• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಡ್ರೋನ್" ಬಳಸಿ ಬೆಳೆ ಪರಿಸ್ಥಿತಿ ಸರ್ವೆ : ಸಚಿವ ಶಿವಶಂಕರರೆಡ್ಡಿ

By Mahesh
|

ಬೆಂಗಳೂರು, ಆಗಸ್ಟ್ 8: ರಾಜ್ಯದಲ್ಲಿ ರೈತರು ಬೆಳೆದಿರುವ ಬೆಳೆಗಳ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು 'ಡ್ರೋನ್' ಮೂಲಕ ಸರ್ವೆಮಾಡಲು ಸರ್ಕಾರ ಚಿಂತಿಸಿದ್ದು ಡ್ರೋನ್ ಮೂಲಕ ಒಂದು ದಿನದಲ್ಲಿ ಒಂದು ಸಾವಿರ ಎಕರೆ ಪ್ರದೇಶಗಳಲ್ಲಿನ ಬೆಳೆ ಪರಿಸ್ಥಿತಿಯನ್ನು ಸರ್ವೆ ಮಾಡಬಹುದಾಗಿದೆ ಎಂದು ಕೃಷಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಅವರು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ನಗರದಲ್ಲಿ ಜನವರಿ ತಿಂಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳ ಏರ್ಪಡಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕೃಷಿ ಪ್ರಧಾನವಾದ ಕಸುಬಾಗಿದ್ದು, ಒಟ್ಟು ಸುಮಾರು 103 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವಿರುತ್ತದೆ. ರಾಜ್ಯದಲ್ಲಿ ಸುಮಾರು 78 ಲಕ್ಷ ರೈತ ಕುಟುಂಬಗಳು ಕೃಷಿಯಲ್ಲಿ ತೊಡಗಿದ್ದು, ಈ ಪೈಕಿ ಸುಮಾರು 49 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ರಾಜ್ಯದಲ್ಲಿ ಶೇ 65 ರಷ್ಟು ಮಳೆಯಾಶ್ರಿತ ಮತ್ತು ಶೇ 35 ರಷ್ಟು ನೀರಾವರಿ ಕೃಷಿ ಪ್ರದೇಶವಿರುತ್ತದೆ. ಆಹಾರ ಉತ್ಪಾದನೆಯಲ್ಲಿ ರಾಜ್ಯವು 5ನೇ ಸ್ಥಾನದಲ್ಲಿದೆ.

ಮುಂಗಾರು ಹಂಗಾಮಿಗೆ ವಿವಿಧ ಬಿತ್ತನೆ ಬೀಜಗಳ ಬೇಡಿಕೆ 8.60 ಲಕ್ಷ ಕ್ವಿ ಗಳಷ್ಟು ಆಗಿದ್ದು, ಇದಕ್ಕೆ ಅನುಗುಣವಾಗಿ 7.97 ಲಕ್ಷ ಕ್ವಿ. ದಾಸ್ತಾನು ಲಭ್ಯವಿದ್ದು ಇದುವರೆವಿಗೂ 3.60 ಲಕ್ಷ ಕ್ವಿ. ವಿರಿಸಲಾಗಿರುತ್ತದೆ ಹಾಗೂ 4.30 ಲಕ್ಷ ಕ್ವಿ. ದಾಸ್ತಾನು ಇರುತ್ತದೆ.

13 ಜಿಲ್ಲೆಗಳಲ್ಲಿ ಮಳೆ ಕೊರತೆ

13 ಜಿಲ್ಲೆಗಳಲ್ಲಿ ಮಳೆ ಕೊರತೆ

ಮುಂಗಾರು ಹಂಗಾಮಿಗೆ ವಿವಿಧ ರಸಗೊಬ್ಬರಗಳ ಬೇಡಿಕೆ 21.87 ಲಕ್ಷ ಮೆ. ಟನ್ ಗಳಾಗಿದ್ದು, 14.84 ಲಕ್ಷ ಮೆ. ಟನ್ ಗಳು ಸರಬರಾಜಾಗಿದ್ದು, 5.32 ಲಕ್ಷ ಮೆ. ಟನ್‍ಗಳಷ್ಟು ದಾಸ್ತಾನು ಖಾಕಿ ಇರುತ್ತದೆ. ರಾಜ್ಯದಲ್ಲಿ ಇದುವರೆವಿಗೆ 13 ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿದು, ಈ ಪೈಕಿ 10 ಜಿಲ್ಲೆಗಳು ಉತ್ತರ ಒಳನಾಡಿನಲ್ಲಿ 3 ಜಿಲ್ಲೆಗಳು ದಕ್ಷಿಣ ಒಳನಾಡಿನಲ್ಲಿ ಇರುತ್ತದೆ. (ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಬೀದರ್, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ)


ಜುಲೈ ಅಂತ್ಯದವರೆಗೆ ಸರಾಸರಿ ಬಿತ್ತನೆ ವಿಸ್ತೀರ್ಣ 46.96 ಲಕ್ಷ ಹೆ. ಆಗಿದ್ದು, ಬಿತ್ತನೆಯಾಗದ ಪ್ರದೇಶವು 28.41 ಲಕ್ಷ ಹೆ. ಆಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಇನ್ನು 21.04 ಲಕ್ಷ ಹೆ. ಬಿತ್ತನೆಯಾಗುವ ಸಂಭವವಿದ್ದು, 8.07 ಹೆಕ್ಟರ್. ಪರ್ಯಾಯ ಬೆಲೆ ಯೋಜನೆಗೆ ಬರುವುದೆಂದು ಅಂದಾಜಿಸಲಾಗಿದೆ.

