ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ನೇ ತರಗತಿ ಪ್ರವೇಶಕ್ಕೆ ಕನಿಷ್ಠ 5ವರ್ಷ 5 ತಿಂಗಳು, ಗರಿಷ್ಠ 7 ವರ್ಷ!

By Nayana
|
Google Oneindia Kannada News

ಬೆಂಗಳೂರು, ಮೇ 24: ಇಲ್ಲಿಯವರೆಗೆ ಒಂದನೇ ತರಗತಿಗೆ ಸೇರಲು ಕನಿಷ್ಠ 5 ವರ್ಷ 10 ತಿಂಗಳಾಗಿರಬೇಕಿತ್ತು. ಆದರೆ ಇದೀಗ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ನಿಗದಿ ಪಡಿಸಿದ್ದ ವಯೋಮಿತಿಯನ್ನು ಶಿಕ್ಷಣ ಇಲಾಖೆ ಸಡಿಲಿಸಿ ಆದೇಶ ಹೊರಡಿಸಿದೆ.

2018-19ನೇ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ 5 ವರ್ಷ 5 ತಿಂಗಳಿನಿಂದ ಗರಿಷ್ಠ 7 ವರ್ಷಗಳವರೆಗೆ ನಿಗದಿಪಡಿಸಿದೆ.ಅಂದರೆ ಮಾ.31ಕ್ಕೆ 5 ವರ್ಷ 5 ತಿಂಗಳು ಆಗಿರುವ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಅಹರಾಗಿರುತ್ತಾರೆ. ಈ ಮೊದಲು 5 ವರ್ಷ 10 ತಿಂಗಳು ಎಂದು ನಿಗದಿಪಡಿಸಲಾಗಿತ್ತು. ಇದರಿಂದ ಖಾಸಗಿ ಶಾಲೆಗಳು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದವು.

ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!

ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಇರುವುಚದರಿಂದ 5,10 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಅನಿವಾರ್ಯವಾಗಿ ಪೂರ್ವ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದರು. ಇದರಿಂದ ಸರ್ಕಾಋಇ ಶಾಲೆಗೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು.

Education dept relaxed age limit on school admission

ಹೀಗಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿಯನ್ನು ಭೇಟಿ ಮಾಡಿ ಶಾಲಾ ಪ್ರವೇಶಕ್ಕೆ ನಿಗದಿ ಪಡಿಸಿರುವ ವಯೋಮಿತಿ ಸಡಿಲಗೊಳಿಸುವಂತೆ ಕೋರಲಾಗಿತ್ತು.

ಈ ಮೊದಲು 5 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳನ್ನು ಒಂದನೇ ತರಗತಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದರು. ಎಸ್‌ಎಸ್‌ಎಲ್‌ಸಿ ಪೂರೈಸುವ ವೇಳೆಗೆ 16 ವರ್ಷ ಪೂರೈಸಿರಬೇಕೆಂಬ ನಿಯಮದಿಂದಾಗಿ ಸದ್ಯ 5 ವರ್ಷ 5 ತಿಂಗಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ.

English summary
Education department has amended age limit for first standard admission as minimum age of 5 years 5 months to 7 years. Earlier it was 5 years 10 months was minimum age for school admission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X