ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ 'ಸಕಾಲ' ಕ್ಕೆ ರಾಷ್ಟ್ರೀಯ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಜ. 7: ಕರ್ನಾಟಕ ಸರ್ಕಾರದ ಇ ಆಡಳಿತ ಸೇವೆಯ ಮಹತ್ವದ ಯೋಜನೆ ಕಾಲಮಿತಿಯಲ್ಲಿ ಸೇವೆ ಒದಗಿಸುವ 'ಸಕಾಲ' ಯೋಜನೆಗೆ 2013-14ನೆ ಸಾಲಿನ ಇ-ಆಡಳಿತ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದ 'ಸಕಾಲ' ಯೋಜನೆ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ, ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ 'ಸಕಾಲ' ಯೋಜನಾ ನಿರ್ದೇಶಕಿ ಡಾ.ಶಾಲಿನಿ ರಜನೀಶ್ ಗೆ ತಿಳಿಸಿದ್ದಾರೆ.

ನಾಗರಿಕ ಕೇಂದ್ರಿತ ಸೇವಾ ಪೂರೈಕೆಯಲ್ಲಿ ವಿಶಿಷ್ಟ ಸಾಧನೆಯ ವರ್ಗದಲ್ಲಿ ಅದಕ್ಕೆ ಬೆಳ್ಳಿಯ ಪದಕ ದೊರೆತಿದೆ. ಕೇರಳದ ಕೊಚ್ಚಿಯಲ್ಲಿ ಜ. 30 ಹಾಗೂ 31ರಂದು ನಡೆಯುವ ಇ-ಆಡಳಿತದ ಕುರಿತ 17ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಭಾರತದ ಇತ್ತೀಚಿನ ಚರಿತ್ರೆಯಲ್ಲಿ ನಾಗರಿಕರಿಗೆ ಸರಕಾರಿ ಇಲಾಖೆಗಳ ಸೇವೆಯನ್ನು ಕಾಲಬದ್ಧವಾಗಿ ಒದಗಿಸುವ ಶಾಸನಾತ್ಮಕ ಭರವಸೆ ನೀಡಲಾಗಿದೆ. ಇದನ್ನು ಕರ್ನಾಟಕದಲ್ಲಿ 'ಸಕಾಲ' ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

ದೇಶದ 14 ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಕೇಂದ್ರೀಯ ಕಾಯ್ದೆಯೊಂದರ ಪ್ರಸ್ತಾಪವೂ ಇದೆ. ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಸೇವೆಗಳು ಸಕಾಲದ ವ್ಯಾಪ್ತಿಯಲ್ಲಿದ್ದು, ಕಾಲಬದ್ಧವಾಗಿ ಸೇವೆಯೊದಗಿಸಲು ವಿಫಲರಾದ ಅಧಿಕಾರಿಗಳಿಗೆ ದಂಡ ವಿಧಿಸಲಾಗುತ್ತದೆ. ಕಚೇರಿಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆಯ ನಡುವೆಯೂ ರಾಜ್ಯ ಈ ಒಂದು ಸಾಧನೆ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ.

Sakala e-governance scheme bags national award

ಸಕಾಲ: ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ -2012' ಅಥವಾ ಸಕಾಲ ಯೋಜನೆ ಏ.2ರಿಂದ ಬೆಂಗಳೂರು ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಬಂದಿದೆ. ನಾಗರಿಕರಿಗೆ ವಿಳಂಬಯಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಯೋಜನೆಗೆ ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚಾಲನೆ ನೀಡಿದ್ದರು.

ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಪೂರೈಸುವ 11 ಇಲಾಖೆ-ಕಂದಾಯ, ಶಿಕ್ಷಣ, ಆರ್ಥಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಒಟ್ಟು 151 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ. ಇನ್ನಷ್ಟು ಇಲಾಖೆಗಳನ್ನು ಸಕಾಲ ವ್ಯಾಪ್ತಿಗೆ ಸೇರಿಸಲಾಗುತ್ತಿದೆ.

ಸೇವೆ ಟ್ರ್ಯಾಕ್ ಮಾಡಿ: ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ನೀಡಿದಲ್ಲಿ ಅವರಿಗೆ ಎಸ್ಎಂಎಸ್ ಮೂಲಕ ಅರ್ಜಿಯ ಪ್ರಗತಿಯ ಕುರಿತು ವರದಿ ದೊರಕುತ್ತದೆ. ಮೊಬೈಲ್ ಇಲ್ಲದಿದ್ದಲ್ಲಿ ಅರ್ಜಿದಾರರು ವೆಬ್ ಸೈಟ್ ಮೂಲಕ ತಮ್ಮ ಅರ್ಜಿಯ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ. ಅಥವಾ ಸಕಾಲ ದ ಕಾಲ್ ಸೆಂಟರ್ ಗೆ ಕರೆಮಾಡಿ ಅರ್ಜಿ ಪ್ರಗತಿ ಬಗ್ಗೆ ವಿವರ ಪಡೆಯಬಹುದು. ['ಸಕಾಲ'ಕ್ಕೆ ಸಖತ್ ತಯಾರಿ!]

ಸಂಪರ್ಕ ವಿಳಾಸ : ದೂರವಾಣಿ ಸಂಖ್ಯೆ 080-44554455 ಗೆ ಕರೆಮಾಡಿ
* ಈ ಕಾಯ್ದೆಯ ವೆಬ್ ವಿಳಾಸ www.sakala.kar.nic.in
* ಇ-ಮೇಲ್ ವಿಳಾಸ [email protected] ಅಂತರ್ಜಾಲ ಮುಖಾಂತರವೂ ಸಾರ್ವಜನಿಕರು ಈ ಕಾಯ್ದೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

English summary
Sakala, an e-governance scheme of the State government for time-bound delivery of services to citizens, has bagged the national award under the “Outstanding performance in citizen centric service delivery” category for 2013-14 said Shalini Rajneesh, Secretary, DPAR and Mission Director – Sakala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X