ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟದಿಂದ ಜನರನ್ನು ಕಾಪಾಡಿದ್ದು ಅನ್ನಭಾಗ್ಯವೇ ಹೊರತು ಮೋದಿ ಚಪ್ಪಾಳೆಯಲ್ಲ

|
Google Oneindia Kannada News

ಮೈಸೂರು, ಏಪ್ರಿಲ್ 19: ಕೊರೊನಾ ಸಂಕಷ್ಟ ಇಡೀ ದೇಶ ಎದುರಿಸುತ್ತಿರುವ ಈ ಹೊತ್ತಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಲೋಕೋಪಯೋಗಿ ಖಾತೆಯ ಸಚಿವ, ಹಿರಿಯ ಕಾಂಗ್ರೆಸ್ ಡಾ.ಎಚ್.ಸಿ.ಮಹಾದೇವಪ್ಪ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಹಾದೇವಪ್ಪ, "ಈ ಕರೋನಾ ಸಂಕಷ್ಟದ ವೇಳೆ ರಾಜ್ಯದ ಜನರನ್ನು ಕಾಪಾಡುತ್ತಿರುವುದು @siddaramaiah ನೇತೃತ್ವದ @INCKarnataka ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾದ ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ & ಇಂದಿರಾ ಕ್ಯಾ‌ಟೀನ್ ಯೋಜನೆಯೇ ವಿನಃ, @narendramodi ಅವರ ಚಪ್ಪಾಳೆಯಾಗಲೀ, ದೀಪ ಬೆಳಗುವ ಹುಸಿ ಪ್ರಚಾರವಾಗಲೀ ಅಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ ಇನ್ ಕರ್ನಾಟಕ: ನಿಮ್ಮನಿಮ್ಮ ಜಿಲ್ಲೆಗಳಲ್ಲಿ ಪಾಸಿಟೀವ್ ಕೇಸ್ ಎಷ್ಟು? ಇಲ್ಲಿದೆ ಪಟ್ಟಿಕೊರೊನಾ ಇನ್ ಕರ್ನಾಟಕ: ನಿಮ್ಮನಿಮ್ಮ ಜಿಲ್ಲೆಗಳಲ್ಲಿ ಪಾಸಿಟೀವ್ ಕೇಸ್ ಎಷ್ಟು? ಇಲ್ಲಿದೆ ಪಟ್ಟಿ

"ಪ್ರಚಾರದ ಹಾದಿ ಹಿಡಿದಿರುವ @BJP4Karnataka ಪಕ್ಷದ ಮುಖಂಡರಿಗೆ ಕನಿಷ್ಟ ಆತ್ಮಸಾಕ್ಷಿ ಇಲ್ಲ. ಇಂತವರಿಂದ ಸಮಾಜವು ಸದಾ ತಲೆ ತಗ್ಗಿಸುತ್ತಲೇ ಇರುತ್ತದೆ ಮತ್ತು ಸದಾ ತೊಂದರೆಗೆ ಸಿಲುಕುತ್ತದೆ" ಎಂದೂ ಮಹಾದೇವಪ್ಪ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

During Corona Crisis Siddaramaiah Governments Schemes Helped Not Modi Clap, Dr. H.C.Mahadevappa

"ದೇಶದ ಜನರು ಕರೋನಾ ಆತಂಕದ ನೆರಳಲ್ಲಿ ಬದುಕು ನಡೆಸುತ್ತಿದ್ದರೆ ಇತ್ತ @narendramodi ಸರ್ಕಾರವು ಅಗತ್ಯ ವಸ್ತುಗಳಾದ ಮೇಲೆ ಔಷಧಿ, PPE ಕಿಟ್, ಸ್ಯಾನಿಟೈಸರ್, ಮಾಸ್ಕ್, ಹಾಗೂ ವೆಂಟಿಲೇಟರ್‌ಗಳ ಮೇಲೆ
ಜಿಎಸ್ಟಿ ತೆರಿಗೆಯನ್ನು ವಿಧಿಸಿದ್ದು ಈ ಸಂಕಷ್ಟದ ವೇಳೆಯಲ್ಲೂ ಅಮಾನವೀಯತೆಯನ್ನು ಪ್ರದರ್ಶಿಸುತ್ತಿದೆ" ಇದು ಮಹಾದೇವಪ್ಪ ಮಾಡಿರುವ ಇನ್ನೊಂದು ಟ್ವೀಟ್.

'ಅಕ್ಕಿಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆಗಳನ್ನ ಸಿದ್ದರಾಮಯ್ಯ ಕೊಟ್ಟಿರೋದು ಅವರ ಸ್ವಂತ ಹಣದಿಂದ ಅಲ್ಲ. ಇದೆಲ್ಲಾ ಕೊಟ್ಟಿದ್ದು ಸರ್ಕಾರದ‌ ಖಜಾನೆಯ ದುಡ್ಡಲ್ಲಿ' ಎನ್ನುವ ಪ್ರತಿಕ್ರಿಯೆ ಮಹಾದೇವಪ್ಪ ಅವರ ಟ್ವೀಟಿಗೆ ಬಂದಿದೆ.

ಲಾಕ್ ಡೌನ್ 2.0: ಕರ್ನಾಟಕದಲ್ಲಿ ಏಪ್ರಿಲ್ 20 ರಿಂದ 'ಇವೆಲ್ಲ' ಲಭ್ಯ.!ಲಾಕ್ ಡೌನ್ 2.0: ಕರ್ನಾಟಕದಲ್ಲಿ ಏಪ್ರಿಲ್ 20 ರಿಂದ 'ಇವೆಲ್ಲ' ಲಭ್ಯ.!

'ಇದೇ ಅನ್ನಭಾಗ್ಯಕ್ಕೆ ಬಿಜೆಪಿ ವಿರೋಧ ಮಾಡಿದ್ದಲ್ಲದೇ ಗೇಲಿ ಮಾಡಿತ್ತು. ಬರೀ ಹಿಂದೂ ಅನ್ನುವ ಪದ ಇಟ್ಕೊಂಡು ಆಟ ಆಡಿದ್ರೆ ಬಡವನ ಹೊಟ್ಟೆ ತುಂಬಲ್ಲ ಸ್ವಾಮಿ' ಎನ್ನುವ ಸಮರ್ಥನೆಯ ಪ್ರತಿಕ್ರಿಯೆಯೂ, ಮಹಾದೇವಪ್ಪ ಟ್ವೀಟಿಗೆ ಬಂದಿದೆ.

English summary
During Corona Crisis Siddaramaiah Government's Schemes Helped People Not PM Modi's Clap, Dr. H.C.Mahadevappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X