ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳನ್ನು ಟಾರ್ಗೆಟ್ ಮಾಡಿ ಹೊರಡಿಸಿದ ಸುತ್ತೋಲೆಯ ಮಹಾ ಲೋಪ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಮಕ್ಕಳ ಸುರಕ್ಷತಾ ನಿಯಮ ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲ, ಅದೇ ನಿಯಮ ಪಾಲಿಸದಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ನವೀಕರಣ ಮಾಡುವಂತಿಲ್ಲ ! ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಸುತ್ತೋಲೆ ವಿವಾದಕ್ಕೆ ನಾಂದಿ ಹಾಡಿದೆ.

ಕರೋನಾ ಸಂಕಷ್ಟದಿಂದ ನಲುಗಿರುವ ಶಿಕ್ಷಣ ವ್ಯವಸ್ಥೆಯನ್ನು ಸಚಿವರಾಗಿ ಅದನ್ನು ಪುನಶೇಃತನಗೊಳಿಸುವ ನಿಟ್ಟಿನಲ್ಲಿ ತಿರ್ಮಾನ ಕೈಗೊಳ್ಳಬೇಕಿತ್ತು. ಖಾಸಗಿ ಶಾಲೆಗಳು ಕಡ್ಡಾಯವಾಗಿ ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯಬೇಕು. ಲೋಕೋಪಯೋಗಿ ಇಲಾಖೆಯಿಂದ ಕಾಂಪ್ಲಿಯನ್ಸ್ (ಗುಣಮಟ್ಟ ಬಗ್ಗೆ ಪರಿಶೀಲಿಸಿ ನೀಡುವ ಪತ್ರ) ಸರ್ಟಿಫಿಕೇಟ್ ಪಡೆಯಬೇಕು. ಇವೆರಡೂ ಪಡೆಯದಿದ್ದರೆ ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ನವೀಕರಿಸಲಾಗದು ಎಂದು ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ ಹೊರಡಿಸಿದೆ. ಇದು ಮಕ್ಕಳ ಸುರಕ್ಷತಾ ಕಾಯ್ದೆ ಹಾಗೂ ಹೈಕೋರ್ಟ್‌ ತೀರ್ಪಿನ ಸ್ಪಷ್ಟ ಉಲ್ಲಂಘನೆ. ವಿಶೇಷ ಎಂದರೆ ಸರ್ಕಾರಿ ಶಾಲೆಗಳಿಗೆ ಈ ಸುತ್ತೋಲೆ ಅನ್ವಯಿಸುವುದಿಲ್ಲ !

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ! ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ!

ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಅಗ್ನಿ ಸುರಕ್ಷತೆ ಬೇಡವೇ ? ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳ ಸುರಕ್ಷತೆ ಬಗ್ಗೆ ಮಾತ್ರ ಶಿಕ್ಷಣ ಇಲಾಖೆಗೆ ಕಾಳಜಿ ಯಾಕೆ ಎಂಬ ಪ್ರಶ್ನೆ ಮೂಡಿದೆ. ಇದರ ಉದ್ದೇಶ ಮಕ್ಕಳ ಸುರಕ್ಷತೆ ಅಲ್ಲ. ಬದಲಿಗೆ ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಪೋರೇಟೇತರ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿಕೊಳ್ಳಲಿ ಎಂಬ ಉದ್ದೇಶದಿಂದ ಹೊರಡಿಸಿರುವ ಸುತ್ತೋಲೆ ಎಂಬ ಅನುಮಾನ ಮೂಡಿಸಿದೆ. ಇಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಆದ್ಯತೆ ನೀಡಿ ಹೊರಡಿಸಿರುವ ಆದೇಶವೇ ಆಗಿದ್ದಲ್ಲಿ ಮೊದಲು ಅದನ್ನು ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡಬೇಕಿತ್ತು. ಖಾಸಗಿ ಮತ್ತು ಸರ್ಕಾರಿ ಎಂದು ತಾರತಮ್ಯ ಮಾಡುವ ಅಗತ್ಯವೇನಿತ್ತು?

