ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರೇ ಒಳಜಗಳ ಬಿಡಿ, ಕರ್ನಾಟಕವೊಂದೇ ಪುಸ್ತಕ ಓದಿ

By Mahesh
|
Google Oneindia Kannada News

ಬೆಂಗಳೂರು, ಮೇ.17: ಕರ್ನಾಟಕದಲ್ಲಿ ವಿಭಜನೆಯ ಪ್ರಯತ್ನ, ಕನ್ನಡಿಗರ ಮನಸ್ಸು ಒಡೆಯುವ ಹುನ್ನಾರ ಯತ್ನ ನಡೆದಿರುವ ಸಂದರ್ಭದಲ್ಲಿ ವಿಭಜನೆಯಿಂದ ಆಗಬಹುದಾದ ತೊಂದರೆಗಳ, ಅನಾಹುತಗಳ ಬಗ್ಗೆ ಹೆಚ್ಚೆಚ್ಚು ಕನ್ನಡಿಗರಲ್ಲಿ ಅರಿವು ತುಂಬುವ ಕಾರ್ಯವನ್ನು ಅಂಕಣಕಾರ ವಸಂತ್ ಶೆಟ್ಟಿ ಅವರು ಮಾಡಿದ್ದಾರೆ.

ವೆಬ್ ತಾಣ ಮೂಲಕ ಕರ್ನಾಟಕವೊಂದೇ ಎಂಬ ಪುಸ್ತಕವನ್ನು ನಿಮಗಾಗಿ ನೀಡುತ್ತಿದ್ದಾರೆ. ಮೊದಲ ಹೆಜ್ಜೆಯಾಗಿ, ಕರ್ನಾಟಕ ಯಾಕೆ ಒಂದಾಗಿರಬೇಕು, ಒಡೆದುಕೊಂಡರೆ ಎಲ್ಲ ಕನ್ನಡಿಗರು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಕನ್ನಡ ಪರ ಚಿಂತಕ ವಸಂತ ಶೆಟ್ಟಿ ಅವರು ಬರೆದಿರುವ ಕರ್ನಾಟಕವೊಂದೇ - ಒಡಕು ತರಲಿದೆ ಕೆಡುಕು ಅನ್ನುವ ಹೊತ್ತಗೆಯನ್ನು ಈ ತಾಣದ ಮೂಲಕ ಓದಲು ಅವಕಾಶ ಕಲ್ಪಿಸಲಾಗಿದೆ. ಕನ್ನಡಿಗರ ಒಗ್ಗಟ್ಟಿನ ಬಗ್ಗೆ ಕಾಳಜಿ ಇರುವ ಎಲ್ಲ ಕನ್ನಡಿಗರು ಈ ತಾಣವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ನೆರವಾಗಬಹುದು.

ನಮ್ಮ ಹಿರಿಯರ ದಶಕಗಳ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಕನ್ನಡ ನಾಡು ಒಂದಾಯಿತು. ಸರಿ ಸುಮಾರು 750 ವರ್ಷಗಳ ಕಾಲ ಬೇರೆ ಬೇರೆ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾದದ್ದು ಕರ್ನಾಟಕದ ಏಕೀಕರಣವಾದ ಮೇಲೆ. ಇಂತಹ ಕನ್ನಡ ನಾಡನ್ನು ಒಡೆಯಬೇಕು ಅನ್ನುವ ದನಿಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ.

Download Karnatakavonde book on Integrity for Karnataka by Vasanth Shetty

ಎಲ್ಲ ಸಮಸ್ಯೆಗಳಿಗೂ ರಾಜ್ಯ ಒಡೆಯುವುದೇ ಪರಿಹಾರ ಅನ್ನುವ ವಾದವೊಂದನ್ನು ಮುನ್ನೆಲೆಗೆ ತರುವ ವ್ಯವಸ್ಥಿತ ಪ್ರಯತ್ನಗಳಾಗುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಒಡೆದುಕೊಂಡರೆ ಉತ್ತರ, ದಕ್ಷಿಣವೆನ್ನದೆ ಎಲ್ಲ ಭಾಗದ ಕನ್ನಡಿಗರು ಎದುರಿಸಬಹುದಾದ ಸಮಸ್ಯೆಗಳೇನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ದೊಡ್ಡದಾಗಿರಬೇಕಾದ ಅಗತ್ಯವೇನು, ಏಳಿಗೆಗೂ ಜನಪ್ರತಿನಿಧಿಗಳಿಗೂ ಇರುವ ಸಂಬಂಧವೇನು, ತೆಲಂಗಾಣ ರಾಜ್ಯವಾದ ಮೇಲೆ ತೆಲುಗರ ನಡುವೆ ಉಂಟಾಗಿರುವ ತೀವ್ರ ಒಡಕಿನ ಪರಿಣಾಮಗಳೇನು ಅನ್ನುವ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ "ಕರ್ನಾಟಕವೊಂದೇ" ಅನ್ನುವ ಈ ತಾಣ.

ಕನ್ನಡಿಗರ ನಡುವಿರುವ ಯಾವುದೇ ಸಮಸ್ಯೆಯನ್ನು ಕನ್ನಡಿಗರೇ ಕೂತು ಮಾತನಾಡಿ ಬಗೆಹರಿಸಿಕೊಳ್ಳುವುದನ್ನು ಒತ್ತಿ ಹೇಳುವ, ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಒಡೆದುಕೊಳ್ಳದಂತೆ ಕಾಯಬೇಕಾದ ಅಗತ್ಯದ ಬಗ್ಗೆ ಹಲವು ವಿಚಾರಗಳು, ದಾಖಲೆಗಳು, ಅಂಕಿ ಅಂಶಗಳು, ಬರಹಗಳು, ಚರ್ಚೆಗಳು ಲಭ್ಯವಾಗಲಿವೆ. ಕರ್ನಾಟಕವೊಂದೇ ವೆಬ್ ತಾಣದ ಲಿಂಕ್ ನಲ್ಲಿ ಎಂಟು ಅಧ್ಯಾಯಗಳ ಪುಸ್ತಕದ ಪ್ರತಿ ಲಭ್ಯವಿದೆ.

English summary
The formation of the state of Mysore was the culmination of a movement that had started several decades earlier during British rule when the first demands for a state based on Kannada demographics had been made. Vasanth Shetty's Book "Karnatakavonde" on threat to Integrity for Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X