ಪರ್ಯಾಯ ಬೆಳೆ ಯೋಜನೆ

ಪರ್ಯಾಯ ಬೆಳೆ ಯೋಜನೆ

ಪರ್ಯಾಯ ಬೆಳೆ ಯೋಜನೆಗೆ ಅಂದಾಜಿಸಿದ ವಿಸ್ತೀರ್ಣವಾದ 8.07 ಲಕ್ಷ ಹೆ.ಗೆ ಜಿಲ್ಲಾವಾರು/ತಾಲ್ಲೂಕುವಾರು ಹಾಗೂ ಹೋಬಳಿವಾರು ಪರ್ಯಾಯ ಬೆಳೆ ಯೋಜನೆಯನ್ನು ಈಗಾಗಲೇ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ.

ಕೃಷಿ ಇಲಾಖೆಯು ಕಡಿಮೆ ನೀರು ಬೇಡುವ ಬೆಳೆಗಳನ್ನು (ಉದಾ: ರಾಗಿ, ಸೂರ್ಯಕಾಂತಿ ತೃಣಧಾನ್ಯಗಳು ಹಾಗೂ ದ್ವಿದಳಧಾನ್ಯಗಳು) ಬೆಳೆಯಲು ಅಗತ್ಯವಾದ ಯೋಜನೆಯನ್ನು ಸಿದ್ಧಪಡಿಸಿದ್ದು ಜಾರಿಗೊಳಿಸುತ್ತಿದೆ. ಇದರಿಂದ ಸಂಭವನೀಯ ಬೆಳೆ ನಷ್ಟವನ್ನು ಗಮನಾರ್ಹ ಪ್ರಮಾಣದಲ್ಲಿ ತಡೆಯಲು ಸಾಧ್ಯವಿದೆ.

ಪರ್ಯಾಯ ಬೆಳೆ ಯೋಜನೆಯ ವಿಸ್ತೀರ್ಣಕ್ಕೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸಮರ್ಪಕವಾಗಿ ಮುಂಗಡವಾಗಿ ದಾಸ್ತಾನು ಮಾಡುವಲ್ಲಿ ಎಲ್ಲಾ ಕ್ರಮ ಜರುಗಿಸಲಾಗಿದೆ.

2018 ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ

2018 ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ

2018 ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಒಟ್ಟಾರೆ 2.16 ಲಕ್ಷ ಹೆ. ವಿಸ್ತೀರ್ಣದಲ್ಲಿ ಬೆಳೆಗಳು ಬಾಡುತ್ತಿರುವ ಬಗ್ಗೆ ವರದಿಯಾಗಿರುತ್ತದೆ. (ಪ್ರಮುಖವಾಗಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಸುಕಿನಜೋಳ, ಜೋಳ, ಸಜ್ಜೆ, ಹೆಸರು, ಹತ್ತಿ, ಆಲಸಂದೆ ಬೆಳೆಗಳು ಮಳೆ ಕೊರತೆಯಿಂದ ಬಾಡುತ್ತಿರುತ್ತವೆ). ಹೆಚ್ಚಿನ ಮಳೆಯಿಂದಾಗಿ 8 ಜಿಲ್ಲೆಗಳಲ್ಲಿ 6309 ಹೆ. ಪ್ರದೇಶದಲ್ಲಿ (ಭತ್ತ, ಉದ್ದು, ಹೆಸರು, ಕ್ಬು, ಮುಸುಕಿನಜೋಳ, ನೆಲಗಡಲೆ, ಸೋಯಅವರೆ ಮತ್ತು ಹತ್ತಿ) ವಿವಿಧ ಬೆಳೆಗಳು ಹಾನಿಗೊಳಗಾಗಿರುತ್ತವೆ.

ಬಿದಿರು ಕೃಷಿಗೆ ಆದ್ಯತೆ

ಬಿದಿರು ಕೃಷಿಗೆ ಆದ್ಯತೆ

ರಾಜ್ಯದಲ್ಲಿ ನೀಲಗಿರಿ ಬೆಳೆ ಬೆಳೆಯುವುದು. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ನೀಲಗಿರಿ ಮರಕ್ಕೆ 'ಪರ್ಯಾಯ ಬೆಳೆಯಾದ' ಎಲಿಪೆಂಟ್ ಆಫ್ ಬ್ಯಾಂಬೋ' ಮರ ಬೆಳೆಸಲು ಚಿಂತಿಸಲಾಗಿದ್ದು ಇದು ಲಾಭದಾಯಕ ಬೆಳೆಯೂ ಆಗಿದೆ. ಪ್ರಾಯೋಗಿಕವಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬ್ಯಾಂಬೋ ಮರ ಬೆಳೆಸಲಾಗುವುದು ಎಂದು ಹೇಳಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Agriculture minister Shivashankara reddy today said, Karnataka government had decided to use drone to survey agriculture crop condition.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more