ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್ ಮೊರೆ ಹೋದ ಡಿ. ಕೆ. ಶಿವಕುಮಾರ್ ತಾಯಿ, ಪತ್ನಿ

|
Google Oneindia Kannada News

Recommended Video

D.K.Shivakumar wife and mother moved Delhi high court after ED summons.

ಬೆಂಗಳೂರು, ಅಕ್ಟೋಬರ್ 16 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಂಗಳವಾರ ಡಿ. ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಪರ ವಕೀಲರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿದ್ದಾರೆ.

ಡಿಕೆ ಶಿವಕುಮಾರ್‌ಗೆ ಮಂಗಳವಾರ ಎರಡೆರಡು ಕಹಿ ಸುದ್ದಿ ಡಿಕೆ ಶಿವಕುಮಾರ್‌ಗೆ ಮಂಗಳವಾರ ಎರಡೆರಡು ಕಹಿ ಸುದ್ದಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಗೌರಮ್ಮ ಮತ್ತು ಉಷಾಗೆ ಸಮನ್ಸ್ ನೀಡಲಾಗಿದೆ. ಅಕ್ಟೋಬರ್ 15ರಂದು ಗೌರಮ್ಮ ವಿಚಾರಣಗೆ ಹಾಜರಾಗಬೇಕಿತ್ತು. ಆದರೆ, ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದರು.

ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಇ.ಡಿ ಸಮನ್ಸ್ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಇ.ಡಿ ಸಮನ್ಸ್

ಡಿ. ಕೆ. ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಪ್ರಸ್ತುತ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ದೆಹಲಿ ಹೈಕೋರ್ಟ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದೆ.

ಹೈಕೋರ್ಟ್ ಮೆಟ್ಟಿಲೇರಿದ ಡಿ. ಕೆ. ಶಿವಕುಮಾರ್ ಆಪ್ತರು ಹೈಕೋರ್ಟ್ ಮೆಟ್ಟಿಲೇರಿದ ಡಿ. ಕೆ. ಶಿವಕುಮಾರ್ ಆಪ್ತರು

ಕುಟುಂಬದವರಿಗೆ ಸಮನ್ಸ್

ಕುಟುಂಬದವರಿಗೆ ಸಮನ್ಸ್

ಡಿ. ಕೆ. ಶಿವಕುಮಾರ್ ಪತ್ನಿ ಉಷಾಗೆ ಅಕ್ಟೋಬರ್ 17 ರಂದು ಮತ್ತು ತಾಯಿ ಗೌರಮ್ಮಗೆ ಅಕ್ಟೋಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಗೌರಮ್ಮ ಮಂಗಳವಾರ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ದೆಹಲಿ ಕಚೇರಿಗೆ ಬರುವಂತೆ ಇಡಿ ಸಮನ್ಸ್ ನೀಡಿದೆ. ಆದ್ದರಿಂದ, ದೆಹಲಿ ಹೈಕೋರ್ಟ್‌ನಲ್ಲಿ ಸಮನ್ಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಅರ್ಜಿಯ ವಿಚಾರಣೆ ನಡೆಯಲಿದೆ.

ಉಷಾ ವಿಚಾರಣೆ ಏಕೆ?

ಉಷಾ ವಿಚಾರಣೆ ಏಕೆ?

ಡಿ. ಕೆ. ಶಿವಕುಮಾರ್ ಕುಟುಂಬ ಸದಸ್ಯರ ನಡುವೆಯೇ ಹಲವು ಹಣಕಾಸಿನ ವ್ಯವಹಾರ ನಡೆದಿದೆ. ಡಿ. ಕೆ. ಶಿವಕುಮಾರ್‌ಗೆ ಉಷಾ 2.60 ಕೋಟಿ ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ, ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ. ಹಣದ ವ್ಯವಹಾರದ ಬಗ್ಗೆ ಮಾಹಿತಿ ಪಡೆಯಲು ಇಡಿ ನೋಟಿಸ್ ನೀಡಿದೆ.

ಮೊಮ್ಮಗಳಿಗೆ ಭೂಮಿ ಗಿಫ್ಟ್

ಮೊಮ್ಮಗಳಿಗೆ ಭೂಮಿ ಗಿಫ್ಟ್

ಡಿ. ಕೆ. ಶಿವಕುಮಾರ್ ತಾಯಿ ಗೌರಮ್ಮ ಮೊಮ್ಮಗಳು ಐಶ್ವರ್ಯಾ ಖಾತೆಗೆ 2018ರ ಜೂನ್‌ನಲ್ಲಿ 3 ಕೋಟಿ ಜಮೆ ಮಾಡಿದ್ದಾರೆ. 2001ರಲ್ಲಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿದ್ದ 3 ಎಕರೆ ಜಮೀನು ಗಿಫ್ಟ್ ನೀಡಿದ್ದಾರೆ. 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಜಮೀನು ಗಿಫ್ಟ್ ನೀಡಿದ್ದಾರೆ. ಆದ್ದರಿಂದ ಗೌರಮ್ಮ ವಿಚಾರಣೆಗೆ ಇಡಿ ಸಮನ್ಸ್ ನೀಡಿದೆ.

ಕುಟುಂಬ ಸದಸ್ಯರಿಗೆ ಸಮನ್ಸ್

ಕುಟುಂಬ ಸದಸ್ಯರಿಗೆ ಸಮನ್ಸ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಸಿರುವ ಇಡಿ ಈಗ ಕುಟುಂಬ ಸದಸ್ಯರಿಗೆ ಸಮ್ಸನ್ಸ್ ನೀಡುತ್ತಿದೆ. ಐಶ್ವರ್ಯಾ ವಿಚಾರಣೆಯನ್ನು ಇಡಿ ಒಮ್ಮೆ ನಡೆಸಿದೆ. ಸಹೋದರ ಡಿ. ಕೆ. ಸುರೇಶ್ ವಿಚಾರಣೆ ಎದುರಿಸಿದ್ದಾರೆ. ಈಗ ಪತ್ನಿ ಮತ್ತು ತಾಯಿಗೆ ಸಮನ್ಸ್ ನೀಡಲಾಗಿದೆ.

English summary
Karnataka former minister D.K.Shivakumar wife and mother moved Delhi high court after enforcement directorate issued summons to them for appear probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X