ಮಕ್ಕಳ ಸುರಕ್ಷತಾ ಕಾಯ್ದೆ :

ಮಕ್ಕಳ ಸುರಕ್ಷತಾ ಕಾಯ್ದೆ :

ರಾಜ್ಯದಲ್ಲಿ ಈಗಾಗಳೇ ಮಕ್ಕಳ ಸುರಕ್ಷತಾ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆಯ ನಿಂಬಂಧನೆಗಳು 2017 ರ ನಂತರ ಪ್ರಾರಂಭವಾಗುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತವೆ. ಇದಕ್ಕಿಂತಲೂ ಮೊದಲು ಸ್ಥಾಪನೆಯಾಗಿರುವ ಶಿಕ್ಷಣ ಸಂಸ್ಥೆಗಳು ಜಾಗದ ಕೊರತೆ ಸೇರಿದಂತೆ ಕೆಲವು ನಿಬಂಧನೆಗಳ ಪಾಲನೆಯಲ್ಲಿ ರಿಯಾಯಿತಿ ನೀಡಲಾಗಿದೆ. ಇದಕ್ಕಿಂತೂ ಮುಖ್ಯ ವಿಚಾರ ಅಂದರೆ, ಶಾಲೆಗಳ ಸ್ಥಾಪನೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಿಬಂಧನೆ ಪಾಲನೆ ಕುರಿತು ಹೈಕೋರ್ಟ್‌ ನಲ್ಲಿ ರಿಟ್ (w.p 44909/2014, w.p. 41196, 41208, )ಅರ್ಜಿಗಳ ವಿಲೇವಾರಿ ಮಾಡಿದ್ದ ನ್ಯಾಯಪೀಠ, 2014 ಸೆಪ್ಟೆಂಬರ್ 16 ರಂದು ಮಹತ್ವದ ತೀರ್ಪನ್ನು ನೀಡಿತ್ತು. ಅದರಲ್ಲಿ ಶಾಲಾ ಮಕ್ಕಳ ಸುರಕ್ಷತೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಯಮಗಳ ಪಾಲನೆಗೆ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಮೊದಲು ಸರ್ಕಾರ ಪಾಲಿಸಿ ಮಾದರಿ ಮೆರೆಯಲಿ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಆಕ್ಷೇಪದ ಬಗ್ಗೆ ಅಪರ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಮಕ್ಕಳ ಸುರಕ್ಷತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಮಕ್ಕಳ ಸುರಕ್ಷತಾ ಕಾಯ್ದೆ ರೂಪಿಸಲು ಆದೇಶಿಸಿತ್ತು. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂಪಿಸಿದ ಮಕ್ಕಗಳ ಸುರಕ್ಷತಾ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ.

ಹೈಕೋರ್ಟ್ ನ ಈ ಆದೇಶ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಮರೆತರೇ ? ಹೈಕೋರ್ಟ್ ಆದೇಶದ ಪ್ರಕಾರ ಶಿಕ್ಷಣ ಇಲಾಖೆ ಹೊರಡಿಸಿರುವ ಅಗ್ನಿ ಸುರಕ್ಷತೆ ಎನ್‌ಓಸಿ ಹಾಗೂ ಪಿಡಬ್ಲೂಡಿ ಇಲಾಖೆಯ ಕಾಂಪ್ಲಿಯನ್ಸ್ ಸರ್ಟಿಫಿಕೇಟ್ ಪಡೆದ ನಂತರವೇ ಮಾನ್ಯತೆ ನವೀಕರಣ ಮಾಡುವುದನ್ನು ಮೊದಲು ಸರ್ಕಾರಿ ಶಾಲೆಗಳು ಪಾಲಿಸಿ ಮಾದರಿ ಮೆರೆಯಬೇಕಲ್ಲವೆ ? ಅಂದರೆ ಸರ್ಕಾರಿ ಶಾಲಾ ಕಟ್ಟಡಗಳು ಅಷ್ಟು ಸುರಕ್ಷತೆಯಾಗಿವೆಯೇ ? ಅಗ್ನಿ ಸುರಕ್ಷತೆ ಬಡ ಮಕ್ಕಳು ಓದುವ ಶಾಲೆಗಳಿಗೆ ಬೇಡವೇ ? ಕಟ್ಟಡಗಳ ಗುಣಮಟ್ಟ ಕುರಿತು ಸರ್ಕಾರಿ ಶಾಲೆಗಳನ್ನು ಪರಿಶೀಲಿಸುವುದ ಬೇಡವೇ ? ಸರ್ಕಾರಿ ಶಾಲೆಗಳಿಗೆ ಅನ್ವಯ ಆಗದಂತೆ ಶಾಲಾ ಮಾನ್ಯತೆಗೆ ಅಗ್ನಿ ಸುರಕ್ಷತೆ ಮತ್ತು ಪಿಡಬ್ಲೂಡಿ ಕಟ್ಟಡ ಗುಣಮಟ್ಟದ ಪ್ರಮಾಣ ಪತ್ರ ಪಡೆಯಬೇಕು ಎಂದು ಹೊಸ ಆದೇಶ ಮಾಡುವ ಅಗತ್ಯವೇನಿತ್ತು ? ಇದು ಹೈಕೋರ್ಟ್‌ ತೀರ್ಪಿನ ವಿರುದ್ಧವಾಗಿಲ್ಲವೇ ?

