ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!

By Nayana
|
Google Oneindia Kannada News

ಬೆಂಗಳೂರು, ಮೇ 4: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗಿರುವ ಮಕ್ಕಳ ಪಾಲಕರಿಂದ ಸಾವಿರಾಋಉ ರೂಪಾಯಿ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಬೀಳಳಿದೆ.

ಪಠ್ಯ ಪುಸ್ತಕ, ಸಮವಸ್ತ್ರ, ಪಠ್ಯೇತರ ಚಟುವಟಿಕೆ, ಲೇಖನ ಸಾಮಗ್ರಿ ಹೀಗೆ ಪಾಲಕರಿಂದ 20ರಿಂದ 30 ಸಾವಿರ ರೂ.ವರೆಗೆ ಕೆಲ ಶಿಕ್ಷಣ ಸಂಸ್ಥೆಗಳು ಶುಲ್ಕ ಪಾವತಿಗೆ ಒತ್ತಡ ಹೇರುತ್ತಿರುವುದರ ಬಗ್ಗೆ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಶಿಕ್ಷಣ ಇಲಾಖೆ ಪತ್ರ ರವಾನಿಸಿದ್ದರು.

ಆರ್‌ಟಿಇ ಮಕ್ಕಳ ಪೋಷಕರು ಪುಸ್ತಕ, ಸಮವಸ್ತ್ರ ಕೊಳ್ಳಲು ಸ್ವತಂತ್ರರು! ಆರ್‌ಟಿಇ ಮಕ್ಕಳ ಪೋಷಕರು ಪುಸ್ತಕ, ಸಮವಸ್ತ್ರ ಕೊಳ್ಳಲು ಸ್ವತಂತ್ರರು!

ಈ ಹಿನ್ನೆಲೆಯಲ್ಲಿ ಆಯಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕಾನೂನು ಬಾಹಿರವಾಗಿ ಸಾವಿರಾರು ರೂಪಾಯಿ ವಸೂಲಿ ಮಾಡುವ ಶಾಲೆಗಳ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Education dept warns unaided schools illegal collection of fees!

ಶಿಕ್ಷಣ ಹಕ್ಕು ಕಾಯ್ದೆಯ ಯಾವುದೇ ಅವಕಾಶಗಳ ಉಲ್ಲಂಘನೆಯಾದಲ್ಲಿ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳ 2012ರ ನಿಯಮ 23 ರ ಪ್ರಕಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಶಿಸ್ತಿನ ಪ್ರಾಧಧಿಕಾರವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ವರದಿ ನೀಡಿ ಕ್ರಮವಹಿಸಿ, ಪಾಲಕರಲ್ಲಿ ಉಂಟಾಗುವ ಗೊಂದಲಕ್ಕೆ ಅವಕಾಶ ಕೊಡದೆ, ಆರ್‌ಟಿಇ ನಿಯಮದಲ್ಲಿ ಸ್ಪಷ್ಟಪಡಿಸಿರುವ ಎಲ್ಲ ಅಂಶಗಳನನ್ಉ ಅನುಷ್ಠಾನಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.

English summary
Department of education has issued a notification to all unaided education institutions in the state stating that should not collect fees or any kind of charges from students those got admission under RTE act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X