ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ Time Table

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಮೇ 24ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ. ಕೋವಿಡ್ ಸಂಬಂಧಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿರುವುದರಿಂದ ವಿಷಯವಾರು ಪರೀಕ್ಷೆಗಳ ನಡುವೆ ಅಂತರ ಇಡಲಾಗಿದೆ. ಜೂನ್ 16ರಂದು ಪರೀಕ್ಷೆಗಳು ಮುಕ್ತಾಯವಾಗಲಿವೆ. ಎಲ್ಲ ಪರೀಕ್ಷೆಗಳೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.

ಈ ಹಿಂದೆ ಶಿಕ್ಷಣ ಇಲಾಖೆಯು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಿತ್ತು. ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿಗೆ ಒಂದು ವಾರ ಸಮಯ ನಿಗದಿಪಡಿಸಿತ್ತು. ದ್ವಿತೀಯ ಪಿಯು ಪರೀಕ್ಷೆ ಸಂಬಂಧ ರಾಜ್ಯದ ವಿವಿಧೆಡೆಯ ಪೋಷಕರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆಕ್ಷೇಪಣೆಗಳು. ಪೋಷಕರ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ದೇಶಾದ್ಯಂತ ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸಹ ನಡೆಯಲಿರುವುದರಿಂದ ಇವುಗಳನ್ನು ಗಮನದಲ್ಲಿರಿಸಿಕೊಂಡು ದ್ವಿತೀಯ ಪರೀಕ್ಷೆ ವೇಳಾಪಟ್ಟಿ ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿತ್ತು. ಪರೀಕ್ಷೆಯ ದಿನಾಂಕ ಹಾಗೂ ವಿವರಗಳು ಇಲ್ಲಿದೆ.

ಇತಿಹಾಸ, ಭೂಗೋಳಶಾಸ್ತ್ರ

ಇತಿಹಾಸ, ಭೂಗೋಳಶಾಸ್ತ್ರ

ಮೇ 24ರ ಸೋಮವಾರ- ಇತಿಹಾಸ

ಮೇ 25, ಮಂಗಳವಾರ- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಮೇ 26, ಬುಧವಾರ- ಭೂಗೋಳಶಾಸ್ತ್ರ

ಮೇ 27, ಗುರುವಾರ- ಮನಃಶಾಸ್ತ್ರ, ಬೇಸಿಕ್ ಮ್ಯಾಥ್ಸ್

ಮೇ 28, ಶುಕ್ರವಾರ- ತರ್ಕಶಾಸ್ತ್ರ

ಮೇ 29, ಶನಿವಾರ- ಹಿಂದಿ

ಇಂಗ್ಲಿಷ್, ಅರ್ಥಶಾಸ್ತ್ರ

ಇಂಗ್ಲಿಷ್, ಅರ್ಥಶಾಸ್ತ್ರ

ಮೇ 31, ಸೋಮವಾರ- ಇಂಗ್ಲಿಷ್

ಜೂನ್ 1, ಮಂಗಳವಾರ- ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆಂಡ್ ವೆಲ್ನೆಸ್

ಜೂನ್ 2, ಬುಧವಾರ- ರಾಜ್ಯಶಾಸ್ತ್ರ, ಗಣಕವಿಜ್ಞಾನ

ಜೂನ್ 3, ಗುರುವಾರ- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್

ಜೂನ್ 4, ಶುಕ್ರವಾರ- ಅರ್ಥಶಾಸ್ತ್ರ

ಜೂನ್ 5, ಶನಿವಾರ- ಗೃಹವಿಜ್ಞಾನ

UPSC ಪರೀಕ್ಷೆ 2021: ವಯೋಮಿತಿ ಮೀರಿದವರಿಗೆ ಅವಕಾಶವಿಲ್ಲ
ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 7, ಸೋಮವಾರ- ವ್ಯವಹಾರ ಅಧ್ಯಯನ, ಭೌತಶಾಸ್ತ್ರ

ಜೂನ್ 8, ಮಂಗಳವಾರ- ಐಚ್ಛಿಕ ಕನ್ನಡ

ಜೂನ್ 9, ಬುಧವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

ಜೂನ್ 10, ಗುರುವಾರ- ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11, ಶುಕ್ರವಾರ- ಉರ್ದು ಸಂಸ್ಕೃತ

ಜೂನ್ 12, ಶನಿವಾರ- ಸಂಖ್ಯಾಶಾಸ್ತ್ರ

Recommended Video

ಸುರೇಶ್ ಕುಮಾರ್ ಅವರ ನಿರ್ಧಾರ ಸರೀನಾ! | Oneindia Kannada
ಗಣಿತ, ಶಿಕ್ಷಣ, ಕನ್ನಡ

ಗಣಿತ, ಶಿಕ್ಷಣ, ಕನ್ನಡ

ಜೂನ್ 12, ಸೋಮವಾರ- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ

ಜೂನ್ 13, ಮಂಗಳವಾರ- ಭೂಗರ್ಭಶಾಸ್ತ್ರ

ಜೂನ್ 14, ಬುಧವಾರ- ಕನ್ನಡ

ಯುಜಿಸಿ-ನೆಟ್ ಪರೀಕ್ಷೆ ದಿನಾಂಕ ಪ್ರಕಟ: ಅರ್ಜಿ ಸಲ್ಲಿಸುವುದು ಹೇಗೆ?ಯುಜಿಸಿ-ನೆಟ್ ಪರೀಕ್ಷೆ ದಿನಾಂಕ ಪ್ರಕಟ: ಅರ್ಜಿ ಸಲ್ಲಿಸುವುದು ಹೇಗೆ?

English summary
Department of Pre-University Education board announces time table for 2nd PU exam. Here is the full details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X