ಶಿಕ್ಷಣ ಸಂವಿಧಾನ ಬದ್ಧ ಹಕ್ಕು. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಎಂದು ತಾರತಮ್ಯ ಮಾಡಲು ಅವಕಾಶವಿಲ್ಲ ಎಂದು ಅನೇಕ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಇದು ಗೊತ್ತಿದ್ದರೂ ಕರೋನಾ ಕಷ್ಟಕಾಲದಲ್ಲಿ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ನಿಬಂಧನೆಗಳ ಪಾಲನೆ ಹೊಸ ಸುತ್ತೋಲೆ ಹೊರಡಿಸಿರುವುದು ಶಿಕ್ಷಣ ಹಕ್ಕು ಮತ್ತು ಕಾಯ್ದೆಗೆ ವಿರುದ್ಧವಿಲ್ಲವೇ ? ಎಂದು ಖಾಸಗಿ ಶಾಲೆಗಳ ಆಡಳಿತ ಒಕ್ಕೂಟ ಪ್ರಶ್ನಿಸಿದೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಗುಣಮಟ್ಟ ಕುರಿತು ಪ್ರಮಾಣ ಪತ್ರ ವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಪಡೆಯಬೇಕು ಎಂಬ ಆದೇಶದಿಂದ ಮಕ್ಕಳ ಸುರಕ್ಷತೆ ಹೆಸರಿನಲ್ಲಿ ಹಸ್ತ ಕ್ಷೇಪಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕರೋನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಶಾಲೆಗಳಿಗೆ ಇಂತಹ ನಿಯಮ ಪಾಲನೆ ಮುಂದಿಟ್ಟು ಶಾಲಾ ಮಾನ್ಯತೆ ನವೀಕರಿಸದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾತ್ರವಲ್ಲ ಶಿಕ್ಷಣ ಕಾಯ್ದೆಯನ್ನು ಶಿಕ್ಷಣ ಇಲಾಖೆ ಉಲ್ಲಂಘನೆ ಮಾಡಿದಂತಾಗಿದೆ. ಕೂಡಲೇ ಈ ಅವೈಜ್ಞಾನಿಕ ಸುತ್ತೋಲೆ ವಾಪಸು ಪಡೆಯಬೇಕು ಎಂದು ಕ್ಯಾಮ್ಸ್ ಆಗ್ರಹಿಸಿದೆ.

ಪ್ರಧಾನ ಕಾರ್ಯದರ್ಶಿಗೆ ಮನವಿ:

ಪ್ರಧಾನ ಕಾರ್ಯದರ್ಶಿಗೆ ಮನವಿ:

ಶಿಕ್ಷಣ ಇಲಾಖೆ ಹೊರಡಿಸಿರುವ ಈ ಅವೈಜ್ಞಾನಿಕ ಸುತ್ತೋಲೆ ಕುರಿತು ಹೈಕೋರ್ಟ್‌ ತೀರ್ಪು, ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಕರ್ನಾಟಕ (ಕ್ಯಾಮ್ಸ್) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಮನವಿ ಸಲ್ಲಿಸಿದೆ. ಅದರಲ್ಲಿ ಮೂರು ವಿಷಯ ಪ್ರಸ್ತಾಪಿಸಿದ್ದು, ಸರ್ಕಾರ ಈ ಅವೈಜ್ಞಾನಿಕ ನಿಯಮ ವಾಪಸು ಪಡೆಯದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸೂಚಿಸಿದೆ.

