ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕಾಣಿಸಿಕೊಂಡ ಡಬಲ್ ಮ್ಯೂಟೆಂಟ್ ಕೊರೊನಾ ತಳಿ, ಆತಂಕ

|
Google Oneindia Kannada News

ಬೆಂಗಳೂರು, ಮೇ 11:ಕರ್ನಾಟಕದಲ್ಲೂ ಡಬಲ್ ಮ್ಯೂಟೆಂಟ್ ಕೊರೊನಾ ತಳಿ ಕಾಣಿಸಿಕೊಂಡಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್ ಮ್ಯೂಟೆಂಟ್ (ಬಿ.1.167) ಕೊರೊನಾ ತಳಿಯು ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಡಬಲ್ ಮ್ಯೂಟೆಂಟ್ ವೈರಸ್ ಎಂದರೇನು?: ರೂಪಾಂತರವಾಗಿರುವ ಎರಡು ವೈರಸ್‌ಗಳು ಒಂದುಗೂಡಿರುವುದನ್ನು ಡಬಲ್ ಮ್ಯೂಟೆಂಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯ ವೈರಸ್'ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಲಾಕ್ ಡೌನ್: ಆರ್ಥಿಕ ಪ್ಯಾಕೇಜ್ ಘೋಷಿಸಲು ಸಿಎಂಗೆ ಎಎಪಿ ಆಗ್ರಹ ಲಾಕ್ ಡೌನ್: ಆರ್ಥಿಕ ಪ್ಯಾಕೇಜ್ ಘೋಷಿಸಲು ಸಿಎಂಗೆ ಎಎಪಿ ಆಗ್ರಹ

ಈ ಡಬಲ್ ಮ್ಯೂಟೆಂಟ್ ವೈರಸ್ ಲಸಿಕೆಯಿಂದಲೂ ರಕ್ಷಣೆ ಸಿಗದಂತೆ ಮಾಡಬಲ್ಲವು. ಜೊತೆಗೆ ಮೂಲ ವೈರಸ್‌ಗಿಂತ ಹೆಚ್ಚಾಗಿ ಹರಡಬಲ್ಲವು.
ಈ ಡಬಲ್ ಮ್ಯೂಟೆಂಟ್ ಕೊರೊನಾ ತಳಿಯು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮುಂಬೈನಲ್ಲಿ ಮೊದಲು ಪತ್ತೆಯಾಗಿತ್ತು. ನಂತರ ಇತರೆ ನಗರ ಹಾಗೂ ರಾಜ್ಯಗಳಿಗೂ ಹರಡಲು ಆರಂಭಿಸಿದೆ.

143 ಮಂದಿಯಲ್ಲಿ ಪತ್ತೆಯಾಗಿದೆ.

143 ಮಂದಿಯಲ್ಲಿ ಪತ್ತೆಯಾಗಿದೆ.

ಕರ್ನಾಟಕದಲ್ಲೂ B.1.617 ಮ್ಯುಟೇಟ್ ವೈರಸ್ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಈವರೆಗೂ 143 ಮಂದಿಯ ಮಾದರಿಯಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತ ರಾಜ್ಯಗಳಲ್ಲಿದೆ

ದಕ್ಷಿಣ ಭಾರತ ರಾಜ್ಯಗಳಲ್ಲಿದೆ

ಈ ನಡುವೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಡಬಲ್‌ ಮ್ಯುಟೆಂಟ್‌ ಮತ್ತು ಬ್ರಿಟನ್‌ ರೂಪಾಂತರಿ ಕೊರೊನಾ ತಳಿಯ ಹಾವಳಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಹೈದ್ರಾಬಾದ್‌ನಲ್ಲಿರುವ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ (ಸಿಸಿಎಂಬಿ) ವಿಜ್ಞಾನಿಗಳ ಪ್ರಕಾರ, ಈ ವರ್ಷಾರಂಭದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಇತರೆ ಮಾದರಿ ವೈರಸ್‌ಗೆ ಹೋಲಿಸಿದರೆ ಎನ್‌440ಕೆ ವೈರಸ್‌ ತಳಿ ಹೆಚ್ಚಾಗಿ ಹಬ್ಬುತ್ತಿರುವುದು ಕಂಡುಬಂದಿತ್ತು.

ಬ್ರಿಟನ್ ತಳಿ ಆವರಿಸಿದೆ

ಬ್ರಿಟನ್ ತಳಿ ಆವರಿಸಿದೆ

ಆದರೆ ಇತ್ತೀಚಿನ ದಿನಗಳಲ್ಲಿ ಎನ್‌440ಕೆ ವೈರಸ್‌ನ ಜಾಗವನ್ನು ಬಿ.1.617 ಮಾದರಿಯ ರೂಪಾಂತರಿ ತಳಿ ಮತ್ತು ಬ್ರಿಟನ್‌ ರೂಪಾಂತರಿ ತಳಿ ಹೆಚ್ಚಾಗಿ ಆಕ್ರಮಿಸಿಕೊಂಡಿದೆ ಎಂದು ಹೇಳಿದೆ. ಇನ್ನು ಈ ಡಬಲ್ ಮ್ಯೂಟೆಂಟ್ ಕೊರೊನಾ ವೈರಸ್ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು, ಬಿ.1.617 ಮ್ಯುಟೇಟ್ ವೈರಸ್ ಕೊರೊನಾ ತಳಿಯು ವಿಶ್ವಕ್ಕೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಹೇಳಿದೆ.

ಮೊದಲ ಅಲೆಯ ನಂತರದ ಪ್ರಭಾವ

ಮೊದಲ ಅಲೆಯ ನಂತರದ ಪ್ರಭಾವ

ಮೊದಲ ಅಲೆ ಮತ್ತು ಮೊದಲ ಅಲೆಯ ನಂತರದಲ್ಲಿ ಎನ್‌440ಕೆ ಹೆಚ್ಚಿನ ಪ್ರಭಾವ ಹೊಂದಿತ್ತು. ಆದರೆ 2ನೇ ಅಲೆಯಲ್ಲಿ ಬಿ.1.617 ಮಾದರಿಯ ರೂಪಾಂತರಿ ವೈರಸ್‌ ಹೆಚ್ಚು ಪ್ರಭಾವಶಾಲಿಯಾಗಿ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

Recommended Video

Corona ನಿನ್ನೆ ಒಂದೇ ದಿನ ಎಷ್ಟು ಬಲಿ ಪಡೆದಿದೆ ? | Oneindia Kannada

English summary
The SARS-CoV-2 virus’ ‘double mutant’ variant, first detected during the month of October last year in Mumbai, not only appears to be ‘taking over’ other virus variants across Karnataka to wreak havoc, but has also been declared as a Variant of Concern (VoC) by the World Health Organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X