗಳ ವಿವರ

* ಫಾರಂ-7 : ಅಸ್ತಿತ್ವದಲ್ಲಿರುವ ಹೆಸರನ್ನು ತೆಗೆದುಹಾಕಲು ಅಥವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಕೋರಿ

* ಫಾರಂ - 8 : ಮತದಾರರ ಪಟ್ಟಿಯಲ್ಲಿನ ದಾಖಲೆಗಳಲ್ಲಿ ಬದಲಾವಣೆ/ತಿದ್ದುಪಡಿ ಕೋರಿ

* ಫಾರಂ 8ಎ : ಒಂದೇ ವಿಧಾನಸಭಾ ಕ್ಷೇತ್ರದಡಿಯಲ್ಲಿ ವಿಳಾಸ ಬದಲಾವಣೆ ಕೋರಿ

ಆನ್‌ಲೈನ್ ಮೂಲಕವೂ ಅರ್ಜಿ ಹಾಕಿ

ಆನ್‌ಲೈನ್ ಮೂಲಕವೂ ಅರ್ಜಿ ಹಾಕಿ

ಆನ್‌ಲೈನ್ ಮೂಲಕವೂ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

English summary
The Election Commission of India announced special drive for add name for voter list. For adding name, change address people can submit application before November 20, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X