ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್: ಅಸಲಿಗೆ ಬಿಎಸ್ವೈ ಸರಕಾರದ ಯಾವ ಸಚಿವರ ಮೇಲೆ ಸಿದ್ದರಾಮಯ್ಯಗೆ ಗುಮಾನಿ?

|
Google Oneindia Kannada News

ಬೆಂಗಳೂರು, ಸೆ 7: ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಡ್ರಗ್ಸ್ ಪ್ರಕರಣದ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೇ ಗುಡುಗಿದ್ದಾರೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರವೇ ಸದನವನ್ನು ಬಹುತೇಕ ಆಪೋಶನ ತೆಗೆದುಕೊಳ್ಳುವ ಸಾಧ್ಯತೆಯಿದೆ.

Recommended Video

ಸಂಯುಕ್ತ some kirik ಮಾಡ್ಕೊಂಡು something ಮಾಡ್ಬಿಟ್ರು | Oneindia Kannada

ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷದವರಿಗೆ ಈಗಾಗಲೇ ಹಲವು ಅಸ್ತ್ರಗಳಿವೆ. ಆದರೆ, ಡ್ರಗ್ಸ್ ವಿಚಾರ ಮಾತ್ರ ಕಾಂಗ್ರೆಸ್ಸಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕಾರಣ, ಬಂಧಿತ ರಾಗಿಣಿ ದ್ವಿವೇದಿ, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯಾಗಿದ್ದದ್ದು.

ರಾಗಿಣಿ ಜೊತೆಗಿನ ಬಿಜೆಪಿ ನಾಯಕರ ಫೋಟೊ, ವಿಡಿಯೋ ಇದೆ: ಸಿದ್ದರಾಮಯ್ಯರಾಗಿಣಿ ಜೊತೆಗಿನ ಬಿಜೆಪಿ ನಾಯಕರ ಫೋಟೊ, ವಿಡಿಯೋ ಇದೆ: ಸಿದ್ದರಾಮಯ್ಯ

ಅಧಿವೇಶನ ಆರಂಭಕ್ಕೆ ಮುನ್ನ ಡ್ರಗ್ಸ್ ಪ್ರಕರಣದ ವಿಚಾರದಲ್ಲಿ ಹಲವು ದಾಖಲೆಗಳನ್ನು ನೀಡುವುದಾಗಿ, ಬೆಂಗಳೂರು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರಿಗೆ ಮಾತು ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇವೆಲ್ಲದರ ನಡುವೆ, ಸಿದ್ದರಾಮಯ್ಯ ಸಾಲುಸಾಲು ಟ್ವೀಟ್ ಗಳನ್ನು ಮಾಡಿದ್ದು, "ಕೆಲವು ಸಚಿವರು ಆರೋಪಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ" ಎಂದು ಸುದ್ದಿಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ, ಕೆಲವೊಂದು ಪ್ರಶ್ನೆಗಳನ್ನು ಸರಕಾರಕ್ಕೆ ಕೇಳಿದ್ದಾರೆ. ಅದು ಹೀಗಿದೆ:

ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ? ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ?

ಮಾದಕ‌ವಸ್ತು ಸೇವನೆ/ ಮಾರಾಟ

ಮಾದಕ‌ವಸ್ತು ಸೇವನೆ/ ಮಾರಾಟ

ಮಾದಕ‌ವಸ್ತು ಸೇವನೆ/ ಮಾರಾಟದ ಆರೋಪಿಗಳ ವಿರುದ್ಧ @CMofKarnataka ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ @BJP4Karnataka ಜೊತೆ ಸಂಬಂಧ ಇದೆಯೆಂದು ಹೇಳಲಾಗುತ್ತಿದ್ದು, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡಬಾರದು.

ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ

ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ

ಕಳೆದ 10 ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಸೇವನೆ/ಮಾರಾಟದ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ? ಅವರ ಹೆಸರುಗಳೇನು? ಶಿಕ್ಷೆಯ ಪ್ರಮಾಣ ಎಷ್ಟು? ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತಿವೆ? ಈ ಎಲ್ಲ ವಿವರ ಕೇಳಿ ಗೃಹ ಸಚಿವ @BSBommai ಅವರಿಗೆ ಪತ್ರ ಬರೆದಿದ್ದೇನೆ.

ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಶಾಮೀಲು

ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಶಾಮೀಲು

ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಶಾಮೀಲಾಗಿರುವ ಆರೋಪಗಳಿವೆ. ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ? ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ?

ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕಾಗುತ್ತದೆ

ಎನ್ ಡಿಪಿಎಸ್ ಕಾಯ್ದೆಯ ಪ್ರಕಾರ ಮಾದಕವಸ್ತುಗಳ ಸೇವನೆ/ಮಾರಾಟ ನಿಯಂತ್ರಣಕ್ಕಾಗಿ ಜಿಲ್ಲೆ,ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕಾಗುತ್ತದೆ. ಇಂತಹ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ?

ಈ ಸಮಿತಿಗಳ ಸಭೆಗಳು ಎಷ್ಟು ನಡೆದಿವೆ ಮತ್ತು ಏನು ಕ್ರಮಕೈಗೊಳ್ಳಲಾಗಿದೆ?
ಮಕ್ಕಳ ತಂದೆ-ತಾಯಿಗಳಿಂದ ರಹಸ್ಯವಾಗಿ ಮಾಹಿತಿ ಪಡೆಯುವ ವ್ಯವಸ್ಥೆ

ಮಕ್ಕಳ ತಂದೆ-ತಾಯಿಗಳಿಂದ ರಹಸ್ಯವಾಗಿ ಮಾಹಿತಿ ಪಡೆಯುವ ವ್ಯವಸ್ಥೆ

ರಾಜ್ಯದಲ್ಲಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಕ್ಕಿರುವ ಮಕ್ಕಳ ತಂದೆ-ತಾಯಿಗಳಿಂದ ರಹಸ್ಯವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ಇದೆಯೇ? ಇಂತಹ ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಕೈಗೊಂಡ ಕ್ರಮಗಳೇನು?

ರಾಜ್ಯದಲ್ಲಿ ಮಾದಕ ವಸ್ತು ವ್ಯಸನಕ್ಕೆ ಬಲಿಯಾದವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ? ಎಷ್ಟು ಜನ ವ್ಯಸನದಿಂದ ಮುಕ್ತರಾಗಿದ್ದಾರೆ? ಎಷ್ಟು ಜನ ವ್ಯಸನಿಗಳಾಗಿದ್ದಾರೆ ಮತ್ತು ಎಷ್ಟು ಜನ ಸಾವಿಗೀಡಾಗಿದ್ದಾರೆ? @BSBommai @CMofKarnataka #DrugsMukthaKarnataka

English summary
Drugs: Opposition Leader Siddaramaiah Tweet Demanding Culprit Should Be Punished,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X