ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ರೌಪದಿ ಮುರ್ಮು ರಾಷ್ಟ್ರಪತಿ, ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ: ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಜೂ.21: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ತಿಳಿಸಿದ್ದಾರೆ.

Draupadi Murmu elected as the 15th President of India: Karnataka leaders reactions

ದೇಶ ಅಭಿವೃದ್ಧಿಯ ಉತ್ತುಂಗಕ್ಕೇರಲಿ

"ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿ ಹೊಸ ದಾಖಲೆ ಬರೆದ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜದ ಕೆಳಸ್ತರದಿಂದ ಬಂದು ರಾಷ್ಟ್ರದ ಪರಮೋನ್ನತ ಹುದ್ದೆಯನ್ನು ಅವರು ಅಲಂಕರಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮುಂಬರುವ ದಿನಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕರ್ನಾಟಕದ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿ, ಅವರ ಆಡಳಿತ ಕಾಲದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೇರಲಿ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ರಾಷ್ಟ್ರಪತಿ ಚುನಾವಣೆಯಂದು ಪ್ರಜಾಪ್ರಭುತ್ವ ಗೆದ್ದಿದೆ. ಭಾರತದ ಅತ್ಯಂತ ಉನ್ನತವಾದ ಸ್ಥಾನ ರಾಷ್ಟ್ರಪತಿ ಸ್ಥಾನ. ಆ ಸ್ಥಾನಕ್ಕೆ ಹಿಂದುಳಿದ ಪ್ರದೇಶದಿಂದ ಬಂದ ಒಬ್ಬ ಮಹಿಳೆ ಅತ್ಯುನ್ನತ ಹುದ್ದೆಗೇರುವುದು ಪ್ರಜಾಪ್ರಭುತ್ವದ ಶಕ್ತಿ. ಸಮಾಜದ ಕಟ್ಟ ಕಡೆಯ ವರ್ಗದವರಿಗೂ ಕೂಡ ಈ ದೇಶದ ಆಡಳಿತದಲ್ಲಿ ಅವಕಾಶವಿದೆ ಎನ್ನುವುದನ್ನು ಚುನಾವಣೆ ತೋರಿಸುತ್ತದೆ ಎಂದರು.

ನಮ್ಮ ಪ್ರಧಾನಮಂತ್ರಿ ನರೇಂದ್ರಮೋದಿಯವರ ನಿರ್ಣಯ, ಪಕ್ಷದ ಅಧಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರ ಸರ್ವ ರೀತಿಯ ಪ್ರಯತ್ನ ಇದಕ್ಕೆ ಕಾರಣ. ನಿರೀಕ್ಷೆಗಿಂತ ಹೆಚ್ಚಿನ ಮತ ಬಂದಿವೆ. ಬಿಜೆಪಿ , ಎನ್.ಡಿ.ಎ ಪಕ್ಷಗಳಲ್ಲದೆ ವಿರೋಧ ಪಕ್ಷಗಳು ಕೂಡ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಈ ಉನ್ನತ ಸ್ಥಾನ ಸಿಗಬೇಕೆನ್ನುವುದನ್ನು ಬಹಿರಂಗವಾಗಿ ಹೇಳಿವೆ. ರಾಜಕೀಯವಾಗಿ ವಿಭಿನ್ನ ನಿಲುವು ಮತ್ತು ತತ್ವಗಳಿರುವ ಪಕ್ಷಗಳೂ ಕೂಡ ಒಂದಾಗಿರುವದು, ಅವರ ವ್ಯಕ್ತಿತ್ವಕ್ಕಾಗಿ. ಸುದೀರ್ಘ ಆಡಳಿತದ ಅನುಭವವಿದೆ.

ಮುನಿಸಿಪಾಲಿಟಿ ಅಧ್ಯಕ್ಷರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಾಗೂ ರಾಜ್ಯಪಾಲರಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಅನುಭವ ಎಲ್ಲರಿಗೂ ಮೆಚ್ಚುಗೆಯಾಗಿದೆ. ಕೆಲವೇ ಕೆಲವು ಪಕ್ಷಗಳನ್ನು ಬಿಟ್ಟರೆ ಬಹುತೇಕವಾಗಿ ಎಲ್ಲರೂ ಬೆಂಬಲವ ನೀಡಿದ್ದಾರೆ. ನಮಗೆ ಬಂದಿರುವ ಮಾಹಿತಿಯ ಪ್ರಕಾರ ಸದ್ಯಕ್ಕೆ ಇನ್ನೂ ಮೂರು ಸುತ್ತಿನ ಎಣಿಕೆ ಬಾಕಿ ಇದೆ. 5, 77, 777 ಮತಗಳು 68.87 ದ್ರೌಪದಿಯವರಿಗೆ ಬಂದಿದೆ. ಯಶವಂತ್ ಸಿನ್ಹಾ ಅವರು 2, 61, 062 ಮತಗಳು ಬಂದಿವೆ.

