ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ಸಹಿಸಿಕೊಂಡರೆ ಮುಂದಿದೆ ಭರ್ಜರಿ ಮುಂಗಾರು

By Srinath
|
Google Oneindia Kannada News

ಬೆಂಗಳೂರು, ಮಾರ್ಚ್18- ಬಿರುಬಿಸಿಲು ಜತೆಗೆ ಚುನಾವಣೆ ಕಾವು ಸೇರಿ ಜನತೆ ಹೈರಾಣಗೊಂಡಿರುವ ಹೊತ್ತಿನಲ್ಲಿ ತಂಪಾದ ವರದಿಯೊಂದು ಬಂದಿದೆ. ಏನಪ್ಪಾ ಅಂದರೆ ಸದ್ಯಕ್ಕೆ ಚುನಾವಣೆ ಕಾವು ಮತ್ತು ವಿಪರೀತವಾದ ಬೇಸಿಗೆಯನ್ನು ಸಹಿಸಿಕೊಂಡರೆ ಮುಂದೆ ಮುಂಗಾರು ವೇಳೆಗೆ ಭರ್ಜರಿ ಮಳೆಯಾಗಲಿದೆ.

ಅಂದರೆ ಭಾರತದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಲಿದೆ ಎಂದು IIT Bhubaneshwar ಸಂಶೋಧಕರು ಉಪಗ್ರಹ ಆಧಾರಿತ ಮಾಹಿತಿಯನ್ನಾಧರಿಸಿ ಹಿತಕರ ಸುದ್ದಿ ನೀಡಿದ್ದಾರೆ. ಕಳೆದ ಬಾರಿಯೂ ಭರ್ಜರಿ ಮುಂಗಾರು ಆಗಿತ್ತು. ಆದರೆ, ಅದರ ಹಿಂದಿನ ನಾಲ್ಕೈದು ವರ್ಷಗಳಂತೂ ಕೃಷಿಕರಿಗೆ ಮುಂಗಾರು ಕೈಕೊಟ್ಟಿತ್ತು.

dust-over-africa-gulf-results-in-good-monsoon-india-nature-geoscience
ಅಕ್ಷರಶಃ ಧೂಳೆಬ್ಬಿಸಲಿದೆ ಭರ್ಜರಿ ಮುಂಗಾರು: ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ಭಾಗಗಳಲ್ಲಿ ವಾತಾವರಣದಲ್ಲಿ ಧೂಳು ದಿನೇ ದಿನೇ ಹೆಚ್ಚುತ್ತಿದೆ. ಇದು ಭಾರತದ ಮುಂಗಾರು ಋತುವಿನ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಐಐಟಿ ಸಂಶೋಧಕರಾದ ರಾಷ್ ಮತ್ತು ವಿ ವಿನೋಜ್. ಧೂಳಿನ ಕಣಗಳು ವಾತಾವರಣದಲ್ಲಿ ಹೆಚ್ಚಾದರೆ ಹೆಚ್ಚು ಬೀಳುತ್ತದೆ ಎಂಬುದು ಪುರಾತನ ನಂಬಿಕೆ. ಈ ಧೂಳು ಮುಂಗಾರು ವೇಳೆಗೆ ಅರಬ್ಬೀ ಸಮುದ್ರದ ಮೇಲೆ ತನ್ನ ಲೀಲೆ ತೋರಲಿದೆ ಎಂದು 'Nature Geoscience' ಎಂಬ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿ ಸ್ಪಷ್ಟಪಡಿಸಿದೆ.

ಗಮನಿಸಬೇಕಾದ ಸಂಗತಿಯೆಂದರೆ ಈ ಬಾರಿ ಮುಂಗಾರು ಕುರಿತಾದ ಮೊದಲ ವರದಿ ಇದಾಗಿದೆ. ಮುಂಗಾರು ಮೊದಲ ಹನಿ ಧರೆಯ ಮೇಲೆ ಬೀಳುವ ಕೊನೆಯ ಕ್ಷಣದವರೆಗೂ ಇಂತಹ ವರದಿಗಳು ಇನ್ನೂ ಹತ್ತಾರು ಬರಲಿವೆ. ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕ ಬಿ ಪುಟ್ಟಣ್ಣ ಅವರೂ ಇದನ್ನೇ ಹೇಳಿರುವುದು. ಜತೆಗೆ ಅವರು ಇನ್ನೂ ಒಂದು ಇಂಟರೆಸ್ಟಿಂಗ್ ಸಂಗತಿಯನ್ನೂ ಹೇಳಿದ್ದಾರೆ.

'ಮುಂಗಾರು ಬಗ್ಗೆ ಈಗಲೇ ಮುನ್ಸೂಚನೆ ನೀಡುವುದು ಸಮಂಜಸವಲ್ಲ. ವಾತಾವರಣದಲ್ಲಿನ ಸ್ಥಿತ್ಯಂತರಗಳನ್ನು ಮಾರ್ಚ್ 31ರವರೆಗೂ ಅವಲೋಕಿಸಿ, ಆ ಬಳಿಕ ಭಾರತೀಯ ಹವಾಮಾನ ಇಲಾಖೆ ಏ. 16ರ ಸುಮಾರಿಗೆ ಪ್ರಕಟಿಸುವ ವರದಿಯೇ ಅಧಿಕೃತ. ಅದಕ್ಕೂ ಮುಂಚೆ ಹೇಳುವ ಮುನ್ಸೂಚನೆ ನಿಖರವಾಗಿರಲು ಸಾಧ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ವರದಿಗಳು ಏನೇ ಇರಲಿ ಮಳೆ ಉತ್ತಮವಾಗಿರಲಿ ಎಂಬ ಸದಾಶದ ರೈತಾಪಿ ವರ್ಗದ್ದು.

English summary
Dust over Africa and Gulf results in good monsoon in India Nature Geoscience report. Dust over Africa and West Asia results in good monsoon in India says Nature Geoscience report. A new analysis of satellite data has revealed a link between the dust and stronger monsoons in India. The study shows that dust in the air absorbs sunlight warming the air and strengthening the winds carrying moisture eastward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X