ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ವತಮ್ಮ ಅಗಲಿಕೆಗೆ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಗಣ್ಯರ ಕಂಬನಿ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 31: ಕನ್ನಡ ಚಿತ್ರರಂಗದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

"ಡಾ ರಾಜ್ ಪತ್ನಿಯಾಗಿ ಅವರಂತೆಯೇ ಘನತೆ, ವಾತ್ಸಲ್ಯ ಮತ್ತು ಉನ್ನತಿಕೆಯ ವ್ಯಕ್ತಿತ್ವದಿಂದ ಅಮ್ಮ ಎಂದು ಗೌರವಿಸುವಂತಹ ಎತ್ತರದ ಸ್ಥಾನಕ್ಕೆ ಏರಿದವರು ಪಾರ್ವತಮ್ಮ," ಎಂದು ಪಾರ್ವತಮ್ಮ ರಾಜ್ ಕುಮಾರ್ ವ್ಯಕ್ತಿತ್ವವನ್ನು ಯಡಿಯೂರಪ್ಪ ಕೊಂಡಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಪಾರ್ವತಮ್ಮ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮತ್ತು ಕಲಾಭಿಮಾನಿಗಳಲ್ಲಿ ಅನಾಥ ಪ್ರಜ್ಞೆ ಉಂಟಾಗಿದೆ," ಎಂದು ಅವರು ಹೇಳಿದ್ದಾರೆ.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]

ಇನ್ನು "ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.[ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ]

ಡಿವಿ ಸದಾನಂದ ಗೌಡ

[ಪಾರ್ವತಮ್ಮ ಕನ್ನಡ ಚಿತ್ರರಂಗ ಶಕ್ತಿ : ಟ್ವಿಟ್ಟರಲ್ಲಿ ಕಂಬನಿ][ಪಾರ್ವತಮ್ಮ ಕನ್ನಡ ಚಿತ್ರರಂಗ ಶಕ್ತಿ : ಟ್ವಿಟ್ಟರಲ್ಲಿ ಕಂಬನಿ]

ಅನಂತ್ ಕುಮಾರ್

ಅನಂತ್ ಕುಮಾರ್

[ಪಾರ್ವತಮ್ಮ ನಿಧನ: ಚಿತ್ರಮಂದಿರಗಳು ಬಂದ್, ಹಲವು ಶಾಲೆಗಳಿಗೆ ರಜೆ][ಪಾರ್ವತಮ್ಮ ನಿಧನ: ಚಿತ್ರಮಂದಿರಗಳು ಬಂದ್, ಹಲವು ಶಾಲೆಗಳಿಗೆ ರಜೆ]

ಸಿದ್ದರಾಮಯ್ಯ

[ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...][ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...]

ಬಿಎಸ್ ಯಡಿಯೂರಪ್ಪ

"ಕನ್ನಡ ಚಿತ್ರ ರಂಗದ ಆಧಾರ ಸ್ತಂಭದಂತಿದ್ದ ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಡಾ ರಾಜ್ ಪತ್ನಿಯಾಗಿ ಅವರಂತೆಯೇ ಘನತೆ, ವಾತ್ಸಲ್ಯ ಮತ್ತು ಉನ್ನತಿಕೆಯ ವ್ಯಕ್ತಿತ್ವದಿಂದ ಅಮ್ಮ ಎಂದು ಗೌರವಿಸುವಂತಹ ಎತ್ತರದ ಸ್ಥಾನಕ್ಕೆ ಏರಿದ್ದರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮತ್ತು ಕಲಾಭಿಮಾನಿಗಳಲ್ಲಿ ಅನಾಥ ಪ್ರಜ್ಞೆ ಉಂಟಾಗಿದೆ," ಎಂದು ಬಿಎಸ್ ಯಡಿಯೂರಪ್ಪ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಟಿ ರವಿ

"ಇಡೀ ಕನ್ನಡ ಚಿತ್ರರಂಗಕ್ಕೆ ಮಾತೃ ಸ್ಥಾನ ನೀಡಿದ್ದ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ರವರ ನಿಧನದಿಂದ ಮನಸ್ಸಿಗೆ ನೋವಾಗಿದೆ. ಅಮ್ಮನವರ ಆತ್ಮಕ್ಕೆ ಭಗವಂತ ಶಾoತಿ ನೀಡಲ," ಎಂದು ಮಾಜಿ ಸಚಿವ ಸಿಟಿ ರವಿ ಟ್ವಿಟ್ಟರ್ ಸಂದೇಶದಲ್ಲಿ ಹೇಳಿದ್ದಾರೆ.

ಎಸ್ ಸುರೇಶ್ ಕುಮಾರ್

ಇನ್ನು ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್ ಕೂಡಾ ಟ್ವೀಟ್ ಮಾಡಿದ್ದು, "ಪಾರ್ವತಮ್ಮ ರಾಜ್ ಕುಮಾರ್ ರವರ ನಿಧನಕ್ಕೆ ನನ್ನ ಸಂತಾಪ. ಮೇರು ನಟ ಡಾ. ರಾಜ್ ಕುಮಾರ್ ರವರ ಧರ್ಮಪತ್ನಿಯಾಗಿ ಈ ಧೀಮಂತ ಮಹಿಳೆ ಕನ್ನಡ ಚಿತ್ರರಂಗಕ್ಕೆ ಶಕ್ತಿಯಾಗಿದ್ದರು," ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿ ಪದ್ಮಾವತಿ

ಜಿ ಪದ್ಮಾವತಿ

ಪಾರ್ವತಮ್ಮ ರಾಜ್ ಕುಮಾರ್ ಅವರೊಬ್ಬರು ವಿಶೇಷ ಮಹಿಳೆ. ಪ್ರತಿಯೊಬ್ಬರ ಕನ್ನಡಿಗರ ಮನಸ್ಸಲ್ಲಿ ಮಾತೃ ಸ್ವರೂಪಿಣಿಯಾಗಿ ಉಳಿದುಕೊಂಡಿದ್ದಾರೆ. ಹಲವು ಕಾದಂಬರಿ ಆಧಾರಿತ ಸಾಮಾಜಿಕ ಕಳಕಳಿ ಉಳ್ಳ ಚಿತ್ರಗಳನ್ನು ಅವರು ಕೊಡುಗೆಯಾಗಿ ನೀಡಿದವರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಕೇಳಿಕೊಳ್ಳುತ್ತೇನೆ," ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಜಿ ಪದ್ಮಾವತಿ ಹೇಳಿದ್ದಾರೆ.

English summary
Parvathamma Rajkumar passed away in Bengaluru on Tuesady night. His death promoted many condolences on social media and one was from former chief minister and Union minister DV Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X