ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಮದ್ಯ ಮಾರಾಟ ನಿಷೇಧ: ಮದ್ಯ ಸಂಗ್ರಹಕ್ಕೆ ಮುಂದಾದ ಗ್ರಾಹಕರು

By Nayana
|
Google Oneindia Kannada News

ಬೆಂಗಳೂರು, ಮೇ 10: ವಿಧಾನ ಸಭೆ ಚುನಾವಣೆ ಇನ್ನು ಎರಡು ದಿನ ಬಾಕಿ ಉಳಿದಿದೆ.ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆರಡು ದಿನ ಬಾಕಿ ಉಳಿದಿದೆ. ಗುರುವಾರ ಚುನಾವಣೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳುತ್ತಿದೆ. ಉಳಿದ ಅವಧಿಯಲ್ಲಿ ಅಭ್ಯರ್ಥಿಗಳು ಮನೆಮನೆ ಪ್ರಚಾರ ಹಾಗೂ ಅಂತಿಮ ಕ್ಷಣದ ಮತದಾರರ ಓಲೈಕೆ ಪ್ರಯತ್ನ, ತಂತ್ರಗಾರಿಕೆ ಆರಂಭವಾಗಲಿದೆ.

ನಗರಗಳಲ್ಲಿ ಮದ್ಯ ನಿಷೇಧ ಮಾಡಲಾಗುವ ಹಿನ್ನೆಲೆಯಲ್ಲಿ ಪಾಮಪ್ರಿಯರು ಕಳೆದೆರೆಡು ದಿನಗಳಿಂದ ಮದ್ಯ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಆದರೆ ಅಧಿಕ ಮದ್ಯ ಮಾರಾಟ ಮಾಡಿದರೆ ಬಾರ್‌ಗಳಿಗೆ ಗುತ್ತಿಗೆ ರದ್ದಾಗುವ ಭೀತಿಯ ತೂಗುಗತ್ತಿ ಕಾಡುತ್ತಿದೆ.

ಮತದಾನಕ್ಕೂ 48 ಗಂಟೆ ಮೊದಲು ಕರ್ನಾಟಕದಲ್ಲಿ ಮದ್ಯ ನಿಷೇಧ ಮತದಾನಕ್ಕೂ 48 ಗಂಟೆ ಮೊದಲು ಕರ್ನಾಟಕದಲ್ಲಿ ಮದ್ಯ ನಿಷೇಧ

ಚುನಾವಣೆ ಸಂದರ್ಭದಲ್ಲಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಗಾಗಲೇ ಮೇ 10 ಗುರುವಾರ ಸಂಜೆ 5 ಗಂಟೆಯಿಂದ ಮೇ 12ಶನಿವಾರ ಮಧ್ಯರಾತ್ರಿ ವರೆಗೆ ಮದ್ಯವನ್ನು ನಿಷೇಧ ಮಾಡಲಾಗಿದೆ. ಅಲ್ಲದೆ ಮದ್ಯ ಮಾರಾಟದ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದು ಪಾನಪ್ರಿಯರನ್ನು ಹಾಗೂ ಮಾರಾಟಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

Drinkers are dumping liquor because if election code of conduct

ಆಯೋಗದ ಕ್ರಮ: ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಎಷ್ಟು ಮದ್ಯ ಮಾರಾಟ ಮಾಡಲಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಅಬಕಾರಿ ಇಲಖೆಯಿಂದ ಮದ್ಯ ನೀಡುತ್ತಿದ್ದು, ಅದೇ ಪ್ರಮಾಣದಲ್ಲಿ ಮಾರಾಟ ಮಾಡಬೇಕು ಎಂದಬ ಆದೇಶದ ಹಿನ್ನೆಲೆಯಲ್ಲಿ ಅಂಗಡಿಯವರೆಗೂ ಮಾರಾಟಕ್ಕೆ ತೊಂದರೆಯಾಗಿದೆ.

ಚುನಾವಣೆಗೆ ಬೇಡಿಕೆ: ಕಳೆದೆ 15 ದಿನಗಳಿಂದ ಮದ್ಯದ ಮಾರಾಟ ಹೆಚ್ಚಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 20 ಲಕ್ಷ ರೂ ಮದ್ಯ ಮಾರಾಟವಾಗಿತ್ತು. ಈ ವರ್ಷ ಅಷ್ಟೇ ಮಾರಾಟವಾಗಬೇಕು ಎಂದು ಅಬಕಾರಿ ಇಲಾಖೆಯವರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

English summary
Due to election code of conduct there is bar on liquor sale. So people are well in advance dumping the liquor from shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X