ವಾಸ್ತವ ಸಂಗತಿಗಳು !

ವಾಸ್ತವ ಸಂಗತಿಗಳು !

ಅಗ್ನಿ ಸುರಕ್ಷತೆ ಮತ್ತು ಲೋಕೋಪಯೋಗಿ ಇಲಾಖೆ ಯಿಂದ ಗುಣಮಟ್ಟ ಕುರಿತ ಪರೀಕ್ಷಾ ಪ್ರಮಾಣ ಪತ್ರ ಕೇವಲ ಖಾಸಗಿ ಶಾಲೆಗಳು ಮಾತ್ರ ಪಾಲಿಸಬೇಕೆಂಬ ಆದೇಶವನ್ನು ಮೊದಲು ವಾಪಸು ಪಡೆಯಬೇಕು. ರಾಜ್ಯದೆಲ್ಲೆಡೆ 2017 ಕ್ಕಿಂತಲೂ ಮೊದಲು ಪ್ರಾರಂಭವಾಗಿರುವ ಶಾಲೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಸುರಕ್ಷತಾ ನಿಯಮ ಪಾಲನೆ ಪರಿಗಣಿಸಬೇಕು. ಹೊಸದಾಗಿ ಪ್ರಾರಂಭವಾಗುವ ಶಾಲೆಗಳಿಗೆ ಇಗಾಗಲೇ ವಿಧಿಸಿರುವ ಸುರಕ್ಷತಾ ನಿಯಮ ಪಾಲನೆಗೆ ಆದೇಶ ಮಾಡುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ರೂಪಿಸಿರುವ ನಿಯಮಗಳನ್ನು ಶಿಕ್ಷಣ ಸಂಸ್ಥೆಗಳನ್ನು ಪಾಲಿಸಬೇಕು. ಹೊಸ ನಿಯಮ ಜಾರಿಗೊಳಿಸುವ ಮುನ್ನ ಹೈಕೋರ್ಟ್ ನಿರ್ದೇಶನದಂತೆ ಇಲಾಖೆ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಧಕ ಬಾಧಕ ಗಳ ಬಗ್ಗೆ ಚರ್ಚಿಸಿ ಸರ್ಕಾರಿ ಮತ್ತು ಖಾಸಗಿ ಎಂಬ ತಾರತಮ್ಯ ವಿಲ್ಲದ ನಿಯಮಗಳನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ, ಹೊಸ ಸುತ್ತೋಲೆ ಪಾಲಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಗಲುವ ವೆಚ್ಚ ಸರಿದೂಗಿಸಲು ಮಕ್ಕಳ ಶಿಕ್ಷಣ ಶುಲ್ಕ ಹೆಚ್ಚಿಸಲು ಸೂಕ್ತ ತಿದ್ದುಪಡಿ ತಂದು ಆದೇಶ ಮಾಡಬೇಕು. ಈ ವಾಸ್ತವ ಅಂಶ ಪರಿಗಣಿಸದಿದ್ದಲ್ಲಿ ನ್ಯಾಯಾಲಯದ ಹಾದಿ ನೋಡಿಕೊಳ್ಳಬೇಕಾಗುತ್ತದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳು ತಮ್ಮ ನಿಲುವು ಸ್ಪಷ್ಟಪಡಿಸಿವೆ.

Recommended Video

Rohit Sharma ಇನ್ನೆರೆಡು ದಿನದಲ್ಲಿ Australia ತಲುಪಲಿದ್ದಾರೆ | Oneindia Kannada
ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ನಾಮ ?

ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ನಾಮ ?

