ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಸಿಸಿಬಿ ತನಿಖೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹತ್ವದ ಹೇಳಿಕೆ

|
Google Oneindia Kannada News

ಬೆಂಗಳೂರು, ಸೆ 18: ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಡ್ರಗ್ಸ್ ಮಾಫಿಯಾ ಮತ್ತು ಸಿಸಿಬಿ ವಿಚಾರಣೆಯ ಸಂಬಂಧ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ನೀಡಿದ್ದಾರೆ.

ಅವರ ನಿವಾಸದಲ್ಲಿ ಮಾತನಾಡುತ್ತಿದ್ದ ಡಿಕೆಶಿ,"ಸಿಸಿಬಿ ಅಧಿಕಾರಿಗಳು ನಡೆಸುವ ತನಿಖೆಯಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ"ಎಂದಿರುವ ಅವರು, ತನಿಖೆ ಸರಿಯಾದ ದಾರಿಯಲ್ಲಿ ಸಾಗಲಿ ಎಂದು ಹೇಳಿದ್ದಾರೆ.

ಡ್ರಗ್ಸ್ ಪ್ರಕರಣ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್ಡ್ರಗ್ಸ್ ಪ್ರಕರಣ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್

"ಸುಮ್ಮನೇ ಪೊಲೀಸ್ ಅಧಿಕಾರಿಗಳು ಯಾರಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವುದಿಲ್ಲ. ಅವರಿಗಿರುವ ಖಚಿತ ಮಾಹಿತಿಯನ್ನಾಧರಿಸಿ ವಿಚಾರಣೆಗೆ ಕರೆಯುತ್ತಾರೆ. ವಿಚಾರಣೆಗೆ ಕರೆದಾಗ ಹೋಗುವುದು ಕರ್ತವ್ಯ"ಎಂದು ಡಿಕೆಶಿ ಅಭಿಪ್ರಾಯ ಪಟ್ಟಿದ್ದಾರೆ.

Drugs: CCB enquiry Should Go In Right Direction, Said, KPCC President DK Shivakumar Statement

"ಸಿಸಿಬಿ ಅಧಿಕಾರಿಗಳಿಗೆ ಯಾರ ಮೇಲೆಲ್ಲಾ ಅನುಮಾನವಿದೆಯೋ ಎಲ್ಲರನ್ನೂ ಕರೆದು ತನಿಖೆ ನಡೆಸಲಿ. ಇದರಲ್ಲಿ ತಪ್ಪೇನಿಲ್ಲ, ಯಾರು ತಪ್ಪು ಮಾಡುತ್ತಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

"ನನ್ನ ಅಭಿಪ್ರಾಯ ಏನಂದರೆ ಸಿಸಿಬಿ ಅಧಿಕಾರಿಗಳು ಒತ್ತಡಕ್ಕೆ ಬೀಳಬಾರದು, ಜಗ್ಗಲೂ ಬಾರದು. ರಸ್ತೆಯಲ್ಲಿ ಹೋಗುವವರು ನೂರೆಂಟು ಮಾತನಾಡುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು, ಉತ್ತರಿಸಲೂ ಬಾರದು"ಎಂದು ಡಿಕೆಶಿ ಹೇಳಿದ್ದಾರೆ.

ಡ್ರಗ್ಸ್: ಮಹಾಲಯ ಅಮಾವಾಸ್ಯೆಯ ದಿನದಂದು ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್ಡ್ರಗ್ಸ್: ಮಹಾಲಯ ಅಮಾವಾಸ್ಯೆಯ ದಿನದಂದು ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್

Recommended Video

ಶಾಲೆಗಳಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ | Oneindia Kannada

"ಜಮೀರ್ ಅಹ್ಮದ್ ಒಬ್ಬ ಜವಾಬ್ದಾರಿಯುತ ಶಾಸಕ. ಕೊಲಂಬೋಗೆ ಅವರು ಹೋಗಿರುವುದು ಅವರ ವೈಯಕ್ತಿಕ ವಿಚಾರ. ಅವರ ದುಡ್ಡಿನಲ್ಲಿ ಅಮೆರಿಕಾಗಾದರೂ ಹೋಗಲಿ, ಲಾಸ್ ವೇಗಾಸ್ ಗೆ ಬೇಕಾದರೂ ಹೋಗಲಿ"ಎಂದು ಜಮೀರ್ ಅವರನ್ನು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

English summary
Drugs: CCB enquiry Should Go In Right Direction, Said, KPCC President DK Shivakumar Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X