ಈ ಸಂದರ್ಭದಲ್ಲಿ ಕರ್ನಾಟಕ ಜನತೆ ಹಾಗೂ ನಮ್ಮ ಜನಪ್ರತಿನಿಧಿಗಳ ಪರವಾಗಿ ದ್ರೌಪದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ನೀಡಿದ ಬೆಂಬಲಕ್ಕಾಗಿ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಾದ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರ್ಣಯವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ, ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರದ ಸಮಾರಂಭದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. ರಾಷ್ಟ್ರ ಹಾಗೂ ರಾಜ್ಯದ ಪದಾಧಿಕಾರಿಗಳೂ ಕೂಡ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಪಕ್ಷದ ನಿಲುವನ್ನು ಇಡೀ ದೇಶ ಒಪ್ಪಿಕೊಂಡಿದೆ. ನರೇಂದ್ರ ಮೋದಿಯವರ ನಿಲುವಿಗೆ ದೇಶ ಸಮರ್ಥನೆ ಮಾಡಿಕೊಂಡಿರುವುದು ಪಕ್ಷದ ಸರ್ವ ಕಾರ್ಯಕರ್ತರಿಗೂ ಸಂತೋಷವನ್ನು ತಂದಿದೆ.

ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಭಕ್ತವತ್ಸಲಂ ಅವರ ಸಮಿತಿ ಸಲ್ಲಿಸಿರುವ ವರದಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಲಾಗುತ್ತದೆ. ನ್ಯಾಯಾಲಯ ನೀಡುವ ನಿರ್ದೇಶನದಂತೆ ಮುಂದಿನ ತೀರ್ಮಾನಗಳಾಗುತ್ತವೆ. ಜುಲೈ 28 ರೊಳಗೆ ಕ್ಷೇತ್ರಗಳ ಪುನರ್ ವಿಂಗಡನೆಯಾಗಬೇಕು ಹಾಗೂ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಲು ಸೂಚಿಸಲಾಗಿತ್ತು ಎಂದರು.

ರಾಜಕೀಯ ದಿವಾಳಿತನ
ಕಾಂಗ್ರೆಸ್ ನಾಯಕರು ಕಣ್ಣಮುಂದೇ ತಾವೇ ಕಾರ್ ತೆಗೆದುಕೊಂಡು ಬಂದು ಸುಡುವುದು ಇಡೀ ದೇಶದಲ್ಲಿ ನಗೆಪಾಟಲಾಗಿದೆ. ಅವರೇನು ಬಿಂಬಿಸಲು ಹೊರಟಿದ್ದಾರೆ ಎಂದು ತಿಳಿಯುತ್ತಿಲ್ಲ. ರಾಜಕೀಯ ದಿವಾಳಿತನ. ತಮ್ಮದೇ ಕಾರು ತಂದು ಪ್ರತಿಭಟಿಸಿ ಸುಡುವುದನ್ನು ಎಲ್ಲೂ ಕೇಳಿರಲಿಲ್ಲ. ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಹಿರಿಯರಿದ್ದಾರೆ, ಅನುಭವಸ್ಥರು. ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರ ವಿಚಾರಗಳನ್ನು ವಿಧಾನಸಭೆಯಲ್ಲಿ ಕೇಳುತ್ತಿರುತ್ತೇವೆ. ಸಾಮಾನ್ಯವಾಗಿ ರಮೇಶ್ ಕುಮಾರ್ ವಸ್ತುಸ್ಥಿತಿಯನ್ನು ಮಾತನಾಡುತ್ತಾರೆ. ಸತ್ಯವನ್ನು ಆಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಮುರ್ಮು ಆಯ್ಕೆ: ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸಂಭ್ರಮಾಚರಣೆ

ಎನ್‍ಡಿಎ ಮತ್ತು ವಿವಿಧ ಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಮತ ಎಣಿಕೆ ವೇಳೆ ಭಾರಿ ಮುನ್ನಡೆ ಲಭಿಸಿದ ಬಗ್ಗೆ ತಿಳಿದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಇಂದು ಸಂಜೆ ಸಂಭ್ರಮಾಚರಣೆ ನಡೆಯಿತು.

Draupadi Murmu elected as the 15th President of India: Karnataka leaders reactions

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ ಮತ್ತು ಸಿದ್ದರಾಜು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಪರಸ್ಪರ ಸಿಹಿ ತಿನ್ನಿಸಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು. ಮುರ್ಮು ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಕುಣಿದು ಸಂಭ್ರಮದಲ್ಲಿ ಭಾಗಿಯಾದರು.

English summary
Chief Minister Basavaraja Bommai congratulated Draupadi Murmu as the 15th President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X