ಈ ವರ್ಷ ಶಾಲೆಗಳು ತೆರೆಯುವುದು ಅನುಮಾನ. ಶಾಲೆಗೆ ಬರದಿದ್ದರೂ ಮಕ್ಕಳನ್ನು ಪಾಸು ಮಾಡಬೇಕು ಎಂದು ಹೇಳಿಕೆ ನೀಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿವಾದ ಎಬ್ಬಿಸಿದ್ದರು. ಇದೀಗ ಸದ್ದಿಲ್ಲದೇ ಅಗ್ನಿ ಸುರಕ್ಷತೆ ಹೊಸ ಆದೇಶ ಹೊರಡಿಸಿರುವ ಹಿಂದೆ ಕಾರ್ಪೋರೇಟ್ ಶಾಲೆಗಳಿಗೆ ಕೆಂಪು ಹಾಸಿಗೆ ಹಾಕಿ ಮಧ್ಯಮ ದರ್ಜೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ಣಾಮಕ್ಕೆ ಮುನ್ನಡಿ ಬರೆದರೇ ಎಂಬ ಅನುಮಾನ ಮೂಡಿದೆ. ಸದ್ಯ ಶಿಕ್ಷಣ ಸಚಿವರು ಹೊರಡಿಸಿರುವ ಈ ಆದೇಶ ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲ. ಜತೆಗೆ ಕಾರ್ಪೋರೇಟ್ ಖಾಸಗಿ ಶಾಲೆಗಳು ಈಗಾಗಲೇ ಅವನ್ನು ಮಾಡಿ ಆಗಿವೆ. ಇನ್ನು 2017 ಕ್ಕೂ ಮೊದಲು ಆರಂಭವಾಗಿರುವ ಮಧ್ಯಮ ವರ್ಗದ ಶಿಕ್ಷಣ ಸಂಸ್ಥೆಗಳು ಕರೋನಾ ಸಂಕಷ್ಟದಲ್ಲಿ ಈ ನಿಯಮ ಪಾಲಿಸಲು ಸಾಧ್ಯವಾಗಲ್ಲ. ಮಕ್ಕಳ ಸುರಕ್ಷತಾ ಕನಿಷ್ಠ ನಿಯಮ ಪಾಲಿಸಿ ಮಾನ್ಯತೆ ನವೀಕರಿಸಿವೆ.. ಹೊಸ ಸುತ್ತೋಲೆ ಪಾಲನೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಹೊರಡಿಸಿರುವುದ, ಖಾಸಗಿ ಶಾಲೆಗಳಿಗೆ ಕಬ್ಬಿಣದ ಕಡಲೆಯಾಗಿದೆ. ಮಧ್ಯಮ ವರ್ಗದ ಖಾಸಗಿ ಶಾಲೆಗಳು ಬಂದ್ ಆದರೆ ಸಹಜವಾಗಿ ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚುತ್ತದೆ. ಇನ್ನೂ ಮಧ್ಯಮ ವರ್ಗದ ಜನರೂ ಅನಿವಾರ್ಯವಾಗಿ ಕಾರ್ಪೋರೇಟ್ ಖಾಸಗಿ ಶಾಲೆಗಳತ್ತ ಮುಖ ಮಾಡಬೇಕಾಗುತ್ತದೆ. ಈ ಯೋಜನೆ ಭಾಗವಾಗಿಯೇ ಹೊಸ ಸುತ್ತೋಲೆ ಹುಟ್ಟಿಕೊಂಡಿತೇ ಎಂಬ ಅನುಮಾನ ಮೂಡಿದೆ. ಶಿಕ್ಷಣ ಸಚಿವರು ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕದ ಬಗ್ಗೆ ಈಗಾಗಲೇ ಅನೇಕ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ದಾಖಲಾತಿಯನ್ನು ಶೈಕ್ಷಣಿಕ ವರ್ಷ ಮುಗಿಯುವ ನಾಲ್ಕು ತಿಂಗಳ ಮೊದಲೇ ದಾಖಲಾತಿ ಪ್ರಕ್ರಿಯೆ ಮುಗಿಸಿ ಶಾಲಾ ಶುಲ್ಕ ವಸೂಲಿ ಮಾಡುವ ಕಾರ್ಪೋರೇಟ್ ಖಾಸಗಿ ಶಾಲೆಗಳಿಗೆ ಸಚಿವರ ಬಾಣಗಳು ಎಡತಾಕುವುದೂ ಇಲ್ಲ ಎಂಬ ವಾದವೂ ಇದೀಗ ಚರ್ಚೆಗೆ ಬಂದಿದೆ.

ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

English summary
Karnataka education dept violates education law, warns private schools to follow govt guidelines strictly, or will cancel license. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X