• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ; ಮೇ 20ಕ್ಕೆ ಮತದಾನ

|
Google Oneindia Kannada News

ಬೆಂಗಳೂರು, ಏಪ್ರಿಲ್ 29:ಅವಧಿ ಮುಕ್ತಾಯಗೊಂಡ ತುಮಕೂರು ಜಿಲ್ಲೆಯ ಶಿರಾ ನಗರಸಭೆಗೆ ಸಾರ್ವತ್ರಿಕ ಚುನಾವಣೆ ಹಾಗೂ ಕೆಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಗೆ ತೆರವಾದ ಖಾಲಿ ಸ್ಥಾನಗಳ ಉಪ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿದೆ.

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಗರಸಭೆಯ 21ನೇ ವಾರ್ಡ್‌ಗೆ ಸಾರ್ವತ್ರಿಕ ಚುನಾವಣೆ, ದಾವಣಗೆರೆ, ಬೀದರ್, ಬೆಂಗಳೂರು ನಗರ, ಹಾಸನ, ಕಲಬುರಗಿ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದೆ.

ದಿನಾಂಕ ಮೇ 02, 2022ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.
ದಿನಾಂಕ 09-05-2022 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ದಿನಾಂಕ 10-05-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ದಿನಾಂಕ 12-05-2022ರ ಉಮೇದುವಾರಿಕೆ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ.

ಇನ್ನು ದಿನಾಂಕ 20-05-2022ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಮರು ಮತದಾನ ಅವಶ್ಯಕತೆ ಇದ್ದಲ್ಲಿ ದಿನಾಂಕ 21-05-2022ರಂದು ನಡೆಯಲಿದೆ.
ಮತ ಏಣಿಕೆ ಕಾರ್ಯ ದಿನಾಂಕ 22-05-2022ರಂದು ನಡೆಯಲಿದೆ.
ಚುನಾವಣಾ ಕಾರ್ಯವು ದಿನಾಂಕ 22-05-2022ರಂದು ಕೊನೆಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ
ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಒಟ್ಟು 21 ವಾರ್ಡ್‌ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

Election Commission Announced Date of By-Election To These Urban Local Bodies; Voting On May 20th

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ
ದಾವಣಗೆರೆ- ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ.28, 37 ಹಾಗೂ ಚನ್ನಗಿರಿ ಪುರಸಭೆಯ ವಾರ್ಡ್ ನಂ.16
ಬೀದರ್- ಬಸವಕಲ್ಯಾಣ ನಗರಸಭೆ ವಾರ್ಡ್ ಸಂಖ್ಯೆ 25
ಬೆಂಗಳೂರು ನಗರ- ಆನೇಕಲ್ ಪುರಸಭೆ ವಾರ್ಡ್ ಸಂಖ್ಯೆ 14, 16, 17
ಹಾಸನ- ಹೊಳೆನಗರಸೀಪುರ ಪುರಸಭೆ ವಾರ್ಡ್ ಸಂಖ್ಯೆ 3
ಕಲಬುರಗಿ- ಜೇವರ್ಗಿ ಪುರಸಭೆ ವಾರ್ಡ್ ಸಂಖ್ಯೆ 10
ಬೆಳಗಾವಿ- ಸಂಕೇಶ್ವರ ಪುರಸಭೆಯ ವಾರ್ಡ್ ನಂ.13ಕ್ಕೆ ಉಪ ಚುನಾವಣೆ ನಡೆಯಲಿದೆ.

English summary
The Election Commission has announced the by-election date for the vacant seats of some urban local bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X