ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ ಎಣಿಕೆ : 3 ಗಂಟೆ ವೇಳೆಗೆ ಅಂತಿಮ ಫಲಿತಾಂಶದ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಮೇ 22 : ಚುನಾವಣಾ ಆಯೋಗ ಕರ್ನಾಟಕದ 28 ಲೋಕಸಭಾ ಕ್ಷೇತ್ರ, 2 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮೇ 23ರ ಗುರುವಾರ ಸಂಜೆ 5 ಗಂಟೆ ವೇಳೆಗೆ ಫಲಿತಾಂಶದ ಅಂತಿಮ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊರಬೀಳುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.

ವಿವಿಪ್ಯಾಟ್‌ ಜೊತೆ ಮತ ತಾಳೆ ಹೇಗೆ?, ಚುನಾವಣಾ ಫಲಿತಾಂಶ ವಿಳಂಬವಿವಿಪ್ಯಾಟ್‌ ಜೊತೆ ಮತ ತಾಳೆ ಹೇಗೆ?, ಚುನಾವಣಾ ಫಲಿತಾಂಶ ವಿಳಂಬ

ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ಲೋಕಸಭಾ ಕ್ಷೇತ್ರದ ತಲಾ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಿ, ಇವಿಎಂ ಫಲಿತಾಂಶದ ಜೊತೆ ತಾಳೆ ಮಾಡಬೇಕಾಗುತ್ತದೆ. ಇದರಿಂದಾಗಿ ಫಲಿತಾಂಶ ಪ್ರಕಟವಾಗಲು ಸುಮಾರು 4 ಗಂಟೆ ತಡವಾಗಲಿದೆ.

ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಮತದಾನ ನಡೆದಿತ್ತು. ಧಾರವಾಡ ಜಿಲ್ಲೆಯ ಕುಂದಗೋಳ ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಮತದಾನ ನಡೆದಿತ್ತು.....

ವಿವಿಪ್ಯಾಟ್ ಪ್ರಮಾಣೀಕರಣ: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂವಿವಿಪ್ಯಾಟ್ ಪ್ರಮಾಣೀಕರಣ: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಅಂಚೆ ಮತಗಳ ಎಣಿಕೆ

ಅಂಚೆ ಮತಗಳ ಎಣಿಕೆ

ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು 28 ಕ್ಷೇತ್ರಗಳ ಅಂಚೆ ಮತಗಳ ಎಣಿಕೆಯನ್ನು ಮಾಡಲಾಗುತ್ತದೆ. ಇಲ್ಲಿಯ ತನಕ 98,606 ಅಂಚೆ ಮತಗಳು ಬಂದಿವೆ. ಮತ ಎಣಿಕೆಗೂ ಮೊದಲು ಬರುವ ಅಂಚೆ ಮತಗಳನ್ನು ಪರಿಗಣನೆ ಮಾಡಲಾಗುತ್ತದೆ. ಬಳಿಕ ಬರುವ ಅಂಚೆ ಮತ ತಿರಸ್ಕಾರವಾಗಲಿದೆ.

ಒಂದು ಸುತ್ತಿನ ಎಣಿಕೆಗೆ 45 ನಿಮಿಷ

ಒಂದು ಸುತ್ತಿನ ಎಣಿಕೆಗೆ 45 ನಿಮಿಷ

ಒಂದು ಸುತ್ತಿನ ಮತ ಎಣಿಕೆ ಮಾಡಲು ಸುಮಾರು 45 ನಿಮಿಷಗಳು ಬೇಕಾಗುತ್ತದೆ. ಒಟ್ಟು 18 ರಿಂದ 33 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರು ಇದ್ದು 33 ಸುತ್ತಿನ ಎಣಿಕೆ ನಡೆಯಲಿದೆ.

14 ಟೇಬಲ್‌ಗಳ ಸ್ಥಾಪನೆ

14 ಟೇಬಲ್‌ಗಳ ಸ್ಥಾಪನೆ

ಪ್ರತಿ ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೂ ನಿಗದಿಪಡಿಸಿದ ಕ್ಷೇತ್ರದ ಇವಿಎಂ ಮೆಷಿನ್ ತರಲಾಗುತ್ತದೆ. ಒಟ್ಟಿಗೆ 14 ಟೇಬಲ್‌ನಲ್ಲಿ ಮತ ಎಣಿಕೆ ನಡೆಯುವುದಿಲ್ಲ. ಒಂದು ಟೇಬಲ್ ಬಳಿಕ ಮತ್ತೊಂದು ಟೇಬಲ್‌ನಲ್ಲಿ ಎಣಿಕೆ ನಡೆಯಲಿದೆ.

ವಿವಿಪ್ಯಾಟ್‌ನಿಂದಾಗಿ ವಿಳಂಬ

ವಿವಿಪ್ಯಾಟ್‌ನಿಂದಾಗಿ ವಿಳಂಬ

ಇವಿಎಂ ಮತ ಎಣಿಕೆ ಬೇಗ ಮುಕ್ತಾಯಗೊಳ್ಳುತ್ತದೆ. ಆದರೆ, ವಿವಿಪ್ಯಾಟ್ ಮತಗಳ ಜೊತೆ ತಾಳೆಯಾಗಬೇಕಾದ ಕಾರಣ ಫಲಿತಾಂಶ ಸುಮಾರು 4 ಗಂಟೆ ವಿಳಂಬವಾಗಿ ಪ್ರಕಟವಾಗಲಿದೆ. ಪ್ರತಿ ಲೋಕಸಭಾ ಕ್ಷೇತ್ರದ 40 ವಿವಿಪ್ಯಾಟ್ (8 ವಿಧಾನಸಭಾ ಕ್ಷೇತ್ರದ 5 ಮತಗಟ್ಟೆ) ಎಣಿಕೆ ನಡೆಯಬೇಕಿದೆ. ವಿವಿಪ್ಯಾಟ್ ಎಣಿಕೆ ಮುಗಿದ ಬಳಿಕ ಅಂತಿಮ ಫಲಿತಾಂಶ ಘೋಷಣೆಯಾಗಲಿದೆ.

English summary
Election Commission all set for Lok sabha elections 2019 counting. Result may declared 4 hours late said Sanjiv Kumar chief electoral officer (CEO) of Karnataka. Election Counting will be held on May 28, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X