ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್ ಮಿಲಾದ್: ರಾಜ್ಯಾದ್ಯಂತ ಡಿ.2ರಂದು ಸಾರ್ವತ್ರಿಕ ರಜೆ

|
Google Oneindia Kannada News

ಬೆಂಗಳೂರು, ನವೆಂಬರ್ 27 : ಮುಸ್ಲಿಂರ ಪವಿತ್ರ ಹಬ್ಬ ಈದ್-ಮಿಲಾದ್ (ಪ್ರಾಫೆಟ್ ಮೊಹಮ್ಮದನ ಜನುಮದಿನ) ಪ್ರಯುಕ್ತ ಸಾರ್ವತ್ರಿಕ ರಜಾ ದಿನವನ್ನು ಬದಲಾವಣೆ ಮಾಡಲಾಗಿದೆ.

2018ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ2018ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ

ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ 2017ನೇ ಸಾಲಿನ ಈದ್-ಮಿಲಾದ್ ಹಬ್ಬದ ಆಚರಣೆಗೆ ಡಿಸೆಂಬರ್ 1ರಂದು (ಶುಕ್ರವಾರ) ಘೋಷಿಸಿದ್ದ ರಜಾವನ್ನು ರದ್ದುಗೊಳಿಸಿ, ಡಿಸೆಂಬರ್ 2 ಶನಿವಾರ ಸಾರ್ವತ್ರಿಕ ರಜಾ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

Eid Milad general holiday on December 2 in Karnataka

ಈದ್-ಮಿಲಾದ್ ಹಬ್ಬದ ಸರ್ಕಾರಿ ರಜೆಯನ್ನು ಈ ಮೊದಲು ಡಿಸೆಂಬರ್ 1 ಶುಕ್ರವಾರ ರಜಾ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ಕೇಂದ್ರ ಚಂದ್ರದರ್ಶನ ಕಮಿಟಿ ಅಭಿಪ್ರಾಯದಂತೆ ಈ ಹಿಂದಿನ ರಜೆ ಆದೇಶವನ್ನು ರದ್ದುಗೊಳಿಸಿ, 2017ರ ಈದ್‌ ಮಿಲಾದ್ ಹಬ್ಬ ಆಚರಣೆಗೆ ಡಿ. 2ರಂದು ಶನಿವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಸರ್ಕಾರದ ಅಧೀಕನ ಕಾರ್ಯದರ್ಶಿ ಡಾ.ಬಿ.ಎಸ್. ಮಂಜುನಾಥ ಸ್ವಾಮಿ ಸೋಮವಾರ ತಿಳಿಸಿದರು.

ಕಳೆದ (2016) ವರ್ಷವೂ ಸಹ ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ ಈದ್-ಮಿಲಾದ್ ಹಬ್ಬದ ಸಾರ್ವತ್ರಿಕ ರಜಾವನ್ನು ಡಿಸೆಂಬರ್ 12 ಸೋಮವಾರದ ಬದಲು ಮಂಗಳವಾರ ಡಿಸೆಂಬರ್ 13ಕ್ಕೆ ನೀಡಲಾಗಿತ್ತು.

ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಡಿಸೆಂಬರ್ 1ರಂದು ಸಾರ್ವತ್ರಿಕ ರಜೆ ನೀಡಿ ರಾಜ್ಯ ಸರ್ಕಾರ ಘೋಷಿಸಿದೆ.

English summary
Karnataka government has declared Eid Milad holiday on December 2 (Saturday), instead of Friday (December 1) as declared earlier. The holiday was changed as per suggestion by Central Moon Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X