ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆ ನಿರೀಕ್ಷೆ ಅಂತ್ಯ: ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಚುನಾವಣೆಗಳು ಕರ್ನಾಟಕದ ಶಿಕ್ಷಕರ ವರ್ಗಾವಣೆಗೆ ಶಾಪವಾಗಿ ಪರಿಣಮಿಸಿತ್ತು, ಇದೀಗ ಶಾಪದಿಂದ ಮುಕ್ತವಾದಗಿದೆ, ಉಪ ಚುನಾವಣೆ ನೀತಿ ಸಂಹಿತೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಗೆ ಅಡ್ಡಿಯಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಕೊಟ್ಟಿದೆ, ಇಷ್ಟು ದಿನ ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಶಿಕ್ಷಕರ ವರ್ಗಾವಣೆಯನ್ನು ಮುಂದೂಡಲಾಗುತ್ತಿತ್ತು.

ಆದರೆ ಇದೀಗ ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು ಶಿಕ್ಷಕರ ವರ್ಗಾವಣೆಗೆ ಉಪ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟುವುದಿಲ್ಲ ಎಂದು ಹೇಳಿದೆ. ಹಾಗಾಗಿ ವರ್ಷಗಳಿಂದ ಕಾಯುತ್ತಿರುವ ಶಿಕ್ಷಕರ ವರ್ಗಾವಣೆ ಭಾಗ್ಯ ಮತ್ತೆ ಕೂಡಿಬಂದಂತಾಗಿದೆ.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ಇದರಿಂದ ಚುನಾವಣಾ ನೀತಿಸಂಹಿತೆಯಿಂದ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಯಾಗಬಹುದೆಂದು ಆತಂಕದಲ್ಲಿದ್ದ ಶಿಕ್ಷಕರ ವರ್ಗ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ಶಿಕ್ಷಕರ ನೇಮಕ ಪಟ್ಟಿ ಪ್ರಕಟಕ್ಕೆ ಅನುಮತಿ

ಶಿಕ್ಷಕರ ನೇಮಕ ಪಟ್ಟಿ ಪ್ರಕಟಕ್ಕೆ ಅನುಮತಿ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪದವೀಧರ ಶಿಕ್ಷಕರ ನೇಮಕಕ್ಕೆ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲು ಕೂಡ ಚುನಾವಣಾ ಆಯೋಗ ಅನುಮತಿ ನೀಡಿದೆ.

ನೇಮಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಿ ಆಯ್ಕೆಗೊಂಡ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೇಮಕ ಆದೇಶ ನೀಡುವಂತೆ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಮುಖ್ಯ ಚುನಾವಣಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು 3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

ಆಕ್ಷೇಪ ಸಲ್ಲಿಕೆಗೆ ಅವಕಾಶವಿದೆ

ಆಕ್ಷೇಪ ಸಲ್ಲಿಕೆಗೆ ಅವಕಾಶವಿದೆ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪ ಸಲ್ಲಿಸಲು ಶಿಕ್ಷಣ ಇಲಾಖೆಗೆ ಅವಕಾಶ ಕಲ್ಪಿಸಿದೆ. ಅ.11, 12,13,15 ಮತ್ತು 16ರಂದು ಆಕ್ಷೇಪಗಳನ್ನು ಕೇಂದ್ರೀಕೃತ ದಾಖಲೆ ಘಟಕದ ಕಚೇರಿಗೆ ಸಲ್ಲಿಸಬಹುದು.

ಉಪನ್ಯಾಸಕರಿಗೆ ಚೆಕ್‌ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗ ಉಪನ್ಯಾಸಕರಿಗೆ ಚೆಕ್‌ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗ

 8 ಜಿಲ್ಲೆಗಳಿಗೆ ಷರತ್ತು ವಿಧಿಸಲಾಗಿದೆ

8 ಜಿಲ್ಲೆಗಳಿಗೆ ಷರತ್ತು ವಿಧಿಸಲಾಗಿದೆ

ಉಪ ಚುನಾವಣೆ ನಡೆಯುತ್ತಿರುವ ಎಂಟು ಜಿಲ್ಲೆಗಳಾದ ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಬಾಗಲಕೋಟೆ, ರಾಮನಗರ, ಮೈಸೂರು, ಉಡುಪಿ, ಶಿವಮೊಗ್ಗ, ದಾವಣೆಗೆರೆ ಜಿಲ್ಲೆಗಳಲ್ಲಿ ಮಾಅದರಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆ ಮಾಡಬಾರದು ಹಾಗೂ ಹಾಜರಾತಿ ಪಡೆಯಬಾರದು ಎಂಬ ಷರತ್ತು ವಿಧಿಸಿ ಕೌನ್ಸೆಲಿಂಗ್ ನಡೆಸಲು ಆದೇಶ ನೀಡಲಾಗಿದೆ.

ಶಿಕ್ಷಕರ ಸಂಘದಿಂದ ಮನವಿ

ಶಿಕ್ಷಕರ ಸಂಘದಿಂದ ಮನವಿ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಎಂ ನಾರಾಯಣಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ನೇತೃತ್ವದಲ್ಲಿ ಸಂಘದ ನಿಯೋಗ ಬುಧವಾರ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ, ವರ್ಗಾವಣೆ ಕೌನ್ಸೆಲಿಂಗ್ ಮುಂದುವರೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

English summary
Election commission has given green signal for government school teachers transfer counseling with some conditions. Here is the story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X