ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶುರು ಯತೀಂದ್ರ ಸಿದ್ದರಾಮಯ್ಯ ತಂತ್ರಗಾರಿಕೆ!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಫೆಬ್ರವರಿ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಪಕ್ಕಾ ರಾಜಕಾರಣಿಯಾಗಿ ಬದಲಾಗಿದ್ದಾರಾ..?

ಕಳೆದೊಂದು ವರ್ಷದಿಂದ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ವೀಕ್ಷಣೆ, ಮನೆಮನೆ ಭೇಟಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹೀಗೆ ಗುದ್ದಲಿ, ಹಾರೆ ಹಿಡಿದು ಫೋಟೋಗಳಿಗೆ ಫೋಸ್ ನೀಡುತ್ತಿದ್ದರು ಯತೀಂದ್ರ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲುವಿಗೆ ಅದೆಷ್ಟು ಅಡ್ಡಿಗಳೋ!ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲುವಿಗೆ ಅದೆಷ್ಟು ಅಡ್ಡಿಗಳೋ!

ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಮುಖಂಡರೂ ಆಗಿರುವ ಡಾ. ಎಸ್.ಯತೀಂದ್ರ ಈಗ ಪಕ್ಕಾ ರಾಜಕಾರಣಿಯಾಗಿ ಬದಲಾಗಿದ್ದಾರೆ ಎಂಬುದು ಅವರ ಕಾರ್ಯ ಚಟುವಟಿಕೆಯಿಂದ ತಿಳಿಯುತ್ತಿದೆ..

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲ್ಲುವುದು ಸುಲಭವಲ್ಲ! ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲ್ಲುವುದು ಸುಲಭವಲ್ಲ!

ಸದಾ ವರುಣಾ ಕ್ಷೇತ್ರದಲ್ಲೇ ಕಾಲ ಕಳೆಯುತ್ತಿದ್ದ ಇವರು ಇದೀಗ ತಂದೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾದ ಬಳಿಕ ಆ ಕಡೆ ಗಮನಹರಿಸುತ್ತಿರುವುದು ಕಾಣಿಸುತ್ತಿದೆ. ಒತ್ತಡದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಓಡಾಡುವುದು ಕಷ್ಟದ ಕೆಲಸವಾಗಿದೆ. ಜತೆಗೆ ಅಲ್ಲಿನ ಹಾಲಿ ಶಾಸಕ ಜಿ.ಟಿ.ದೇವೇಗೌಡರು ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಅಲ್ಲಿ ತಂತ್ರ, ಕುತಂತ್ರ ಎಲ್ಲವನ್ನೂ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ!

ಚಾಮುಂಡೇಶ್ವರಿಗೂ ಕಾಲಿಟ್ಟ ಯತೀಂದ್ರ

ಚಾಮುಂಡೇಶ್ವರಿಗೂ ಕಾಲಿಟ್ಟ ಯತೀಂದ್ರ

ವರುಣಾ ಕ್ಷೇತ್ರ ಅಪ್ಪನ ಕ್ಷೇತ್ರವಾಗಿರುವುದರಿಂದ ಅಲ್ಲಿ ಭೂಮಿ ಪೂಜೆ ಸೇರಿದಂತೆ ಯಾವುದೇ ಕಾರ್ಯಕ್ರಮ ಮಾಡಿದರೂ ನಡೆಯುತ್ತದೆ. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಂದೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಹಾರೆ ಹಿಡಿದು ಕಾಮಗಾರಿಗೆ ಭೂಮಿ ಪೂಜೆ ಮಾಡಲು ಹೋಗಿ ಅಲ್ಲಿನ ಹಾಲಿ ಶಾಸಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರಿಂದ ಧಮ್ಕಿ? ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರಿಂದ ಧಮ್ಕಿ?

ಬಿಜೆಪಿ, ಜೆಡಿಎಸ್ ಸದಸ್ಯರನ್ನು ಸೆಳೆಯುವ ಯತ್ನ

ಬಿಜೆಪಿ, ಜೆಡಿಎಸ್ ಸದಸ್ಯರನ್ನು ಸೆಳೆಯುವ ಯತ್ನ

ಆದರೆ ಇಷ್ಟೆಲ್ಲ ಆದರೂ ಸುಮ್ಮನಾಗದ ಯತೀಂದ್ರ ಸಿದ್ದರಾಮಯ್ಯ ತಮ್ಮ ಪ್ರಚಾರವನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದುವರೆಸಿದ್ದು, ಇದೀಗ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರಲ್ಲದೆ, ಆ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‍ ನತ್ತ ಸೆಳೆದುಕೊಳ್ಳುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ.

ಸಿಎಂ ಪುತ್ರ ಡಾ.ಯತೀಂದ್ರ ಮೇಲೆ ಅವ್ಯವಹಾರದ ತೂಗುಕತ್ತಿ!ಸಿಎಂ ಪುತ್ರ ಡಾ.ಯತೀಂದ್ರ ಮೇಲೆ ಅವ್ಯವಹಾರದ ತೂಗುಕತ್ತಿ!

ಕಾಂಗ್ರೆಸ್ ನತ್ತ ವಾಲುತ್ತಿದ್ದಾರಾ ಜನ?

ಕಾಂಗ್ರೆಸ್ ನತ್ತ ವಾಲುತ್ತಿದ್ದಾರಾ ಜನ?

ಇದರ ಆರಂಭ ಎನ್ನುವಂತೆ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಕಾನ್ಯ ಗ್ರಾಮದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ವೀರಶೈವ ಮುಖಂಡರು ಎನ್ನಲಾದ ಒಂದಷ್ಟು ಮಂದಿ ಕಾಂಗ್ರೆಸ್‍ ಗೆ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದು ಇದರಿಂದ ಜೆಡಿಎಸ್ ಮತ್ತು ಬಿಜೆಪಿಗೆ ಬಿಸಿ ಮುಟ್ಟಿದಂತಾಗಿದೆ.

ಇದರ ಪರಿಣಾಮವೇನೋ ದೇವರೇ ಬಲ್ಲ!

ಇದರ ಪರಿಣಾಮವೇನೋ ದೇವರೇ ಬಲ್ಲ!

ಇದೀಗ ಚಿಕ್ಕಕಾನ್ಯ ಗ್ರಾಮದ ಮಾಜಿ ಛೇರ್ಮೆನ್ ಕೆಂಪಣ್ಣ, ಮುಖಂಡರಾದ ಕೆಂಡಗಣ್ಣಪ್ಪ, ಗಂಗಾಧರ್ ಸೇರಿದಂತೆ ಹಲವರು ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್ ಮೆಲೆ ಮತ್ತು ಇತರ ಪಕ್ಷಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೋ ದೇವರೇ ಬಲ್ಲ!

English summary
Dr.Yathindra Siddaramaiah, son of chief minister of Karnataka Siddaramaiah, has started campaign for his father in Chamundeswari constituency in Mysuru. Siddaramaiah has already announced that he will contest from Chamundeshwari constituency in upcomming Karnataka assembly elections 2018.. His son likely to be contesting from Varuna constituency in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X