ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿ ತೆರಿಗೆ ಪಾವತಿ ಇನ್ನು ತಲೆನೋವಲ್ಲ

|
Google Oneindia Kannada News

ಬೆಂಗಳೂರು, ಜೂನ್ 05: ಆಸ್ತಿ ತೆರಿಗೆ ಪಾವತಿಗೆ ಗಂಟೆಗಟ್ಟಲೆ ಕಾಯುವ, ಅಧಿಕಾರಿಗಳಿಗೆ ಅಷ್ಟೋ ಇಷ್ಟೋ 'ಕೈ ಬೆಚ್ಚಗೆ' ಮಾಡುವ ತಲೆನೋವುಗಳಿಗೆ ರಾಜ್ಯ ಸರ್ಕಾರ ಅಂತ್ಯ ಹಾಡಿದೆ.

ರಾಜ್ಯದ ಎಲ್ಲಾ 10 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರುತ್ತಿದೆ.

ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಯು.ಟಿ.ಖಾದರ್, ಇ-ಆಸ್ತಿ ಪೋರ್ಟಲ್ ಮೂಲಕ ತೆರಿಗೆ ಪಾವತಿಯ ಜೊತೆಗೆ ಖಾತಾ ಬದಲಾವಣೆ ಸೇವೆಯನ್ನೂ ಸಹ ಆನ್‌ಲೈನ್ ಮೂಲಕವೇ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

e-asset introduced in Karnataka for easy asset tax paying

ನಗರಪಾಲಿಕೆಯ ಜೊತೆಗೆ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿಯೂ ಈ ವ್ಯವಸ್ಥೆ ಅತಿ ಶೀಘ್ರದಲ್ಲಿ ಜಾರಿಯಾಗಲಿದೆ, ಆ ಮೂಲಕ ಆಸ್ತಿ ತೆರಿಗೆ ಅತ್ಯಂತ ಸರಳವಾಗಿ ಆಗಲಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಈ ಸೇವೆಯು ಈಗ ರಾಜ್ಯದಾದ್ಯಂತ ವಿಸ್ತರಣೆ ಆಗಲಿದೆ.

ಕಟ್ಟಡಗಳ ನಿಯಮ ಉಲ್ಲಂಘಿಸಿದರೆ ಎರಡು ಪಟ್ಟು ತೆರಿಗೆ ಕಟ್ಟಡಗಳ ನಿಯಮ ಉಲ್ಲಂಘಿಸಿದರೆ ಎರಡು ಪಟ್ಟು ತೆರಿಗೆ

ಅರ್ಜಿ ನಮೂನೆ 3/2 ಪರಿಶೀಲನೆ, ವಿವಿಧ ಬಗೆಯ ಸ್ವತ್ತುಗಳ ಹುಡುಕಾಟಕ್ಕೂ ಅವಕಾಶವಿದೆ, ಅನುಮೋದಿತ ಸ್ವತ್ತುಗಳು, ಜಿಲ್ಲಾವಾರು ಅನುಮೋದಿತ ಸ್ವತ್ತುಗಳ ಮಾಹಿತಿಯನ್ನೂ ಸಹ ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ.

English summary
E-asset introduced in all 10 city municipality for easy asset tax paying. Minister UT Khader said it will be introduced to Gram panchayat and town panchayat also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X