ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರಿಗೆ ವೋಟರ್ಸ್ ಗೈಡ್ ಹಂಚಿಕೆ: ರಾಜ್ಯದಲ್ಲಿ ಮೊದಲ ಪ್ರಯೋಗ

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವೋಟರ್ಸ್ ಗೈಡ್ ನೀಡಲಿದೆ. ಭಾವಚಿತ್ರವಿರುವ ಪಟ್ಟಿ ನೀಡುವುದರ ಜತೆಗೆ ಮತದಾರರಿಗೆ ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸಲಿದೆ.

ಚುನಾವಣಾ ಆಯೋಗ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಪ್ರೊ. ಮಹದೇಶ್ವರನ್ ನೇತೃತ್ವದಲ್ಲಿ ತಯಾರಿಸಿದ ಮತದಾರರ ಮನೋಭಾವ, ಅರಿವು ಕುರಿತ ಸಂಶೋಧನಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಿಷಯ ತಿಳಿಸಿದರು.

ಚುನಾವಣೆ ದಿನ ಸಿನಿಮಾ, ಶಾಪಿಂಗ್ ಹೋಗುವ ಪ್ಲ್ಯಾನ್ ಇದ್ದರೆ ಮರೆತುಬಿಡಿ! ಚುನಾವಣೆ ದಿನ ಸಿನಿಮಾ, ಶಾಪಿಂಗ್ ಹೋಗುವ ಪ್ಲ್ಯಾನ್ ಇದ್ದರೆ ಮರೆತುಬಿಡಿ!

ಬೂತ್ ಮಟ್ಟದಲ್ಲಿ ಮತದಾರರ ಜಾಗೃತಿ ಕೈಗೆತ್ತಿಕೊಳ್ಳಲಾಗಿದೆ. ಬೀದಿನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.ಹೈಸ್ಕೂಲ್, ಪಿಯು ಕಾಲೇಹುಗಳಲ್ಲಿ ಚುನಾವಣಾ ಪಾಠ ಶಾಲೆ ತೆರೆಯಲಾಗಿದೆ. ಬೇಸಿಗೆ ಶಿಬಿರ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮತದಾನದ ಮಹತ್ವ ತಿಳಿಸಲಾಗುತ್ತಿದೆ ಎಂದರು.

EC will provide voters guide this time!

ಕಳೆದ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಿಂದಾಗಿ ಮತದಾನ ಪ್ರಮಾಣ ಶೇ.9ಹೆಚ್ಚಾಗಿ ಶೇ.72 ಮತದಾನವಾಗಿತ್ತು. ಈ ಬಾರಿ ಇದನ್ನು ಶೇ.82ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮತದಾನಕ್ಕೆ ಮುನ್ನ ಪ್ರತಿ ಕುಟುಂಬದ ಮತದಾರರಿಗೆ ಮಾರ್ಗಸೂಚಿಗಳಿರುವ ಕರಪತ್ರ ವಿತರಣೆ ಮಾಡಲಾಗುವುದು. ಕರಪತ್ರದಲ್ಲಿ ಚುನಾವಣೆಯ ದಿನಾಂಕ ಮತ್ತು ಸಂಖ್ಯೆ, ಬೂತ್ ಮಟ್ಟದ ಅಧಿಕಾರಿಗಳ ಸಂಪರ್ಕ ವಿವರ, ಮುಖ್ಯ ವೆಬ್‌ಸೈಟ್ ಗಳು, ಸಹಾಯವಾಣಿ ಸಂಖ್ಯೆಗಳು, ಮತಗಟ್ಟೆಗಳಲ್ಲಿ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದೆಂಬ ಭಾವಚಿತ್ರವುಳ್ಳ ಮತದಾರರ ಚೀಟಿಯೊಂದಿಗೆ ಬೂತ್ ಮಟ್ಟದ ಅಧಿಕಾರಿಗಳು ವಿತರಿಸುತ್ತಾರೆ ಎಂದು ಹೇಳಿದರು.

English summary
Ever first of its kind, election commission has decided to provide voters guide which includes picture of the voter and details of facilities available at polling booth like drinking water and etc. The commission has intended to increase polling percentage to 82 in state assembly poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X