ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BREAKING: ಇದೇ ವಾರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ; ಶಾಸಕ ರೇಣುಕಾಚಾರ್ಯ!

|
Google Oneindia Kannada News

ಬೆಂಗಳೂರು, ಜು. 15: "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಬೇಕು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಪುನರುಚ್ಚರಿಸಿದ್ದಾರೆ. ಇದೇ ವಿಷಯದ ಕುರಿತು ದೆಹಲಿಗೆ ತೆರಳುವ ಬಗ್ಗೆ ವಿಧಾನಸೌಧದಲ್ಲಿ ತಿಳಿಸಿರುವ ಅವರು, "ಲೋಕಸಭಾ ಅಧಿವೇಶನ ಜು.19 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜು. 21 ಹಾಗೂ 22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಎಂದು ಕೊಂಡಿದ್ದೇವೆ" ಎಂದಿದ್ದಾರೆ.

"ಮುಖ್ಯಮಂತ್ರಿ ಬದಲಾವಣೆ ಮಾಡುವ ಅಧಿಕಾರ ಒಬ್ಬಿಬ್ಬರ ಕೈಯಲ್ಲಿ ಇಲ್ಲ. ಹಾಗೆ ಮಾಡುವವರು ರಾಜ್ಯದ ಜನರ ಮುಂದೆ ವಿಲನ್ ಆಗುತ್ತಾರೆ. ಯಡಿಯೂರಪ್ಪ ಅವರು ಸಿಎಂ ಆಗಿ ಎರಡು ವರ್ಷಗಳಾದವು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರೇಣುಕಾಚಾರ್ಯನಂಥ ಒಬ್ಬಿಬ್ಬರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿಲ್ಲ. ಎಲ್ಲ ಶಾಸಕರು ಸೇರಿಕೊಂಡು ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕೂಳಿತುಕೊಂಡು ದೆಹಲಿಯಲ್ಲಿ ಲಾಬಿ ಮಾಡಿದರೆ ಅದೆಲ್ಲ ಆಗುವುದಿಲ್ಲ. ಕೋವಿಟ್‌ನಿಂದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಜವಾಬ್ದಾರಿ" ಎಂದು ಶಾಸಕ ರೇಣುಕಾಚಾರ್ಯ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ವಿರೋಧಿಗಳ ಮೇಲೆ ಕಿಡಿ ಕಾರಿದ್ದಾರೆ.

"ಏನೇ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಮಾತನಾಡಬೇಕು. ಶಾಸಕರ ಸಹಿ ಸಂಗ್ರಹ ಮಾಡುವುದಕ್ಕೆ ಉಸ್ತುವಾರಿ ಅರುಣ್ ಸಿಂಗ್ ಬರುವಾಗ ನಿರ್ಧರಿಸಿದ್ದು ಸತ್ಯ. ಆದರೆ ಯಡಿಯೂರಪ್ಪ ಹಾಗೂ ಅಧ್ಯಕ್ಷರು ಸಹಿ ಸಂಗ್ರಹ ಬೇಡ ಅಂತ ಖಡಾಖಂಡಿತವಾಗಿ ಹೇಳಿದ್ದರು. ಸಹಿ ಮಾಡಿಸಿದ್ದು ಸತ್ಯ, ತೋರಿಸಿದ್ದು ಸತ್ಯ ಆದರೆ ಕೇಂದ್ರದ ವರಿಷ್ಟರಿಗೆ ಅದನ್ನು ನಾನು ಕೊಡ್ತೀನಿ ಅಂತ ಹೇಳಿಲ್ಲ" ಎಂದು ಸಿಎಂ ಪರವಾಗಿ ಅಹಿ ಸಂಗ್ರಹದ ಕುರಿತು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೀಗುವ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.

During Lok Sabha session will go to Delhi meet High Cammond: MLA Renukacharya

Recommended Video

ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Oneindia Kannada

"ಸಹಜವಾಗಿಯೇ ಸಿಎಂ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗೋಸ್ಕರ ದೆಹಲಿಗೆ ಹೋಗಬಹುದು. ಆದರೆ ಅದನ್ನು ಕೇಳುವಷ್ಟು ದೊಡ್ಡವನೂ ನಾನಲ್ಲ, ಅವರು ನನ್ನ ಹತ್ರ ಹೇಳುವಷ್ಟು ಸಣ್ಣವರೂ ಅವರಲ್ಲ. ಯಾರು ಪದೇ ಪದೇ ನಾಯಕತ್ವ ಬದಲಾವಣೆ ಮಾತನಾಡುವವರಿಗೆ ಈಗಾಗಲೇ ಹೇಳಿಯಾಗಿದೆ. ಆದರೂ ಕೆಲವರು ಹಗಲು ಕನಸು ಕಾಣ್ತಾರೆ. ಯಾರು ಯಾರಿಗೆ ಯಾವ ಕನಸು ಬೀಳತ್ತೋ ಎಂಜಾಯ್ ಮಾಡಿ" ಎಂದು ವಿರೋಧಿಗಳಿಗೆ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.

English summary
Lok Sabha session will start from June 19. We have seen some legislators go to Delhi on the 21st and 22nd said MLA Renukacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X